ಅಂಬಿ ಕಾಯಕ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ಭ್ರಷ್ಟ’ ಅಧಿಕಾರಿಗೆ ಎಸಿಬಿ ಶಾಕ್.. ಮುಂದುವರೆದ ಶೋಧ


ಮಂಡ್ಯ: ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಎಸಿಬಿ ಟೀಮ್‌ಗಳು ದಾಳಿ ನಡೆಸಿ ಹಲವು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ಕೊಟ್ಟಿದ್ರು. ಏಕಾಏಕಿ ದಾಳಿಮಾಡಿದ ಎಸಿಬಿ ಅಧಿಕಾರಿಗಳು ಮನೆಯಲ್ಲಿ ಬಚ್ಚಿಟ್ಟ ಹಣ, ಒಡವೆಗಳನ್ನ ಪತ್ತೆ ಹಚ್ಚಿದ್ದಾರೆ. ಕೆಲವರನ್ನ ವಶಕ್ಕೆ ಪಡೆದು ಹೆಚ್ಚಿನ ತನಿಖೆಯನ್ನ ಮುಂದುವರೆಸಿದ್ದಾರೆ. ಇದರಲ್ಲಿ ಕೆಆರ್‌ಪೇಟೆ HLBC ಎಕ್ಸಿಕ್ಯುಟಿವ್ ಇಂಜಿನಿಯರ್ ಶ್ರೀನಿವಾಸ್.ಕೆ ನಿವಾಸದ ಮೇಲೆ ಕೂಡ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ನಗದು, ಚಿನ್ನ, ಬೆಳ್ಳಿ, ಜಮೀನು, ನಿವೇಶನದ ಕಡತಗಳು ಪತ್ತೆಯಾಗಿತ್ತು.

ವಿಶೇಷ ಎಂದರೇ, ಅಂಬಿ ಕಾಯಕ ಪ್ರಶಸ್ತಿ ಸ್ವೀಕರಿಸಬೇಕಿದ್ದ ದಿನವೇ ಇಂಜಿನಿಯರ್ ಶ್ರೀನಿವಾಸ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ನಿನ್ನೆ ಸಂಜೆ ಮಂಡ್ಯದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನೆರವೇರಿತ್ತು. ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು, ಮಂಡ್ಯದ ರೈತ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲಾಗಿತ್ತು. ವಿವಿಧ ಕ್ಷೇತ್ರಗಳ ಹತ್ತು ಜನರಿಗೆ ಅಂಬಿ ಕಾಯಕ ಪ್ರಶಸ್ತಿ ನೀಡಲಾಗಿತ್ತು. ಇದರಲ್ಲಿ ಕೆ.ಆರ್.ಪೇಟೆಯ HLBC ಇಂಜಿನಿಯರ್ ಆಗಿರುವ ಕೆ.ಶ್ರೀನಿವಾಸ ಕೂಡ ಒಬ್ಬರಾಗಿದ್ದರು.

ಆದರೆ ಎಸಿಬಿ ದಾಳಿ ಹಿನ್ನಲೆ ಕಾರ್ಯಕ್ರಮಕ್ಕೆ ಗೈರಾಗಿದ್ದ ಶ್ರೀನಿವಾಸ್​​ ಗೈರಾಗಿದ್ದರು. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ‌ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಇಂದು ಕೂಡ ಎಸಿಬಿ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ನಿನ್ನೆ ಮೈಸೂರಿನ ನಿವಾಸ, ನಂಜನಗೂಡಿನ ಫಾರ್ಮ್​ ಹೌಸ್ ಹಾಗೂ ಕೆಆರ್‌ಪೇಟೆ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಇಂದು ಕೂಡ ಎಸಿಬಿ ದಾಳಿ ಮುಂದೂವರೆದಿದ್ದು, ಶ್ರೀನಿವಾಸ್ ಮೈಸೂರಿನ ಕೆನರಾ ಬ್ಯಾಂಕ್‌ನಲ್ಲಿ ಎರಡು ಲಾಕರ್ ಹೊಂದಿದ್ದಾರೆ. ಈ ಲಾಕರ್​ಅನ್ನು ಇಂದು ತೆರೆದು ಪರಿಶೀಲನೆ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

News First Live Kannada


Leave a Reply

Your email address will not be published. Required fields are marked *