ಇತ್ತೀಚೆಗೆ ರಿಲೀಸ್ ಆದ ಟಾಲಿವುಡ್ನ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ಧೂಳ್ ಎಬ್ಬಿಸಿರೋದು ನಿಮಗೆಲ್ಲ ಗೊತ್ತೆ ಇದೆ. ಸಿನಿಮಾದ ಬಗ್ಗೆ ಅಲ್ಲಲ್ಲಿ ಮಿಶ್ರ ಪ್ರತಿಕ್ರಿಯೆ ನಡುವೆಯೂ ‘ಪುಷ್ಪ-ದಿ ರೈಸ್’ ಕೋಟಿ ಕೋಟಿ ಹಣ ಬಾಚಿ ದಾಖಲೆ ಸೃಷ್ಟಿಸಿತ್ತು. ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕಾಂಬಿನೇಷನ್ಲ್ಲಿ ಮೂರನೇ ಬಾರಿಗೆ ಮೂಡಿಬಂದ ಈ ಸಿನಿಮಾ ಸಾಕಷ್ಟು ಸದ್ದು ಕೂಡ ಮಾಡಿತ್ತು.
ಸದ್ಯ ಪುಷ್ಪ ಸಿನಿಮಾ ಓಟಿಟಿ ವೇದಿಕೆಯಲ್ಲೂ ರಿಲೀಸ್ ಆಗಿದ್ದು, ಥಿಯೇಟರ್ ಗೆ ಬಂದು ಸಿನಿಮಾ ನೋಡದೆ ಇದ್ದ ಎಷ್ಟೋ ಮಂದಿ, ಓಟಿಟಿ ಮೂಲಕ ಸಿನಿಮಾವನ್ನು ನೋಡಿ ಆನಂದಿಸುತ್ತಿದ್ದಾರೆ. ಇನ್ನು ಪುಷ್ಪ ಸಿನಿಮಾದಷ್ಟೇ ಸಾಕಷ್ಟು ಕ್ರೇಜ್ ಸೃಷ್ಟಿ ಮಾಡಿದ್ದ ಌಪಲ್ ಬ್ಯೂಟಿ ಸಮಂತಾರ ‘ಹೂಂ ಅಂತೀಯಾ ಮಾವಾ’ ಕೂಡ ಸಿನಿಪ್ರಿಯರ ಮನ ಗೆದ್ದಿತ್ತು. ಸದ್ಯ ಓಟಿಟಿಯಲ್ಲಿ ಪುಷ್ಪ ತನ್ನ ಕ್ರೇಜ್ನ್ನು ಮುಂದುವರೆಸಿದ್ದು ಈ ಹೊತ್ತಲ್ಲಿ ಸಮಂತಾ ಸ್ಪೆಷಲ್ ಡ್ಯಾನ್ಸ್ಗೆ ತೆಗೆದುಕೊಂಡ ಸಂಭಾವನೆಯ ಬಗ್ಗೆ ಗಾಸಿಪ್ ಗಾಳಿಪಟ ಹಾರಾಡಲು ಶುರು ಮಾಡಿದೆ.