ನವದೆಹಲಿ: ಕ್ಷಿಪ್ರಗತಿಯಲ್ಲಿ ಹರಡುವ ಹೊಸ ರೂಪಾಂತರಿ ಕೊರೊನಾ ವೈರಸ್ ವಿದೇಶಗಳಲ್ಲಿ ಪತ್ತೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮಹತ್ವದ ಸಭೆ ನಡೆಸಿದರು.
ಕ್ಯಾಬಿನೆಟ್ ಸೆಕ್ರೆಟರಿ ರಾಜೀವ್ ಗೌಬಾ, ಮೋದಿ ಅವರ ಪ್ರಿನ್ಸಿಪಾಲ್ ಸೆಕ್ರೆಟರಿ ಪಿಕೆ ಮಿಶ್ರಾ, ಕೇಂದ್ರ ಆರೋಗ್ಯ ಸಚಿವರ ಹೆಲ್ತ್ ಸೆಕ್ರೆಟರಿ ರಾಜೇಶ್ ಭೂಷಣ್, ನೀತಿ ಆಯೋಗದ ಸದಸ್ಯ ಡಾ.ವಿಕೆ ಪೌಲ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಕೊರೊನಾ ರೂಪಾಂತರಿ ಬಿ 1.1.529 ದೃಷ್ಟಿಯಿಂದ ಅಂತರರಾಷ್ಟ್ರೀಯ ಪ್ರಯಾಣದ ನಿರ್ಬಂಧಗಳನ್ನು ಸರಾಗಗೊಳಿಸುವ ಯೋಜನೆಗಳನ್ನು ಪರಿಶೀಲಿಸಬೇಕು. ಇದರೊಂದಿಗೆ, ವಿದೇಶಗಳಿಂದ ಮತ್ತು ಅಪಾಯದಲ್ಲಿರುವ ದೇಶಗಳಿಂದ ಬರುವವರ ಮೇಲೆ ನಿಗಾ ಇಡುವುದರ ಮೇಲೆ ಗಮನ ಕೇಂದ್ರೀಕರಿಸಿ. ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಆಧಾರದ ಮೇಲೆ ಕೋವಿಡ್ ಪರೀಕ್ಷೆಯನ್ನು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹೊಸ ವೇರಿಯಂಟ್ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ಹಾಂಗ್ ಕಾಂಗ್, ಆಫ್ರಿಕಾ, ಇಸ್ರೇಲ್, ಬೊಟ್ಸ್ವಾನಾದಿಂದ ಬರುವ ಪ್ರಯಾಣಿಕರ ಬಗ್ಗೆ ಜಾಗೃತೆ ವಹಿಸಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು. ಲಸಿಕೆಯು ಹೊಸ ತಳಿಯ ವೈರಸ್ ಮೇಲೆ ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸಲಿದೆ. ಹೊಸ ತಳಿ ಕಂಡು ಬಂದಿರೋ ದೇಶಗಳ ವಿಮಾನ ಹಾರಾಟ ರದ್ದತಿಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸದ್ಯ ಯುಕೆ, ಯುಎಸ್, ಸಿಂಗಾಪುರ್, ಇಸ್ರೇಲ್, ಜರ್ಮನಿ ದೇಶಗಳು ವಿಮಾನ ಹಾರಾಟ ನಿಲ್ಲಿಸಿವೆ. ಈ ಬಗ್ಗೆಯೂ ಚರ್ಚೆ ನಡೆಯಿತು.
ಇದೇ ವೇಳೆ ಮೋದಿ, ಕೊರೊನಾ ನಿಯಮವನ್ನ ಪ್ರೋಟೋಕಾಲ್ಸ್ ಪಾಲನೆ ಮಾಡುವುದು. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಹಾಕುವುದು, ಆಗಾಗ ಕೈಗಳನ್ನ ತಪ್ಪದೇ ತೊಳೆಯುವುದು ಜೊತೆಗೆ ಸಾಮಾಜಿಕ ಅಂತರವನ್ನ ಕಡ್ಡಾಯವಾಗಿ ಪಾಲನೆ ಮಾಡಲು ಒತ್ತು ನೀಡಿದ್ದಾರೆ.