ಅಂದು ಜೋಡೆತ್ತು.. ಇಂದು ವಿರೋಧಿಗಳು; HDK-DKS ಮಹಾಕಾಳಗ ಶುರು


ಬೆಂಗಳೂರು: ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ ್ರರು ಅಥವಾ ಶತ್ರುಗಳು ಇಲ್ಲ ಅಂತಾರೆ.. ಅಧಿಕಾರ ನಿಮಿತ್ತಂ ಬಹುಕೃತ ವೇಶಂ.. ಅನ್ನೋ ಹಾಗೆ ಈಗ ಮಾಜಿ ಜೋಡೆತ್ತುಗಳ ನಡುವೆ ಮಹಾಕಾಳಗದ ಮುನ್ಸೂಚನೆ ಸಿಕ್ಕಿದೆ..!

ಹೌದು.. ರಾಮನಗರ ಜಿಲ್ಲೆಯ ಪ್ರಾಬಲ್ಯಕ್ಕಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡುವೆ ಈಗ ಪೈಪೋಟಿ ಹೆಚ್ಚಿದ್ದು, ಕಳೆದ ಚುನಾವಣೆ ವೇಳೆ ಜೋಡೆತ್ತುಗಳಾಗಿದ್ದವರು ಈ ಬಾರಿ ಬದ್ಧ ವಿರೋಧಿಗಳಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಅದೇ ಕಾರಣಕ್ಕೆ ಪರಸ್ಪರರನ್ನು ಹಣಿಯಲು ತಂತ್ರ, ಪ್ರತಿತಂತ್ರವನ್ನ ಇಬ್ಬರೂ ನಾಯಕರು ರೂಪಿಸುತ್ತಿದ್ದಾರೆ.

ಹಾಗೆ ನೋಡಿದ್ರೆ ಜ್ಯಾತ್ಯಾತೀತ ಜನತಾದಳ ಪಕ್ಷ ಎಷ್ಟೇ ಪ್ಯಾನ್ ಕರ್ನಾಟಕ ಪಕ್ಷ ಅಂತಾ ಹೇಳಿಕೊಂಡ್ರು ಅವರ ಪ್ರಾಬಲ್ಯ ತಕ್ಕಮಟ್ಟಿಗೆ ಕಂಡು ಬರೋದು ಹಳೇ ಮೈಸೂರು ಭಾಗದಲ್ಲಿ. ಅದ್ರಲ್ಲೂ ವಕ್ಕಲಿಗ ಸಮುದಾಯದ ಮತದಾರರು ಜೆಡಿಎಸ್​​ನ ಗಟ್ಟಿ ವೋಟ್ ಬ್ಯಾಂಕ್ ಆಗಿದ್ದೂ ಸುಳ್ಳಲ್ಲ. ಆದ್ರೆ ಯಾವಾಗ ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ್ರೋ.. ಜೆಡಿಎಸ್​​ನ ತಕ್ಕೆಯಿಂದ ವಕ್ಕಲಿಗ ಮತದಾರರನ್ನು ಸೆಳೆಯಲು ಹವಲು ಕ್ರಮಗಳನ್ನ ರೂಪಿಸೋಕೆ ಆರಂಭಿಸಿದ್ರು.. ಸ್ಥಳೀಯ ಜೆಡಿಎಸ್​ ನಾಯಕರನ್ನು, ಮುಖಂಡರನ್ನು ಕಾಂಗ್ರೆಸ್​ ತೆಕ್ಕೆಗೆ ತಂದ್ರು.. ಜೊತೆಗೆ, ಮುಂಬರೋ ಚುನಾವಣೆಯಲ್ಲಿ ಈ ಭಾಗದಲ್ಲಿ ಜೆಡಿಎಸ್​​ ಸೀಟುಗಳನ್ನು ಗಣನೀಯವಾಗಿ ಕುಗ್ಗಿಸಲು ಸಹ ಡಿ.ಕೆ ಶಿವಕುಮಾರ್ ಯತ್ನಿಸುತ್ತಿದ್ದಾರೆ.

ಒಂದೆಡೆ ಡಿ.ಕೆ ಶಿವಕುಮಾರ್ ತಂತ್ರ ಹೆಣೆಯುತ್ತಿದ್ದರೆ, ಇನ್ನೊಂದು ಕಡೆ ಹೆ.ಡಿ ಕುಮಾರ್ ಸ್ವಾಮಿ ಅವರು ಕೂಡ ಡಿ.ಕೆ ಶಿವಕುಮಾರ್​ಗೆ ಠಕ್ಕರ್ ಕೊಡಲು ಪ್ರತಿತಂತ್ರ ರೂಪಿಸುತ್ತಿದ್ದಾರೆ. ಹೀಗಾಗಿಯೇ, ಡಿಕೆಎಸ್ ಚುನಾವಣೆಗೆ ನಿಲ್ಲುವ ಕನಕ ಪುರ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಲು ಹೆಡಿಕೆ ಚಿಂತಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಾರಿ ಕನಕಪುರ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯನ್ನ ಕಣಕ್ಕಿಳಿಸುವುದರ ಮೂಲಕ ಡಿಕೆ ಶಿವಕುಮಾರ್​ಗೆ ಪಾಠ ಕಲಿಸಲು ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ಈ ಬಾರಿ ಚುನಾವಣೆಗೂ ಮುನ್ನವೇ ಚನ್ನಪಟ್ಟಣ ಪಕ್ಕದ ಕ್ಷೇತ್ರ ಕನಕಪುರದಲ್ಲೇ ಠಿಕಾಣಿ ಹೂಡಿ ಕಾರ್ಯತಂತ್ರ ರೂಪಿಸಲು ಕುಮಾರ ಸ್ವಾಮಿ ಮುಂದಾಗಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಡಿ.ಕೆ ಶಿವಕುಮಾರ್​​ರನ್ನ ಸೋಲಿಸೋ ಚಿಂತನೆಯಲ್ಲಿ ಕುಮಾರಸ್ವಾಮಿ ಇಲ್ಲೇ ಎಲ್ಲ ಗಮನ ಕೇಂದ್ರಿಕರಿಸಿದರೆ, ಉಳಿದ ಭಾಗದಲ್ಲಿ ಅಳಿದುಳಿದ ಕ್ಷೇತ್ರಗಳಲ್ಲಿ ಗೆಲ್ಲುತ್ತಿದ್ದ ಜೆಡಿಎಸ್​, ಅಲ್ಲಿ ಸೋಲಿನ ಆಘಾತ ಎದುರಿಸುವಂತೆ ಆಗಬಹುದಾ? ಅನ್ನೋದು ಸದ್ಯದ ಯಕ್ಷ ಪ್ರಶ್ನೆ.

ವಿಶೇಷ ವರದಿ: ಹರೀಶ್ ಕಾಕೋಳ್, ಪೊಲಿಟಿಕಲ್ ಬ್ಯೂರೋ

The post ಅಂದು ಜೋಡೆತ್ತು.. ಇಂದು ವಿರೋಧಿಗಳು; HDK-DKS ಮಹಾಕಾಳಗ ಶುರು appeared first on News First Kannada.

News First Live Kannada


Leave a Reply

Your email address will not be published.