ಬೆಂಗಳೂರು: ಒಂದೆಡೆ ಕೊರೊನಾದಿಂದಾಗಿ ಸಾವು ನೋವುಗಳು ಸಂಭವಿಸುತ್ತಿವೆ. ಮತ್ತೊಂದೆಡೆ ಸಾವನ್ನಪ್ಪಿದವರ ಮೃತದೇಹಗಳನ್ನ ಅಂತ್ಯಸಂಸ್ಕಾರ ಮಾಡೋದಕ್ಕೂ ಹೆಣಗಾಡುವಂತಾಗಿದೆ. ಈ ಮಧ್ಯೆ ಮೃತ ಕೊರೊನಾ ಸೋಂಕಿತರ ಶವಸಂಸ್ಕಾರಕ್ಕೆ ಈಗ ಆನ್ಲೈನ್ ಬುಕ್ಕಿಂಗ್ ಮಾಡಿದ್ದಾರೆ. ಈ ಹಿನ್ನಲೆ, ಅನಕ್ಷರಸ್ಥರು ಗ್ರಾಮೀಣ ಭಾಗದವರು ಬುಕ್ಕಿಂಗ್ ಮಾಡದೇ ಯಾರಾದ್ರೂ ಬಂದಲ್ಲಿ, ಅಂಥವರಿಗೆ ತಹಶೀಲ್ದಾರ್ ಶಿವಪ್ಪ ಲಮಾಣಿರಿಂದ ಬುಕ್ಕಿಂಗ್ ಮಾಡಿಕೊಡಲಾಗ್ತಿದೆ. ಈ ಮೂಲಕ ತಹಶೀಲ್ದಾರ್ ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ.

ಚಿತಾಗಾರದ ಮುಂಭಾಗದ ಫೋನ್​ನಿಂದ ಬಿಬಿಎಂಪಿ ಹೆಲ್ಪ್​ ಲೈನ್​ಗೆ ಕರೆ ಮಾಡಿ ಬುಕ್ಕಿಂಗ್ ಮಾಡಿ ಶವಸಂಸ್ಕಾರ ಮಾಡಲೂ ಸಹ ಇಲ್ಲಿ ಅವಕಾಶ ಕೊಡಲಾಗ್ತಿದೆ. ಸಂಜೆ ವೇಳೆ ಬಿಬಿಎಂಪಿ ಹೆಲ್ಪ್ ಲೈನ್​ಗೆ ಕಾಲ್​ ಕನೆಕ್ಟ್ ಆಗದಿದ್ರೆ ಅಥವಾ ಹೆಲ್ಪ್ ಲೈನ್ ನಂಬರ್ ಬ್ಯುಸಿ ಬಂದ್ರೆ ಇಂಥ ಸಮಯದಲ್ಲಿ ಕಂಟ್ರೋಲ್ ರೂಂಗೆ ಮಾಹಿತಿ ನೀಡಿ ಶವಸಂಸ್ಕಾರಕ್ಕೆ ಬುಕ್ಕಿಂಗ್ ಮಾಡಿಸಿ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಅಲ್ಲದೇ, ಮೃತರ ಸಂಬಂಧಿಕರು ಶವಸಂಸ್ಕಾರಕ್ಕೆ ಬುಕ್ಕಿಂಗ್ ಮಾಡದೇ ಬಂದ್ರೂ ಕೂಡ ಅಂಥವರನ್ನ ವಾಪಸ್ ಕಳಿಸದೇ ಅಂತ್ಯಸಂಸ್ಕಾರ ಮಾಡಿಕೊಡಲಾಗ್ತಿದೆ.

ಜೊತೆಗೆ ಆನ್ಲೈನ್ ಬುಕ್ಕಿಂಗ್ ಮಾಡಲಿಕ್ಕೆ ಬರದಿದ್ದವರಿಗೆ ಆನ್ಲೈನ್ ಬುಕ್ಕಿಂಗ್ ಬಗ್ಗೆ ತಿಳಿಸ್ಬೇಕು. ಮೃತ ದೇಹ ತೆಗೆದುಕೊಂಡ ಬಂದಲ್ಲಿ ಯಾರನ್ನೂ ಬೇರೆಡೆ ವಾಪಸ್ ಹೋಗಿ ಅಂತ ಹೇಳಬಾರದು. ಅನಾಥ ಶವಗಳು ಬಂದಲ್ಲಿ ಚಿತಾಗಾರದ ಫೋನ್​ನಲ್ಲಿ ಬುಕ್​ ಮಾಡಿ ಅಂತ್ಯಸಂಸ್ಕಾರ ನಡೆಸಬೇಕು ಅಂತ ಶಿವಪ್ಪ ಲಮಾಣಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 

The post ಅಂತ್ಯ ಸಂಸ್ಕಾರ ಮಾಡೋದೂ ಕಷ್ಟಕರ.. ತಾವೇ ನಿಂತು ವ್ಯವಸ್ಥೆ ಮಾಡಿಕೊಡ್ತಿದ್ದಾರೆ ಈ ತಹಶೀಲ್ದಾರ appeared first on News First Kannada.

Source: newsfirstlive.com

Source link