ಬಾಗಲಕೋಟೆ: ಜಿಲ್ಲೆಯಲ್ಲಿ ನಕಲಿ ಕೀಲಿ ಬಳಸಿ ವಾಹನ ಕದಿಯುತ್ತಿದ್ದ ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನ ಪೊಲೀಸರಯ ಬಂಧಿಸಿದ್ದಾರೆ. ರಬಕವಿ-ಬನಹಟ್ಟಿ ತಾಲೂಕಿನ ಹನಗಂಡಿ ಗ್ರಾಮದ ತನವೀರ ರಮಜಾನ್‌ಸಾಬ ಲಾಡಖಾನ(21), ಹಾಗೂ ಬನಹಟ್ಟಿಯ ಅಶೋಕ ಕಾಲನಿಯ ರಮಜಾನ್ ಇಸ್ಮಾಯಿಲಸಾಬ ನದಾಫ್(29) ಬಂಧಿತರು.

ಬಂಧಿತರಿಂದ 1.10ಲಕ್ಷ ಮೌಲ್ಯದ ಐದು ಬೈಕ್ ವಶಪಡಿಸಿಕೊಳ್ಳಲಾಗಿದ್ದು ಇವರು ಬಾಗಲಕೋಟೆ, ವಿಜಯಪುರ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡಿದ್ದರು ಎನ್ನಲಾಗಿದೆ. ಪ್ರಕರಣ ಬೇಧಿಸುವಲ್ಲಿ ರಬಕವಿ- ಬನಹಟ್ಟಿ ಪೊಲೀಸರು ಯಶಸ್ವಿಯಾಗಿದ್ದಾರೆ.

The post ಅಂತರ್​ ರಾಜ್ಯ ಕಳ್ಳರು ಅಂದರ್.. ಲಕ್ಷಾಂತರ ಮೌಲ್ಯದ ಬೈಕ್​ಗಳು ವಶ appeared first on News First Kannada.

Source: newsfirstlive.com

Source link