ಬೆಂಗಳೂರು: ಚುನಾವಣಾ ಸಮಯದಲ್ಲಿ ವಿರೋಧಿಗಳಾಗಿದ್ದವರು ಇಂದು ಸ್ನೇಹಿತರಾಗಿ ಒಟ್ಟಿಗೆ ಬರ್ತ ಡೇ ಆಚರಣೆ ಮಾಡುವ ಮೂಲವಕವಾಗಿ ಸುದ್ದಿಯಾಗಿದ್ದಾರೆ.

2013ರ ವಿಧಾನಸಭಾ ಚುನಾವಣೆ ಅದು. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಮೂವರು ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ರಾಜಕೀಯ ವಿರೋಧಿಗಳಾಗಿದ್ದವರು ಇವತ್ತು ಒಂದೇ ಪಕ್ಷದಲ್ಲಿ ಇದ್ದಾರೆ. ಮೂವರು ಸೇರಿ ಮಾಜಿ ಉಪಮೇಯರ್ ಹರೀಶ್ ಬರ್ತ್ ಡೇ ಆಚರಿಸಿದ್ದು ವಿಶೇಷವಾಗಿತ್ತು.

ಹೌದು, 2013ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಗೋಪಾಲಯ್ಯ, ಕಾಂಗ್ರೆಸ್ ನಿಂದ ನೆ.ಲ.ನರೇಂದ್ರಬಾಬು, ಬಿಜೆಪಿಯಿಂದ ಮಾಜಿ ಉಪಮೇಯರ್ ಹರೀಶ್ ಸ್ಪರ್ಧೆ ಮಾಡಿದ್ದರು. ಆಗ ಜೆಡಿಎಸ್ ನಿಂದ ಗೋಪಾಲಯ್ಯ ಗೆದ್ದಿದ್ದರು. ಈ ಮೂವರು ಬಿಜೆಪಿ ಪಕ್ಷದಲ್ಲೇ ಇದ್ದಾರೆ. ಇವತ್ತು ಮಾಜಿ ಉಪ ಮೇಯರ್ ಎಸ್ ಹರೀಶ್ ರವರ ಹುಟ್ಟು ಹಬ್ಬವನ್ನ ಆಚರಿಸಿದ್ದಾರೆ. ಒಂದೇ ಪ್ರೇಮ್ ನಲ್ಲಿ ಮೂವರ ಫೋಟೋ ನೋಡಿದವರು ಇದು ರಾಜಕೀಯ ಅಂದ್ರೆ ಅಂತಾ ಅಂದ್ಕೊಂಡಿದ್ದು ಸುಳ್ಳಲ್ಲ.

ಹರೀಶ್ ಹುಟ್ಟುಹಬ್ಬದ ಅಂಗವಾಗಿ ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ಶಾಸಕರ ಕಛೇರಿಯಲ್ಲಿ ಇಂದು ದಿನಸಿ ಕಿಟ್ ವಿತರಣೆ ಮಾಡಿದ್ದಾರೆ. ನಾಗಪುರ ಕಮಲಾನಗರ ನಂದಿನಿ ಬಡಾವಣೆಯ ಪೌರ ಕಾರ್ಮಿಕರುಗಳಿಗೆ ದಿನಸಿ ಧಾನ್ಯಗಳ ಕಿಟ್ ಅನ್ನು ಸ್ಥಳೀಯ ಶಾಸಕ ಹಾಗೂ ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ವಿತರಿಸಿದರು. ಗೋಪಾಲಯ್ಯ, ಹರೀಶ್, ನೆ.ಲ.ನರೇಂದ್ರ ಬಾಬು ಒಟ್ಟಿಗೆ ನಿಂತು ಕಿಟ್ ವಿತರಣೆ ಮಾಡಿದರು.

The post ಅಂದು ವಿರೋಧಿಗಳು-ಇಂದು ಸ್ನೇಹಿತರು: ಮೂವರು ಸೇರಿ ಬರ್ತ್ ಡೇ ಆಚರಣೆ appeared first on Public TV.

Source: publictv.in

Source link

Leave a comment