ಅಂದು ಅಪ್ಪು ಕೈಗೆ ಆ ಪುಸ್ತಕ ಸಿಗಲೇ ಇಲ್ಲ.. ಒಂದು ದಿನ ಉಡುಗೊರೆಯಾಗಿ ಸಿಕ್ಕಾಗ ಏನ್ಮಾಡಿದ್ದರು ಗೊತ್ತಾ?


ಅಪ್ಪು ಎಂದರೇ ಅಭಿಮಾನಿಗಳು ಹುಚ್ಚೆದ್ದು ಕುಣಿತಾರೆ, ತನ್ನಲಿರುವ ಕಲೆಯೊಂದರಿಂದ ಕನ್ನಡಿಗರ, ಕನ್ನಡ ತಾಯಿಯ ಸೇವೆಯಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುವ ನಮ್ಮೆಲ್ಲರ ಕಣ್ಮಣಿ, ಪುನೀತ್​ ರಾಜ್​ಕುಮಾರ್​ ನಮ್ಮೊಂದಿಗಿಲ್ಲ ಅನ್ನೋದೆ ನಂಬಲು ಅಸಾಧ್ಯ. ಬಾಲ ನಟನಾಗಿ ನಟನೆಯನ್ನು ಶುರು ಮಾಡಿದ್ದ ಅಪ್ಪು 4 ದಶಕಗಳಿಂದ ಅಚ್ಚಳಿಯದಂತ ಸಿನಿಮಾಗಳನ್ನು ನಮಗೆ ಕೊಡುಗೆ ಆಗಿ ನೀಡಿ, ಕನ್ನಡಿಗರ ಅಚ್ಚುಮೆಚ್ಚಿನ ಅಪ್ಪುವಾಗಿ ಉಳಿದಿದ್ದಾರೆ.

ಈ ಪವರ್​ಗೆ ವಿಶೇಷ ಆಸಕ್ತಿ, ಸಂಕೋಚವಿಲ್ಲದೆ ಹೊಟ್ಟೆ ತುಂಬ ಊಟ ಮಾಡುವುದು, ಕಾಡು ಪರಿಸರ, ನೈಸರ್ಗ ಸೌಂದರ್ಯದ ಜೊತೆ ಕಾಲ ಕಳೆಯೋದು, ತನ್ನ ದೇಹದ ಜೊತೆ ವಿವಿಧ ಕಸರತ್ತು ಮಾಡೋದು. ಹೀಗೆ ಇಚ್ಛಿಸಿದ್ದನ್ನೆಲ್ಲ ಅಚ್ಚುಕಟ್ಟಾಗಿ ಮಾಡಿಕೊಂಡ ಅಪ್ಪುಗೆ, ಒಂದು ಬೇಡಿಕೆ ಮಾತ್ರ ಆಗಿರಲಿಲ್ಲ. ಅದು ಅಪ್ಪು ಬಾಲಕನಾಗಿದ್ದಾಗ ಹುಟ್ಟಿದ್ದ ಬೇಡಿಕೆ. ಅದೊಂದು ಸಿನಿಮಾ ಪಾತ್ರ. ಅದರಲ್ಲಿ ತನ್ನ ಆ ಬೇಡಿಕೆ ಇಡೇರಿಸಿಕೊಳ್ಳಲು ಅಪ್ಪುಗೆ ಬೇಕಾಗಿದ್ದದ್ದು ಕೇವಲ 10 ರೂಪಾಯಿ. ಇದಕ್ಕಾಗಿ ಅಪ್ಪು ಏನೇನೆಲ್ಲಾ ಸಾಧನೆ ಮಾಡಿದ್ರು, ಅದು ಅವರ ಕೈಗೆ ಸೇರಲೇ ಇಲ್ಲ. ಆ ಆಸೆ ಕುವೆಂಪು ಲಿಖಿತ ಜನಪ್ರಿಯ ವಾಲ್ಮೀಕಿ ರಾಮಾಯಣ.

ಅಪ್ಪು ನಟನೆಯ ಬೆಟ್ಟದ ಹೂವು ಸಿನಿಮಾದ ದೃಶ್ಯ ಒಂದರಲ್ಲಿ ಒಂದು ಪುಸ್ತಕವನ್ನು ತನ್ನಾದಾಗಿಸಿಕೊಳ್ಳಲು ಸಾಕಷ್ಟು ಕಸರತ್ತು ಮಾಡಿದ್ರು ಅಂದು ಆ ಸಿನಿಮಾಗೆ ಭರ್ಜರಿ ಯಶಸ್ಸು ದೊರಕಿದ್ರೂ, ಅಪ್ಪುಗೆ ರಾಷ್ಟ್ರ ಪತಿಗಳಿಂದ ಪ್ರಶಸ್ತಿ ಸಿಕ್ಕಿದ್ರೂ ಆ ವಾಲ್ಮೀಕಿ ರಾಮಾಯಣ ಪುಸ್ತಕ ಮಾತ್ರ ಅಪ್ಪು ಪಾಲಾಗಲೇ ಇಲ್ಲ. ಆದ್ರೆ ಈ ಆಸೆನಾ ಅಪ್ಪುವಿನ ಅಭಿಮಾನಿ ನೆರೆವೇರಿಸಿದ್ರೂ. ಅವರು ಯಾರು, ಆ ಪುಸ್ತಕ ಅಪ್ಪು ಕೈ ಸೇರಿದ ಮೇಲೆ ಅಪ್ಪು ಏನ್ಮಾಡಿದ್ರು?

ಬೆಟ್ಟದ ಹೂವು, ಅಪ್ಪು ಅಭಿನಯದ ಅದ್ಭುತ ಸಿನಿಮಾ. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ರೂ ಮಗನಿಗೆ ಓದಿಸಬೇಕು ಎನ್ನುವ ಆಸೆ ಹೊತ್ತಾ ತಂದೆ ತಾಯಿ, ರಾಮುಗೆ ಶಾಲೆ ಸೇರಿಸಿ ಓದಿನ ಬಗ್ಗೆ ಹೇಳುತ್ತಲೇ ಇರ್ತಾರೆ. ಇದಕ್ಕೆ ತಕ್ಕ ಹಾಗೆ ರಾಮು ಓದು, ಪುಸ್ತಕ, ಶಾಲೆ ಅನ್ನೋದಕ್ಕೆ ಹೊಂದಿಕೊಂಡು ಇರ್ತಾನೆ. ದಿನ ಬೆಳಗಾದರೆ ಶಾಲೆಗೆ ಹೋಗಿ ಪಾಠ ಕೇಳಿ, ಶಾಲಾ ಮಾಸ್ಟರ್​ ನ ಅಚ್ಚು ಮೆಚ್ಚಿನ ಹುಡುಗನಾಗಿರ್ತಾನೆ ರಾಮು.

ರಾಮಾಯಣದ ಬಗ್ಗೆ ಆಸೆ ಹುಟ್ಟಿಸುವ ಶಾಲಾ ಮಾಸ್ಟರ್​
ರಾಮ ಜಪ ಒಂದಿದ್ದರೇ ಸಕಲ ಕಷ್ಟಗಳು ನಾಶ ಎಂದ ಬಾಲ ರಾಮು

ಸಿನಿಮಾ ಕಥೆ ಹೀಗೆ ನಡೆಯುತ್ತದೆ. ರಾಮ ಹನುಮ ಎನ್ನುವ ಪಾತ್ರ ಅಪ್ಪುಗೆ ಹೆಚ್ಚೆಚ್ಚು ಕಾಡಿರುತ್ತೆ. ರಾಮ ಹನುಮ ಯುದ್ಧ ಯಾಕೆ ಮಾಡಿದ್ರೂ, ರಾಮ ನಾಮ ಸ್ಮರಣೆಯಲ್ಲಿನ ಪವಾಡ ಏನು ಹೀಗೆ ಬಹುದೊಡ್ಡ ಯೋಚನೆಯಲ್ಲಿ ರಾಮು ಮುಳುಗಿರುತ್ತಾನೆ. ಬೇರೆಲ್ಲ ವಿಷಯದಲ್ಲಿ ಅನುಮಾನಗಳು ಕಾಡಿದ ಹಾಗೆ ಅಪ್ಪುಗೆ ರಾಮಾಂಜನೇಯ ಯುದ್ಧ ಅನ್ನೋ ವಿಷಯ ತುಂಬ ಕಾಡುತ್ತೆ. ಇದಾದ ಮೇಲೆ ಅಪ್ಪು ಕಣ್ಣಿಗೆ ಕಾಣಿಸಿದ ಪುಸ್ತಕವೇ ಕುವೆಂಪುರವರು ಬರೆದ ವಾಲ್ಮೀಕಿ ಸಂಪೂರ್ಣ ರಾಮಾಯಣ. ನೋಡಿದ ತಕ್ಷಣ ಅದನ್ನು ತನ್ನಾದಾಗಿಸಿಕೊಳ್ಳುವ ಆಸೆ ಹೊತ್ತಾ ರಾಮು, ಬೆಲೆ ಎಷ್ಟು ಅಂದಾಗ “ಹತ್ತು ರೂಪಾಯಾ? ಎಂದು ಕಣ್ಕಣ್ಣು ಬಿಟ್ಟಿರ್ತಾನೆ.

ಇದಾದ ಮೇಲೆ ಬೆಟ್ಟದ ಹೂವಿನ ರಾಮುವಿನ ಕನಸಲ್ಲೂ ಮನಸಲ್ಲೂ ರಾಮಾಯಣ ಪುಸ್ತಕ. ಅದನ್ನು ಹೇಗಾದರೂ ಮಾಡಿ ಹಣ ಕೂಡಿಟ್ಟು ಪಡಯಲೇಬೇಕು ಎನ್ನುವ ಕಾತುರ. ಶಾಲೆಗೆ ಹೋಗೋ ಹಾದಿಯಲ್ಲಿ ನೀಲಿ ಬಣ್ಣದ ರಾಮಾಯಣದ ಪುಸ್ತಕದ ಮೇಲೇ ಕಣ್ಣು. ಹೀಗೆ ಅಪ್ಪುಗೆ ಆ ಒಂದು ಶ್ರೇಷ್ಠ ಗ್ರಂಥದ ಮೇಲಿನ ಒಲವನ್ನು ಅದ್ಭುತವಾಗಿ ಪೋಣಿಸಿದ್ದರು ನಿರ್ದೇಶಕರು.

ಕಾಡಿ ಬೇಡಿ, ಹೋರಾಡಿ, ಸಾಹಸಗಳನ್ನು ಮಾಡಿ ರಾಮು ಸಿನಿಮಾ ಕೊನೆಯ ಹಂತದಲ್ಲಿ ರಾಮಾಯಣ ಖರೀದಿಗಾಗೆ 10 ರೂಪಾಯಿ ಹಣ ಕೂಡಿಟ್ಟುಕೊಳ್ತಾನೆ. ಆದರೆ ಬಡತನ ಎನ್ನುವ ಶತ್ರು ಆ ಪುಸ್ತಕ ರಾಮು ಪಾಲಾಗಲು ಅವಕಾಶವೇ ನೀಡೋದಿಲ್ಲ. ಮನೆಯಲ್ಲಿ ತಂಗಿ ಚಳಿಯಲ್ಲಿ ನಡುಗುವುದನ್ನು ತಡೆಯಲು ರಾಮು ಅಷ್ಟು ಹಣದಲ್ಲೂ ಕಂಬಳಿ ಖರೀದಿಸಿ, ತನ್ನ ಪುಸ್ತಕದ ಕನಸನ್ನು ತ್ಯಾಗ ಮಾಡಿರುತ್ತಾನೆ.

ಆ ಒಂದು ಪುಸ್ತಕಕ್ಕಾಗಿ ಅಪ್ಪು ಕಣ್ಣೀರು ಹಾಕೋದನ್ನು ನೋಡಿದರೆ, ಇಂದಿಗೂ ಆ ರಾಮಾಯಣ ಅಪ್ಪು ಪಾಲಾಗಿ ಸಿಗಬಾರದಾ ಎನಿಸಿ ಬಿಡುತ್ತೆ. ನಾವೇ ಆ ಬಾಲಕ ರಾಮುವಿನ ಕಣ್ಣೀರು ಒರೆಸಿ, ಹತ್ತು ರೂಪಾಯಿ ಕೊಟ್ಟು ರಾಮಾಯಣ ಕೊಡಿಸಿಬಿಡೋಣ ಅನಿಸುತ್ತೆ. ಅದು ಅಪ್ಪು ನಟನೆಯ ಕರಾಮತ್ತು. ಅಂದು ಅಪ್ಪು ಆಸೆ ಪಟ್ಟ ರಾಮಾಯಣ ಗ್ರಂಥ ಅಪ್ಪು ಪಾಲಿಗೆ ಕೊನೆಗೂ ಸಿಗುತ್ತದೆ.

ಬೆಟ್ಟದ ಹೂವು ಸಿನಿಮಾದಲ್ಲಿ ಅಪ್ಪುಗೆ ವಾಲ್ಮೀಕಿ ರಾಮಾಯಣ ದೊಡ್ಡ ಕನಸು. ಅದನ್ನು ಸಿನಿಮಾದಲ್ಲಿ ಅದ್ಭುತವಾಗೆ ಚಿತ್ರಿಸಿದ್ದಾರೆ. ದೂರದಲ್ಲಿ ಕಾಣುವ ಪುಸ್ತಕವನ್ನು ಪಡೆಯಲು ಬಾಲ ರಾಮು ಓಡೋಡಿ ಬರ್ತಾನೆ. ಪುಸ್ತಕ ಕೈಗೆ ಸಿಕ್ಕಿದಾಗ, ಅದನ್ನು ಅಪ್ಪಿ ಅಪ್ಪು ನಕ್ಕು ನಲಿದಾಡ್ತಾನೆ. ಈ ಒಂದು ಪುಸ್ತಕ ಪಡೆಯುವುದಕ್ಕಾಗೆ ಅಪ್ಪು ಕಾಡು ಮೇಡು ಅಲೆದು, ವಿವಿಧ ಜಾತಿಯ ಹೂವನ್ನು ಚಿತ್ರಗಾರ್ತಿಗೆ ನೀಡ್ತಾ ಇರ್ತಾನೆ. ಅವನ ಪುಟ್ಟ ಸಂಪಾದನೆಯಿಂದ ಅಪ್ಪು ದಿನೇ ದಿನೇ ಕನಸಿಗೆ ಹತ್ತಿರವಾಗ್ತಾ ಇರ್ತಾನೆ. ಆದ್ರೆ ಕೊನೆಗೂ ಆ ಪುಸ್ತಕ ರಾಮು ಪಾಲಾಗುವುದೇ ಇಲ್ಲ.

ಸಿನಿಮಾ ಮುಗಿದು, ರಿಲೀಸ್​ ಆಗಿ ಅಪ್ಪುವಿಗೆ ದೊಡ್ಡ ಮಟ್ಟದ ಯಶಸ್ಸು ಸಿಗುತ್ತೆ. ದೇಶದ ಅತ್ಯತ್ತಮ ಪ್ರಶಸ್ತಿನೂ ಅಪ್ಪು ಪಾಲಾಗುತ್ತೆ. ಆದ್ರೆ ಆ ಒಂದು ಪುಸ್ತಕ ಸಿಕ್ಕಿದ್ದ ಪುನೀತ್​ ಪವರ್​ ಸ್ಟಾರ್​ ಆದಾಗ. ಆ ಪವರ್​ಫುಲ್​ ಕೊಡುಗೆ ಅಪ್ಪುವಿಗೆ ನೀಡಿದ್ದ ಅವರ ಅಭಿಮಾನಿ. ಬೆಟ್ಟದ ಹೂವು ಸಿನಿಮಾ ನೋಡಿ ಕಣ್ಣೀರು ಹಾಕದವರೇ ಇಲ್ಲ. ಅದರಲ್ಲೂ ಅಪ್ಪುವಿನ ಅಭಿಮಾನಿ ಆಗಿದ್ರೆ , ಬಾಲ ರಾಮುವಿನ ಕಣ್ಣೀರೂ ಎಂತವರಿಗೂ ಕರಗಿಸಿ ಬಿಡುತ್ತೆ. ಹೀಗೆ ಜಗದೀಶ್​ ಅಪ್ಪುವಿಗೆ ಆ ಪುಸ್ತಕವನ್ನು ಗಿಫ್ಟಾಗಿ ನೀಡಲು ನಿರ್ಧರಿಸುತ್ತಾರೆ. ಸಿನಿಮಾದಲ್ಲಿ ಇರೋದು, ನೀಲಿ ಬಣ್ಣದ ಕುವೆಂಪು ಲಿಕಿತ ವಾಲ್ಮಕಿ ರಾಮಾಯಣ.

ಅಪ್ಪು ಆ ಪುಸ್ತಕ ಮೊದಲ ಬಾರಿಗೆ ತಮ್ಮ ಕೈ ಸೇರಿದಾಗ, ಎಷ್ಟು ಸಂತೋಷವಾಗಿರಬಹುದು ಊಹಿಸಿನೋಡಿ. ಆ ಸಿನಿಮಾದಲ್ಲಿ ಹುಟ್ಟಿದ ಕನಸು, ಎಲ್ಲ ಯಶಸ್ಸಿನ ನಡುವೆ ಮರೆಯಾಗಿತ್ತು. ನೆನಪಿನಲ್ಲೆ ಮಾಸಿ ಹೋಗಿದ್ದ ಅಪ್ಪುವಿನ ಸಂಪೂರ್ಣ ರಾಮಾಯಣ ಅವರ ಕೈಗೆ ಸಿಕ್ಕ ತಕ್ಷಣ ಫೋಟೋ ತೆಗೆದು, ಬೆಟ್ಟದಹೂವು movieಲೀ ಎಷ್ಟೇ ದುಡ್ಡು save ಮಾಡಿದ್ರೂ ತೊಗೊಳೋಕ್ಕೆ ಆಗ್ಲಿಲ್ಲ, Finally a fan gifted it. ಎಂದು ಪೋಸ್ಟ್​ ಮಾಡಿದ್ರು ಅಪ್ಪು.

ಆ ಪುಸ್ತಕವನ್ನು ಅಲ್ಲಿ ತನಕ ಅಪ್ಪುಗೆ ಗಿಫ್ಟ್​ ಆಗಿ ಯಾರು ನೀಡಿರಲಿಲ್ಲ. ಅದು ಪುನೀತ್​ ಅವರ ಕೈ ಸೇರಿದಾಗ, ಅಪ್ಪು ಎಷ್ಟು ಸಂತೋಷ ಪಟ್ಟಿರಬಹುದು ಅಲ್ವಾ? ಇದಿಷ್ಟೆ ಅಲ್ಲಾ ಅಪ್ಪುಗೆ ಬೆಟ್ಟದ ಹೂವು ಸಿನಿಮಾ ಸಾಕಷ್ಟು ನೆನಪನ್ನು ಉಳಿಸಿರುವ ಸಿನಿಮಾ. ಬೆಟ್ಟದ ಹೂವಿನ ಬಗ್ಗೆ ಅಪ್ಪುಗೆ ವಿಶೇಷವಾದ ಪ್ರೀತಿ ಇದೆ, ಈ ಸಿನಿಮಾ ಅಪ್ಪು ಸಿನಿ ಜರ್ನಿಯ ಒಂದು ತಿರಿವು ಅಂದ್ರೂ ತಪ್ಪಾಗಲ್ಲ.

ಬೆಟ್ಟದ ಹೂವಿನಿಂದಲೇ ಮಾ. ಲೋಹಿತ್, ಪುನೀತ್​ ಆಗಿದ್ದು
ಹೌದು, ಅಣ್ಣಾವ್ರ ಕಿರಿ ಮಗ, ಸಣ್ಣ ವಯಸ್ಸಿನಲ್ಲೆ ಚಿತ್ರರಂಗಕ್ಕೆ ಇಳಿದು ಬಿಟ್ಟಿದ್ದ. ಆಗ ಅಪ್ಪು ಮಾಸ್ಟರ್​ ಲೋಹಿತ್​ ಆಗಿ ಬಂದಿದ್ದರು. ಎಳೆ ಕಂದನಾಗಿ ಸಾಕಷ್ಟು ಸಿನಿಮಾ ಮಾಡುತ್ತಿದ್ದ ಅಪ್ಪು ಮೊದಲ ಬಾರಿಗೆ ಕನ್ನಡಿಗರ ಕಣ್ಮಣಿ ಮಾಸ್ಟರ್​ ಪುನೀತ್​ ಎಂದು ತೆರೆ ಮೇಲೆ ಹೆಸರಿಸಲಾಯ್ತು. ಅಂದಿನಿಂದ ಲೋಹಿತ್​, ನಮ್ಮೆಲ್ಲರ ಪವರ್​ ಪುನೀತ್​ ಆಗಿದ್ದು.

ಬೆಟ್ಟದ ಹೂವಿನ ಊರಿಗೆ ಭೇಟಿ ನೀಡಿದ್ದ ಪವರ್​
ಅತ್ತಿಗುಂಡಿಯಲ್ಲಿ ನಿಂತು ಶೂಟಿಂಗ್​​ ಮೆಲಕು ಹಾಕಿದ್ದ ಅಪ್ಪು

ಅಪ್ಪು ಈಗ ಪವರ್​ ಸ್ಟಾರ್​ ಆಗಿ ಮನೆ ಮಗನಾಗಿದ್ದಾರೆ. ಆದ್ರೆ ಬೆಟ್ಟದ ಹೂವಿನ ನೆನಪು ಮಾತ್ರ ಅಪ್ಪುಗೆ ಮರೆಯಲು ಸಾಧ್ಯವೇ ಇಲ್ಲ. ಚಿಕ್ಕಮಗಳೂರಿನ ಅತ್ತಿಗುಂಡಿಯಲ್ಲಿ 20 ದಿನಗಳ ಕಾಲ ತಂಗಿದ್ದ ಚಿತ್ರತಂಡ ಅಲ್ಲೆ ಮನೆಯ ಸೆಟ್​ ಹಾಕಿದ್ರೂ. ಅಂದು ಬಾಲ ಅಪ್ಪುವಾಗಿ ನಟಿಸಿದ್ದ ಪುನೀತ್​ ಪವರ್​ ಸ್ಟಾರ್​ ಆದಾಗ ಅದೇ ಅತ್ತಿಗುಂಡಿಗೆ ಬೇಟಿ ನೀಡಿ ತಮ್ಮ ಅಂದಿನ ದಿನಗಳನ್ನು ಮೆಲುಕು ಹಾಕಿದ್ರು. ಆ ವೀಡಿಯೋ ನೋಡಿದ್ರೆ ಅಪ್ಪುವಿಗೆ ಬೆಟ್ಟದ ಹೂವು ಸಿನಿಮಾ ಮೇಲಿನ ಅಭಿಮಾನವನ್ನು ತಿಳಿಯಬಹುದು.

ಅಪ್ಪು ಇಂದು ನಮ್ಮೊಂದಿಗಿಲ್ಲ ಅನ್ನೋದನ್ನು ಬಿಟ್ಟರೆ, ಅವರ ನಗು, ಅವರ ಸ್ಟೈಲ್​, ಅವರ ಮಾತು ಹಾಗೂ ಸಿನಿಮಾಗಳು ನಮ್ಮಲ್ಲೇ ಇದೆ. ಈ ಮೂಲಕ ಅಪ್ಪು ಇನ್ನು ಜೀವಂತ. ಅಪ್ಪು ಎಂದೆದಿಗೂ ನಮ್ಮ ಪವರ್​ ಸ್ಟಾರ್.

News First Live Kannada


Leave a Reply

Your email address will not be published. Required fields are marked *