ಬೆಂಗಳೂರು: ಕೊರೊನಾ ರೂಪಾಂತರಿಯ ಅಬ್ಬರಕ್ಕೆ ರಾಜ್ಯ ತತ್ತರಿಸಿ ಹೋಗಿದೆ. ದಿನೇ ದಿನೇ ಕೊರೊನಾ ಹೆಚ್ಚಳವಾಗುತ್ತರಿಂದ ರಾಜ್ಯ ಸರ್ಕಾರ 10 ದಿನಗಳ ಕಾಲ ಇಡೀ ರಾಜ್ಯವನ್ನ ಕಠಿಣ ಕ್ರಮಗಳೊಂದಿಗೆ ಲಾಕ್​ ಡೌನ್​ ಮಾಡಲು ನಿರ್ಧರಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಸೋಮವಾರದಿಂದ(ಮೇ 10) 10 ದಿನಗಳ ಕಾಲ ಇಡೀ ರಾಜ್ಯ ಸ್ತಬ್ಧವಾಗಿರುತ್ತೆ. ಹೀಗಾಗಿ ಸರ್ಕಾರ ಎಲ್ಲವನ್ನೂ ಬಂದ್ ಮಾಡಲು ನಿರ್ಧರಿಸಿದೆ.

ವಿಮಾನ, ರೈಲು, ಆಫೀಸ್​ ಎಲ್ಲಾ ಬಂದ್​!
ಅಂತರ್ ಜಿಲ್ಲಾ‌, ಅಂತರ್ ರಾಜ್ಯ ಓಡಾಟವನ್ನ ಸರ್ಕಾರ ನಿರ್ಬಂಧ ಮಾಡಿದ್ದು. ಪಬ್, ಬಾರ್, ರೆಸ್ಟೋರೆಂಟ್​ನ್ನ ಕ್ಲೋಸ್ ಮಾಡಲಿದೆ. ಅಷ್ಟೇ ಅಲ್ಲದೇ, ಪಾರ್ಸಲ್ ಸೇವೆಗೂ ಈ ಲಾಕ್​​ಡೌನ್​ನಲ್ಲಿ ಕತ್ತರಿ ಬೀಳಲಿದೆ. ಬ್ಯೂಟಿ ಪಾರ್ಲರ್, ಸಲೂನ್ ಅಂಗಡಿಗಳಿಗೆ ಬೀಗ ಜಡಿಯಲಾಗುವುದು. ಗಾರ್ಮೆಂಟ್ಸ್, ಕೈಗಾರಿಕೆ, ಬೃಹತ್ ಕೈಗಾರಿಕಾ ಕ್ಷೇತ್ರಗಳು ಸಂಪೂರ್ಣ ಬಂದ್ ಆಗಲಿವೆ. ಸರ್ಕಾರಿ ಮತ್ತು ಐಟಿ-ಬಿಟಿ ಕಂಪನಿಗಳು ಬಂದ್. ಕಾಲೇಜುಗಳು ಕೂಡ ಬಂದ್ ಜೊತೆಗೆ ಖಾಸಗಿ ಮತ್ತು ಸರ್ಕಾರಿ ಸಾರಿಗೆ ವ್ಯವಸ್ಥೆ ಇರೋದಿಲ್ಲ. ಬರೀ ವೈದ್ಯಕೀಯ ಸೇವೆಗೆ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ.

The post ಅಂತರ್ ಜಿಲ್ಲಾ‌, ಅಂತರ್ ರಾಜ್ಯ ಓಡಾಟವೂ ಬಂದ್​! ಹೇಗಿರುತ್ತೆ ಗೊತ್ತಾ ಕಠಿಣ ಲಾಕ್​ಡೌನ್ appeared first on News First Kannada.

Source: newsfirstlive.com

Source link