ಹುಬ್ಬಳ್ಳಿ: ವಿವಿಧ ಕಂಪನಿಯ ಬೆಲೆಬಾಳುವ ಮೊಬೈಲ್ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ರವೀಂದ್ರ ಬಸವರಾಜ ಭೋವಿ, ರಂಗಪ್ಪ ತಿಮ್ಮಣ್ಣ ಭೋವಿ ಹಾಗೂ ತುಮಕೂರು ಜಿಲ್ಲೆಯ ಪಾವಗಡದ ರಾಘವೇಂದ್ರ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ 22 ವಿವಿದ ಕಂಪನಿಯ, 2,78,000 ರೂ. ಬೆಲೆಬಾಳುವ ಇತರೆ ಮೊಬೈಲ್ ಫೋನುಗಳನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣಗಳನ್ನು ಭೇದಿಸಿದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ  ಇನ್ಸ್‌ಪೆಕ್ಟರ್‌ ಹಾಗೂ ಸಿಬ್ಬಂದಿ ಉತ್ತಮ ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರ ಲಾಬೂರಾಮ್ ಶ್ಲಾಘಿಸಿದ್ದಾರೆ.

The post ಅಂತರ್‌ಜಿಲ್ಲಾ ಮೊಬೈಲ್ ಫೋನ್ ಕಳ್ಳರ ಬಂಧನ appeared first on Public TV.

Source: publictv.in

Source link