ಅಂದಿನ ಯಶ್​​​ಗೂ ಇಂದಿನ ಯಶ್​​​​ಗೂ ಇರೋ ವ್ಯತ್ಯಾಸ ಹೇಳಿದ ನಟ ರಾಜೇಶ್​ ನಟರಂಗ

ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್​ ನಟರಂಗ ಅವರು ನ್ಯೂಸ್​ ಫಸ್ಟ್​ ವಿಶೇಷ ಸಂದರ್ಶನದಲ್ಲಿ ಮಾತನಾಡುವಾಗ ಇಂದಿನ ರಾಕಿಂಗ್​ ಸ್ಟಾರ್​ ಯಶ್​ಗೂ ಅಂದಿನ ಯಶ್​ಗೂಯಿದ್ದ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ.

ಹೌದು, ಯಶ್​ ಬಹಳ ಸ್ವೀಟ್​ ಪರ್ಸನ್..​ ಯಶ್​ ಮೊದಲು ಹೇಗಿದ್ರೋ ಈಗಲೂ ಹಾಗೇ ಇದ್ದಾರೆ ಎಂದು ರಾಜೇಶ್​ ನಟರಂಗ ಹೇಳಿದ್ದಾರೆ. ಯಶ್​ ಯಾವಾಗಲೂ ಬಹಳ ಕ್ಯೂರಿಯಸ್​ ಆಗಿದ್ರು. ಶೂಟಿಂಗ್​ ಮುಗಿಸಿದ ಕೂಡಲೇ ಟೈಮ್​ ವೇಸ್ಟ್​ ಮಾಡದೇ ಜಿಮ್​ಗೆ ಹೋಗಿ ವರ್ಕೌಟ್​ ಮಾಡುತ್ತಿದ್ರು. ಇವತ್ತಿಗೂ ಯಶ್​ ಸಿಕ್ಕಿದಾಗ ಬಹಳ ಸಹಜವಾಗಿ ಮಾತನಾಡುತ್ತಾರೆ ಅವರು ತುಂಬ ಡೌನ್​ ಟು ಅರ್ಥ್​ ಪರ್ಸನ್​ ಎಂದು ರಾಜೇಶ್​ ಹೇಳಿದ್ದಾರೆ.

ಸೆಟ್​​ನಲ್ಲಿ ಸಹಜವಾಗಿ ಮೊದಲು ಯಾವ ರೀತಿ ಇರಬೇಕು ಅದೇ ರೀತಿ ಇರ್ತಾರೆ. ನಾನು ಕೊರೊನಾ ಮುಂಚೆ ಒಂದು ಸಿನಿಮಾ ಘೋಷಣೆ ಮಾಡಿದ್ದೆ. ಆಗ ಫೋನ್​ ಮಾಡಿ ಕರೆದಾಗ ಕೂಡಲೇ ಓಕೆ ಅಂದ್ರು. ಅಂದು ಸಂಜೆ 6 ಗಂಟೆಗೆ ಕಾರ್ಯಕ್ರಮಕ್ಕೆ ಬಂದು ಏನು ಮಾತನಾಡಬೇಕು ಅಂತಾ ಹೇಳಿದ್ರು. ನಾವು ಅವರನ್ನು ಯಾವುದಕ್ಕೆ ಯೂಸ್​ ಮಾಡಿಕೊಳ್ಳುತ್ತಿದ್ದೆವು ಎಂದು ಕೂಡ ಯಶ್​​ಗೆ ಗೊತ್ತಿರಲಿಲ್ಲ. ಅಷ್ಟು ಸ್ವೀಟ್​ ಪರ್ಸನ್​​ ಅವ್ರು.. ಈಗ ಅವರು ಇರೋ ಜಾಗ ಕಷ್ಟಪಟ್ಟು ಸಂಪಾದನೆ ಮಾಡಿರೋದು.. ಆದರೆ ನಾನು ಯಾರಾದರೂ ಹೇಳು ಅಂದರೆ ಹೇಳೋದಿಲ್ಲ. ನಾನು ಕೂಡ ಅವರನ್ನು ಕರೆಯಬೇಕು ಎಂದರೆ ನೂರು ಬಾರಿ ಯೋಚನೆ ಮಾಡ್ತೀನಿ ಎಂದು ಹೇಳಿದ್ರು.

News First Live Kannada

Leave a comment

Your email address will not be published. Required fields are marked *