ಹೈದರಾಬಾದ್: ಅಂಬುಲೆನ್ಸ್ ಸಿಗದೆ ಇರುವ ಕಾರಣದಿಂದ ಬೈಕ್‍ನಲ್ಲಿ ತಾಯಿ ಶವವನ್ನು ಸಾಗಿಸಿರುವ ಮನಕಲಕುವಂತಹ ಘಟನೆ ಆಂದ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಮಂದಾಸ್ ಮಂಡಲ್ ಗ್ರಾಮದಲ್ಲಿ ನಡೆದಿದೆ.

50 ವರ್ಷದ ಮಹಿಳೆಗೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದವು. ಕೊರೊನಾ ಪರೀಕ್ಷೆ ಮಾಡಲಾಗಿತ್ತು. ವರದಿ ಬರುವಷ್ಟರಲ್ಲಿ ಮಹಿಳೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಶ್ರೀಕಾಕುಲಂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆರೋಗ್ಯಸ್ಥಿತಿ ತುಂಬಾ ಗಂಭೀರವಾಗಿರುವುದರಿಂದ ಆಸ್ಪತ್ರೆಯಲ್ಲಿಯೆ ಮಹಿಳೆ ಸಾವನ್ನಪ್ಪಿದ್ದಾರೆ.

 ಶವವನ್ನು ಸಾಗಿಸಲು ಅಂಬುಲೆನ್ಸ್ ದೊರೆಯಲಿಲ್ಲ. ಎಷ್ಟೇ ಸಮಯ ಕಾದರು ಅಂಬುಲೆನ್ಸ್ ಬಾರದೇ ಇದ್ದಾಗ ಮೃತಳ ಮಗ ಮತ್ತು ಅಳಿಯ ಶವವನ್ನು ಬೈಕ್ ಮೇಲೆ ಇಟ್ಟುಕೊಂಡು ತಮ್ಮೂರಿಗೆ ಸಾಗಿಸಿ ಅಂತ್ಯಕ್ರೀಯೆ ನೆರವೇರಿಸಿದ್ದಾರೆ.

The post ಅಂಬುಲೆನ್ಸ್ ಸಿಗದೆ ಬೈಕ್‍ನಲ್ಲಿ ತಾಯಿ ಶವ ಸಾಗಿಸಿದ appeared first on Public TV.

Source: publictv.in

Source link