ಅಂತ್ಯ ಸಂಸ್ಕಾರಕ್ಕೆ ಹೋಗ್ತಿದ್ದಾಗ ಭೀಕರ ಅಪಘಾತ; 18 ಸಾವು -ಪ್ರಧಾನಿ ಮೋದಿ ಕಂಬನಿ 


ನವದೆಹಲಿ: ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ಫುಲ್​ಬರಿ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ 18 ಮಂದಿ ಸಾವನ್ನಪ್ಪಿ 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹನ್ಸ್​ಖಲಿ ಠಾಣೆಯ ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ.. ಮೃತ ವ್ಯಕ್ತಿಯ ಅಂತ್ಯಸಂಸ್ಕಾರದ ವೇಳೆ ಅಪಘಾತ ಸಂಭವಿಸಿದೆ. ಬಗ್ದ 24 ಪರಗಣದಲ್ಲಿರುವ ಸ್ಮಶಾಣಕ್ಕೆ ಶವ ಸಾಗಿಸುತ್ತಿದ್ದ ವಾಹನ ಟ್ರಕ್​ಗೆ ಗುದ್ದಿದ ಪರಿಣಾಮ ದುರ್ಘಟನೆ ಸಂಭವಿಸಿದೆ. ಟ್ರಕ್​​ನಲ್ಲಿ ಕಲ್ಲುಗಳು ತುಂಬಿದ್ದವು. ರಸ್ತೆ ಮಧ್ಯೆದಲ್ಲಿಯೇ ನಿಲ್ಲಿಸಿದ್ದರಿಂದ ಅವಘಡ ಸಂಭವಿಸಿದೆ. ಟ್ರಕ್ ಡ್ರೈವರ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಮೃತರಲ್ಲಿ 10 ಮಂದಿ ಪುರುಷರು, 7 ಮಹಿಳೆಯರು ಹಾಗೂ ಓರ್ವ ಮಗು ಸೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದುರ್ಘಟನೆಗೆ ಪ್ರಧಾನಿ ಮೋದಿ, ಸಿಎಂ ಮಮತಾ ಬ್ಯಾನರ್ಜಿ ಹಾಗೂ ಪಶ್ಚಿಮ ಬಂಗಾಳದ ರಾಜ್ಯಪಾಲರು ಕಂಬನಿ ಮಿಡಿದಿದ್ದಾರೆ.

News First Live Kannada


Leave a Reply

Your email address will not be published. Required fields are marked *