ಚೆನ್ನೈ: ಕೊರೊನಾ ಸೋಂಕಿನ ಪ್ರಕರಣಗಳು ಎರಿಕೆಯಾದ ಬೆನ್ನಲ್ಲೇ ಹಲವು ರಾಜ್ಯಗಳಲ್ಲಿ ಕಠಿಣ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಕಠಿಣ ಲಾಕ್​ಡೌನ್​ನಿಂದ ಕೊರೊನಾವನ್ನ ನಿಯಂತ್ರಣಕ್ಕೆ ತರಬಹುದು ಎಂಬುದು ಎಷ್ಟು ಸತ್ಯವೋ ದಿನಗೂಲಿಯನ್ನೇ ನಂಬಿಕೊಂಡ ಅದೆಷ್ಟೋ ಜನರು ಹಸಿವಿನಿಂದ ಸಂಕಷ್ಟಕ್ಕೊಳಗಾಗಿರುವುದೂ ಅಷ್ಟೇ ಸತ್ಯ. ಈ ಸಮಯದಲ್ಲಿ ಹಲವು ಸಂಘಸಂಸ್ಥೆಗಳು, ವಾಲಂಟಿಯರ್​ಗಳು ಮುಂದೆ ಬಂದು ಬಡವರಿಗೆ, ಕೂಲಿಕಾರ್ಮಿಕರಿಗೆ ಉಚಿತ ಆಹಾರ ನೀಡುತ್ತಿದ್ದಾರೆ.

ಈ ಮಧ್ಯೆ ತಮಿಳುನಾಡಿನ ತೂತುಕುಡಿಯ ಕೋವಿಲ್​ಪಟ್ಟಿಯ ಮುತ್ತುಪಾಂಡಿ ಎಂಬ ಹಣ್ಣಿನ ವ್ಯಾಪಾರಿಯೋರ್ವ ಸಹ ಹಸಿದವರಿಗಾಗಿ ತನ್ನಿಂದಾದ ಅಳಿಲು ಸೇವೆ ಮಾಡುತ್ತಿದ್ದಾರೆ. ತಮ್ಮ ಹಣ್ಣಿನ ಅಂಗಡಿಯ ಎದುರು ಪ್ರತಿದಿನ ಬಾಳೆಗೊನೆಗಳನ್ನ ನೇತು ಹಾಕುವ ಮುತ್ತುಪಾಂಡಿ ಅದರ ಜೊತೆಗೆ ಬೋರ್ಡ್ ಒಂದನ್ನೂ ಸಹ ನೇತು ಹಾಕ್ತಾರೆ. ಈ ಬೋರ್ಡ್​ನಲ್ಲಿ ನೀವು ಹಸಿದಿದ್ದರೆ ಈ ಬಾಳೆಹಣ್ಣನ್ನು ಉಚಿತವಾಗಿ ತೆಗೆದುಕೊಳ್ಳಿ.. ಆದರೆ ವೇಸ್ಟ್ ಮಾಡಬೇಡಿ ಎಂದು ಬರೆದಿಡುತ್ತಿದ್ದಾರೆ.

ಮುತ್ತುಪಾಂಡಿಯವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ವಲಸಿಗರು, ವೃದ್ಧರು, ಫೂಟ್​ಪಾತ್​ಗಳಲ್ಲೇ ಬದುಕುವವರು ಈ ಬಾಳೆಹಣ್ಣುಗಳನ್ನು ತಿಂದು ತಮ್ಮ ಹಸಿವು ನೀಗಿಸಿಕೊಳ್ತಿದ್ದಾರೆ.

The post ಅಂಗಡಿ ಎದುರು ಬಾಳೆಹಣ್ಣು ನೇತು ಹಾಕಿ ಹಸಿದವರ ಹೊಟ್ಟೆ ತುಂಬಿಸ್ತಿದ್ದಾರೆ ಈ ವ್ಯಾಪಾರಿ appeared first on News First Kannada.

Source: newsfirstlive.com

Source link