ಅಂತಿಮ ಘಟ್ಟ ತಲುಪಿದ ಟೆಸ್ಟ್ ಪಂದ್ಯ; ಭಾರತ ಹುಲಿಗಳ ವಿಕೆಟ್​ ಶಿಕಾರಿ ಹೇಗಿದೆ..?


ಇಂಡೋ-ಕಿವೀಸ್​ ನಡುವಿನ ಮುಂಬೈ ಟೆಸ್ಟ್​ ಪಂದ್ಯ ನಿರ್ಣಾಯಕ ಘಟ್ಟ ತಲುಪಿದೆ. 3ನೇ ದಿನದಾಟದಲ್ಲಿ ಬ್ಯಾಟಿಂಗ್​-ಬೌಲಿಂಗ್​ ಎರಡರಲ್ಲೂ ಡಾಮಿನೇಟಿಂಗ್​ ಪರ್ಫಾಮೆನ್ಸ್​ ನೀಡಿದ ಟೀಮ್​ ಇಂಡಿಯಾ ಪಂದ್ಯ ಮೇಲೆ ಬಿಗಿ ಹಿಡಿತ ಸಾಧಿಸಿದೆ. 3ನೇ ದಿನದಾಟದ ಹೈಲೆಟ್ಸ್​​.. ಇಲ್ಲಿದೆ.

ಅರ್ಧಶತಕ ಸಿಡಿಸಿದ ಮಯಾಂಕ್​, 47 ರನ್​ಗಳಿಸಿದ ಪೂಜಾರ
ಮೊದಲ ಸೆಷನ್​ ಅಂತ್ಯಕ್ಕೆ ಟೀಮ್​ ಇಂಡಿಯಾ 142/2

62 ರನ್​ಗಳೊಂದಿಗೆ 3ನೇ ದಿನದಾಟ ಆರಂಭಿಸಿದ್ದ ಭಾರತ, ಆರಂಭದಲ್ಲಿ ಪ್ರಾಬಲ್ಯ ಮೆರೆಯಿತು. ಮಯಾಂಕ್​ ಅಗರ್​ವಾಲ್​ ಅರ್ಧಶತಕ ಸಿಡಿಸಿ ಮಿಂಚಿದ್ರೆ, ಎಚ್ಚರಿಕೆಯ ಆಟವಾಡಿದ ಪೂಜಾರ 47 ರನ್​ಗಳಿಸಿ ಔಟಾದ್ರು. ಆದ್ರೆ, ಆ ಬಳಿಕ ಜೊತೆಯಾದ ಶುಭ್​ಮನ್​ ಗಿಲ್​, ವಿರಾಟ್​ ಕೊಹ್ಲಿ ತಂಡಕ್ಕೆ ಆಸರೆಯಾದ್ರು. ಪರಿಣಾಮ ಮೊದಲ ಸೆಷನ್​ನಲ್ಲಿ ಭಾರತವೇ ಮೇಲುಗೈ ಸಾಧಿಸಿತು.

276 ರನ್​ಗಳಿಗೆ ಡಿಕ್ಲೇರ್​​, ಕಿವೀಸ್​ಗೆ ಸವಾಲಿನ ಟಾರ್ಗೆಟ್​
2ನೇ ಸೆಷನ್​ನಲ್ಲಿ 47 ರನ್​ಗಳಿಸಿ ಶುಭ್​ಮನ್​ಗಿಲ್​ ಔಟಾದ್ರೆ, 2 ಸಿಕ್ಸರ್​ ಸಿಡಿಸಿ ಅಬ್ಬರಿಸಿದ ಶ್ರೇಯಸ್​​ ಅಯ್ಯರ್​​, ಬಿಗ್​ ಸ್ಕೋರ್​​ ಕಲೆ ಹಾಕುವಲ್ಲಿ ಎಡವಿದ್ರು. ಇದರ ಬೆನ್ನಲ್ಲೇ, ವಿರಾಟ್​ ಕೊಹ್ಲಿ ಕೂಡ ಪೆವಿಲಿಯನ್​ ಸೇರಿದ್ರು. ಆದ್ರೆ, ಅಂತಿಮ ಹಂತದಲ್ಲಿ ಅಬ್ಬರಿಸಿದ ಅಕ್ಷರ್​ ಪಟೇಲ್​, ಬೌಂಡರಿ, ಸಿಕ್ಸರ್​ ಸಿಡಿಸಿ ರಂಜಿಸಿದ್ರು. ಅಂತಿಮವಾಗಿ 7 ವಿಕೆಟ್​​ ನಷ್ಟಕ್ಕೆ 276 ರನ್​ಗಳಿಸಿದ ಭಾರತ, ಕಿವೀಸ್​​ಗೆ 540 ರನ್​ಗಳ ಸವಾಲಿನ ಟಾರ್ಗೆಟ್​ ನೀಡಿ ಇನ್ನಿಂಗ್ಸ್​​ ಡಿಕ್ಲೇರ್​ ಮಾಡಿತು.

ಬ್ಯಾಟರ್​​ಗಳ ಪೆವಿಲಿಯನ್​ ಪರೇಡ್​​, ಸಂಕಷ್ಟದಲ್ಲಿ ನ್ಯೂಜಿಲೆಂಡ್​
540 ರನ್​ಗಳ ಬೃಹತ್​​​ ಟಾರ್ಗೆಟ್​ ಬೆನ್ನತ್ತಿದ ನ್ಯೂಜಿಲೆಂಡ್​​, ಆರಂಭದಲ್ಲೇ ಎಡವಿತು. ನಾಯಕ ಟಾಮ್​ ಲಾಥಮ್​, ವಿಲ್​ ಯಂಗ್​ ಹಾಗೂ ಅನುಭವಿ ರಾಸ್​​ ಟೇಲರ್​​ ಅಲ್ಪ ಮೊತ್ತಕ್ಕೆ ಪೆವಿಲಿಯನ್​ ಸೇರಿದ್ರು. ಡೇರಿಲ್​ ಮಿಚೆಲ್​, ಹೆನ್ರಿ ನಿಕೋಲಸ್​ ಕೆಲ ಕಾಲ ಹೋರಾಡಿದರಾದರೂ ಅಕ್ಷರ್​ ಪಟೇಲ್​ ಈ ಜೋಡಿಯನ್ನ ಬ್ರೇಕ್​ ಮಾಡಿದ್ರು. ಆ ಬಳಿಕ ಕಣಕ್ಕಿಳಿದ ಟಾಮ್​ ಬ್ಲಂಡಲ್​ ಬಂದಷ್ಟೇ ವೇಗವಾಗಿ ರನ್​ಔಟ್​ ಆಗಿ ಪೆವಿಲಿಯನ್​ ಸೇರಿದ್ರು.

3ನೇ ದಿನದ ಅಂತ್ಯಕ್ಕೆ ನ್ಯೂಜಿಲೆಂಡ್​​ 140/5
ಅಂತಿಮವಾಗಿ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್​​ 5 ವಿಕೆಟ್​ ನಷ್ಟಕ್ಕೆ 140 ರನ್​ಗಳಿಸಿದ್ದು, ಗೆಲುವಿಗೆ ಇನ್ನೂ 400 ರನ್​ಗಳಿಸಬೇಕಿದೆ. ಭಾರತದ ಗೆಲುವಿಗೆ ಇನ್ನು 5 ವಿಕೆಟ್​​ಗಳ ಅಗತ್ಯತೆಯಿದೆ. ಆದರೆ ತಾಳ್ಮೆಯುತ ಆಟವಾಡ್ತಿರೋ ಹೆನ್ರಿ ನಿಕೋಲಸ್​ ಮತ್ತು ರಾಚಿನ್​ ರವೀಂದ್ರ ಇಂದಿಗೆ ಕ್ರೀಸ್​ ಕಾಯ್ದುಕೊಂಡಿದ್ದಾರೆ.

News First Live Kannada


Leave a Reply

Your email address will not be published. Required fields are marked *