ಬಾಂಗ್ಲಾದೇಶ ತಂಡದ ಸ್ಟಾರ್ ಆಲ್​ರೌಂಡರ್​​ ಶಕೀಬ್​​​-ಹಲ್​-ಹಸನ್​, ಅತಿರೇಕವಾಗಿ ವರ್ತಿಸಿದ ಘಟನೆಯೊಂದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಢಾಕಾ ಪ್ರೀಮಿಯರ್ ಲೀಗ್​​ನಲ್ಲಿ ಆನ್-ಫೀಲ್ಡ್ ಅಂಪೈರ್​​​ನೊಂದಿಗೆ LBW ನಿರ್ಧಾರಕ್ಕೆ ಸಂಬಂಧಿಸಿ ಆಕ್ರೋಶಗೊಂಡ ಶಕೀಬ್, ಕೋಪದಲ್ಲಿ ಸ್ಟಂಪ್ಟ್ ಅನ್ನ ಕಾಲಿನಿಂದ ಒದ್ದಿದ್ದಾರೆ. ಇಷ್ಟೇ ಅಲ್ಲ, ಎರಡನೇ ಬಾರಿ ನಾನ್​ಸ್ಟೈಕ್​ನಲ್ಲಿದ್ದ ಅಂಪೈರ್ ಜೊತೆ ಮತ್ತೆ ವಾಗ್ವಾದಕ್ಕಿಳಿದಿದ್ದ ಶಕೀಬ್, ಸ್ಟಂಪ್ಸ್​ ಕಿತ್ತು ಬಿಸಾಡಿದ್ದಾರೆ. ಹಾಗಾಗಿ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡ ಶಕೀಬ್ ವಿರುದ್ಧ ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಮೊಹಮ್ಮದ್​​ ಸ್ಪೋರ್ಟಿಂಗ್ ಕ್ಲಬ್ ಹಾಗೂ ಅಬಹಾನಿ ಲಿಮಿಟೆಡ್ ನಡುವಿನ ಪಂದ್ಯದಲ್ಲಿ, ಈ ಆಘಾತಕಾರಿ ಘಟನೆ ನಡೆದಿದೆ. ಮೊಹಮ್ಮದ್​ ಪರ ಆಡ್ತಿರೋ ಶಕೀಬ್, ತನ್ನ ಬಾಂಗ್ಲಾದೇಶ ತಂಡದ ಸಹ ಆಟಗಾರ ಮುಶ್ಫಿಕುರ್​​ ರಹೀಮ್ LBWಗಾಗಿ ಮನವಿ ಮಾಡ್ತಾರೆ. ಅಂಪೈರ್ ಔಟೆಂದು ತೀರ್ಪು ನೀಡಲು ನಿರಾಕರಿಸಿದಾಗ ಶಕೀಬ್, ಕೋಪಗೊಂಡು ಮೈದಾನದಲ್ಲಿ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂದ್ಯ ಮುಗಿದ ಬಳಿಕ ಶಕೀಬ್​, ಘಟನೆಗೆ ಸಂಬಂಧಿಸಿದಂತೆ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

The post ಅಂಪೈರ್ ವಿರುದ್ಧ ಆಕ್ರೋಶ- ಬಾಂಗ್ಲಾ ಸ್ಟಾರ್ ಆಲ್​ರೌಂಡರ್ ಶಕೀಬ್ ‘ಗೂಂಡಾ’ಗಿರಿ..! appeared first on News First Kannada.

Source: newsfirstlive.com

Source link