ರಾಮನಗರ: ರೆಬೆಲ್​​ ಸ್ಟಾರ್ ಅಂಬರೀಶ್​​​ ಮುಂದೆ​​ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೈಕಟ್ಟಿ ನಿಂತ ಫೋಟೋ ಭಾರೀ ವೈರಲ್​​ ಆಗಿತ್ತು. ಮಂಡ್ಯ ಸಂಸದೆ ಸುಮಲತಾ ಅಂಬರೀಶ್​​​ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಶೇರ್​​ ಮಾಡಿ ಟ್ರಾಲ್​​ ಮಾಡುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ, ಅಂಬರೀಶ್​​ ಮುಂದೆ ಕೈಕಟ್ಟಿ ನಿಲ್ಲೋಕೆ ನಾನೇನ್​​ ಗುಲಾಮನ ಎಂದು ಕಿಡಿಕಾರಿದ್ದಾರೆ.

ಇಂದು ಬಿಡದಿಯಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಎಚ್​​.ಡಿ ಕುಮಾರಸ್ವಾಮಿ, ನಾನು ಜನ ಸಾಮಾನ್ಯರ ನಾಯಕ. ಜನರ ಬಳಿಯೂ ಹೀಗೆ ಕೈಕಟ್ಟಿ ನಿಲ್ಲುತ್ತೇನೆ. ನಾನು ಕೇವಲ ಅಂಬರೀಶ್​​​ ಬಳಿ ಮಾತ್ರ ಕೈಕಟ್ಟಿ ನಿಲ್ಲಲ್ಲ, ಅದು ನನ್ನ ಸಂಸ್ಕಾರ ಎಂದರು.

ಇದನ್ನೂ ಓದಿ: ಅಂಬರೀಶ್​ ಇದ್ದಾಗ ಯಾರ್ಯಾರು ಕೈಕಟ್ಟಿ ನಿಲ್ತಿದ್ರು? ವೈರಲ್​ ಆಯ್ತು ಹೆಚ್​​ಡಿಕೆ ಫೋಟೋ

ನಮ್ಮ ಬಗ್ಗೆ ಮಾತಾಡುವ ಯೋಗ್ಯತೆ ಸುಮಲತಾರಿಗಿಲ್ಲ. ಹಲವು ವರ್ಷಗಳಿಂದ ಭ್ರಷ್ಟಚಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದವರು ನಾವು. ನಮ್ಮ ವಿರುದ್ಧವೇ ಭ್ರಷ್ಟಚಾರದ ಆರೋಪ ಮಾಡುತ್ತಿದ್ದಾರೆ. ನನ್ನ ಜೀವನದಲ್ಲೇ ಸುಮಲತಾ ರೀತಿ ಭ್ರಷ್ಟ ಸಂಸದೆಯನ್ನು ಕಂಡಿಲ್ಲ. ಅವರಿಗೆ ಮಾಧ್ಯಮಗಳು ಅಷ್ಟು ಸ್ಕೋಪ್​​ ಕೊಡಬಾರದು ಎಂದು ಕುಟುಕಿದರು.

ಮುಂದಿನ ಚುನಾವಣೆಯಲ್ಲಿ ಮಂಡ್ಯದಲ್ಲಿ ನಾನೇನು ಎಂದು ತೋರಿಸುತ್ತೇನೆ. ದೇವೇಗೌಡರ ಕುಟುಂಬದ ತಾಕತ್ತು ತೋರಿಸಲಿದ್ದೇವೆ. ಸಮುಲತಾ ಮಂಡ್ಯದಲ್ಲಿ ಮುಂದಿನ ಚುನಾವಣೆ ಗೆಲ್ಲಲಿ ಎಂದು ಸವಾಲ್​ ಹಾಕಿದರು.

ಇದನ್ನೂ ಓದಿ: KRS ಡ್ಯಾಂ ಬಿರುಕು ವಿಚಾರ: ಪರೋಕ್ಷವಾಗಿ ಸುಮಲತಾ ವಿರುದ್ಧ ಪ್ರತಾಪ್ ಸಿಂಹ ಕಿಡಿ

The post ಅಂಬರೀಶ್​ ಮುಂದೆ ಕೈಕಟ್ಟಿ ನಿಲ್ಲೋಕೆ ನಾನೇನ್​​​ ಗುಲಾಮನೇ.. ಹಿಂಗ್ಯಾಕ್ ಕೇಳಿದ್ರು ಹೆಚ್​ಡಿಕೆ? appeared first on News First Kannada.

Source: newsfirstlive.com

Source link