ಅಂಬಿ ಸ್ಮಾರಕ ನಿರ್ಮಾಣವಾಗೋಕೆ ಕುಮಾರಸ್ವಾಮಿಯವರೇ ಕಾರಣ- ಶಾಸಕ ಡಿ.ಸಿ. ತಮ್ಮಣ್ಣ

ಅಂಬಿ ಸ್ಮಾರಕ ನಿರ್ಮಾಣವಾಗೋಕೆ ಕುಮಾರಸ್ವಾಮಿಯವರೇ ಕಾರಣ- ಶಾಸಕ ಡಿ.ಸಿ. ತಮ್ಮಣ್ಣ

ಮಂಡ್ಯ: ಅಂಬಿ ಸ್ಮಾರಕ ಕುಮಾರಸ್ವಾಮಿ ಮಾಡಿದ್ದಲ್ಲ ಎಂಬ ವಿಚಾರಕ್ಕೆ ಸಂಬಂಧ ಪಟ್ಟಂತೆ ಜಿಲ್ಲೆಯಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆ ಕೊಟ್ಟಿದ್ದಾರೆ.

ಅಂಬಿ ಸ್ಮಾರಕ ಆಗಲು ಕಾರಣವೇ ಕುಮಾರಸ್ವಾಮಿ.. ಕುಮಾರಸ್ವಾಮಿ ಅವರು ಇಲ್ಲ ಅಂದಿದ್ರೆ ಅಂಬರೀಶ್ ಸ್ಮಾರಕ ಆಗುತ್ತಿರಲಿಲ್ಲ. ವಿಷ್ಟುವರ್ಧನ್ ಅವರ ಸ್ಮಾರಕಕ್ಕೆ ಯಾವ ಸರ್ಕಾರದಿಂದಲೂ ಜಾಗ ಕೊಡೋಕೆ ಆಗಿಲ್ಲ, ಕುಮಾರಸ್ವಾಮಿ ಅವರು ಇಲ್ಲ ಅಂದಿದ್ರೆ ಸ್ಮಾರಕಕ್ಕೆ ಜಾಗ ಸಿಗುತ್ತಿರಲಿಲ್ಲ. ನಾನು, ಕೆಎಸ್‌ಆರ್‌ಟಿಸಿ ಜಾಗ ಕೊಡಲು ನಿರ್ಧಾರ ಮಾಡಿದ್ದೆ. ಆದ್ರೆ, ಆ ಜಾಗ ಬೇಡ ಎಂದರು..
ಆ ನಂತರ ಕುಮಾರಸ್ವಾಮಿ ಅವರು ಜಾಗ ನೀಡಿದ್ದಾರೆ ಅಂತ ಶಾಸಕ ಡಿ.ಸಿ. ತಮ್ಮಣ್ಣ ಹೇಳಿದ್ದಾರೆ.

ಇನ್ನು, ಜೆಡಿಎಸ್ v/s ಸುಮಲತಾ ನಡುವಿನ ಮಾತಿನ ಸಮರದ ವಿಚಾರಕ್ಕೆ ಸಂಬಂಧಪಟ್ಟಂತೆ, ಉಭಯ ನಾಯಕರುಗಳಿಗೆ ಜೆಡಿಎಸ್ ಶಾಸಕ ಸಲಹೆ ನೀಡಿದ್ದಾರೆ. ಟೀಕೆಗಳು ಆರೋಗ್ಯಕರವಾಗಿ ಇರಬೇಕು, ಟೀಕೆ ಅಶ್ಲೀಲವಾಗಬಾರದು. ನಮ್ಮ ತಪ್ಪು ಕಾಣಬೇಕು ಅಂದ್ರೆ ಟೀಕಾಕಾರರು ಇರಬೇಕು. ಇಬ್ಬರೂ ನಾಯಕರು ಆರೋಗ್ಯಕರವಾಗಿ ಚರ್ಚೆ ಮಾಡಬೇಕು ಅಂತ ಹೇಳಿದ್ದಾರೆ.

The post ಅಂಬಿ ಸ್ಮಾರಕ ನಿರ್ಮಾಣವಾಗೋಕೆ ಕುಮಾರಸ್ವಾಮಿಯವರೇ ಕಾರಣ- ಶಾಸಕ ಡಿ.ಸಿ. ತಮ್ಮಣ್ಣ appeared first on News First Kannada.

Source: newsfirstlive.com

Source link