ಅಂಬಾನಿ ಕುಟುಂಬಕ್ಕೆ ಲಂಡನ್ ವಾಸ್ತವ್ಯದ ಆಲೋಚನೆಯಿಲ್ಲ: ರಿಲಯನ್ಸ್​ ಇಂಡಸ್ಟ್ರೀಸ್ ಸ್ಪಷ್ಟನೆ | Reliance Industries Limited Clarifies On Speculation about Stoke Park Acquisition


ಅಂಬಾನಿ ಕುಟುಂಬಕ್ಕೆ ಲಂಡನ್ ವಾಸ್ತವ್ಯದ ಆಲೋಚನೆಯಿಲ್ಲ: ರಿಲಯನ್ಸ್​ ಇಂಡಸ್ಟ್ರೀಸ್ ಸ್ಪಷ್ಟನೆ

ಮುಕೇಶ್ ಅಂಬಾನಿ ಮತ್ತು ಲಂಡನ್​ನ ಸ್ಟೋಕ್​ ಪಾರ್ಕ್

ಮುಂಬೈ: ಅಂಬಾನಿ ಕುಟುಂಬವು ಲಂಡನ್​ಗೆ ಭಾಗಶಃ ವಾಸ್ತವ್ಯ ಬದಲಿಸುವ ಯಾವುದೇ ಆಸಕ್ತಿ ಹೊಂದಿಲ್ಲ ಎಂದು ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್ (RIL) ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ. ಲಂಡನ್​ನ ಸ್ಟೋಕ್ ಪಾರ್ಕ್​ಗೆ ಅಂಬಾನಿ ಕುಟುಂಬ ಭಾಗಶಃ ವಾಸ್ತವ್ಯ ಬದಲಿಸಲು ಆಲೋಚಿಸುತ್ತಿದೆ ಎಂದು ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ವರದಿಯು ಕೆಲ ಅನಗತ್ಯ ಮತ್ತು ಅನಪೇಕ್ಷಿತ ಆಧಾರ ರಹಿತ ಊಹಾಪೋಹಗಳಿಗೆ ಕಾರಣವಾಗಿದೆ ಎಂದು ರಿಲಯನ್ಸ್​ ಹೇಳಿದೆ.

ರಿಲಯನ್ಸ್​ನ ಅಧ್ಯಕ್ಷರು ಅಥವಾ ಅವರ ಕುಟುಂಬವು ಲಂಡನ್​ ಅಥವಾ ವಿಶ್ವದ ಬೇರೆ ಯಾವುದೇ ನಗರಕ್ಕೆ ವಾಸ್ತವ್ಯ ಬದಲಿಸುವ ಆಲೋಚನೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.

ರಿಲಯನ್ಸ್​ ಇಂಡಸ್ಟ್ರೀಸ್​ನ ಭಾಗವಾಗಿರುವ ಆರ್​ಐಐಎಚ್​ಎಲ್ ಲಂಡನ್​ನ ಸ್ಟೋಕ್ ಪಾರ್ಕ್ ಎಸ್ಟೇಟ್​ ಅನ್ನು ಈಚೆಗೆ ಖರೀದಿಸಿತ್ತು. ಪರಂಪರೆಯ ಮೌಲ್ಯ ಹೊಂದಿರುವ ಈ ಆಸ್ತಿಯನ್ನು ಉತ್ತಮ ಗಾಲ್ಫ್​ ಮತ್ತು ಕ್ರೀಡಾ ರೆಸಾರ್ಟ್​ ಆಗಿ ಅಭಿವೃದ್ಧಿಪಡಿಸುವುದು ಕಂಪನಿಯ ಉದ್ದೇಶವಾಗಿದೆ. ಪ್ಲಾನಿಂಗ್ ವೇಳೆ ಸ್ಥಳೀಯ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸಲಾಗುವುದು ಎಂದು ಭರವಸೆ ನೀಡಿದೆ.

ಈ ಆಸ್ತಿಯನ್ನು ತನ್ನ ಸುಪರ್ದಿಗೆ ಪಡೆದುಕೊಂಡ ನಂತರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಗ್ರಾಹಕ ವ್ಯವಹಾರವೊಂದು ರಿಲಯನ್ಸ್​ ಸಮೂಹದ ಭಾಗವಾದಂತೆ ಆಗಿದೆ. ಭಾರತವು ಹೆಸರುವಾಸಿಯಾಗಿರುವ ಆತಿಥ್ಯ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಲು ಈ ಪ್ರಯತ್ನ ನೆರವಾಗಲಿದೆ ಎಂದು ಆರ್​ಐಎಸ್ ಹೇಳಿದೆ.

ಇದನ್ನೂ ಓದಿ: Channapatna toys: ಅಂಬಾನಿಯ ರಿಲಯನ್ಸ್ ಸಹಭಾಗಿ ಸಂಸ್ಥೆಯ ನೆರವು, ಚನ್ನಪಟ್ಟಣದ ಬೊಂಬೆಗಳು ಸಿಂಗಾಪೂರಕ್ಕೆ ರಫ್ತು
ಇದನ್ನೂ ಓದಿ: Reliance Industries: ರಿಲಯನ್ಸ್​ ಇಂಡಸ್ಟ್ರೀಸ್​ಗೆ ಸೆಪ್ಟೆಂಬರ್​ ತ್ರೈಮಾಸಿಕದಲ್ಲಿ ದಾಖಲೆಯ 15,479 ಕೋಟಿ ರೂ. ಲಾಭ

TV9 Kannada


Leave a Reply

Your email address will not be published.