ಅಂಬ್ಯುಲೆನ್ಸ್​ನಲ್ಲಿಯೇ ಹೆರಿಗೆಯಾಯ್ತು! ತಾಯಿ ಮಗು ಸೇಫ್, ಸಕಾಲದಲ್ಲಿ ನೆರವಾದ ಪುರುಷ ಸಿಬ್ಬಂದಿ | Woman gives birth to a baby girl in Ambulance in koppa taluk chikmagalur


ನೋವನ್ನ ತಡೆದುಕೊಳ್ಳಲಾಗದೇ ಮಹಿಳೆ ಕಿರುಚಾಟ ಆರಂಭಿಸಿದ್ದಾರೆ. ಆಗ ಅಂಬ್ಯುಲೆನ್ಸ್ನಲ್ಲಿದ್ದ ಸಿಬ್ಬಂದಿ ಅಶ್ವಿನ್ ಹಾಗೂ ಚಾಲಕ ಮನ್ಸೂರ್ ಅನಿವಾರ್ಯವಾಗಿ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ.

ಅಂಬ್ಯುಲೆನ್ಸ್​ನಲ್ಲಿಯೇ ಹೆರಿಗೆಯಾಯ್ತು! ತಾಯಿ ಮಗು ಸೇಫ್, ಸಕಾಲದಲ್ಲಿ ನೆರವಾದ ಪುರುಷ ಸಿಬ್ಬಂದಿ

ಅಂಬ್ಯುಲೆನ್ಸ್​ನಲ್ಲಿಯೇ ಹೆರಿಗೆಯಾಯ್ತು! ತಾಯಿ ಮಗು ಸೇಫ್, ಸಕಾಲದಲ್ಲಿ ನೆರವಾದ ಪುರುಷ ಸಿಬ್ಬಂದಿ

TV9kannada Web Team

| Edited By: sadhu srinath

Aug 23, 2022 | 9:19 PM
ತುಂಬು ಗರ್ಭಿಣಿಯನ್ನ ಕರೆದುಕೊಂಡು ಹೋಗುವ ವೇಳೆ ಪುರುಷ ಸಿಬ್ಬಂದಿಗಳೇ ಇದ್ದ ಆಂಬ್ಯುಲೆನ್ಸ್ನಲ್ಲಿ (Ambulance) ಹೆರಿಗೆ ಮಾಡಿಸಿದ ಅಪರೂಪದ ಘಟನೆ ಚಿಕ್ಕಮಗಳೂರು (chikmagalur) ಜಿಲ್ಲೆ ಕೊಪ್ಪ ತಾಲೂಕಿನ ಶಾಂತಿಪುರದಲ್ಲಿ ನಡೆದಿದೆ. ಬಾಳೆಹೊನ್ನೂರಿನಿಂದ ಕೊಪ್ಪ ಆಸ್ಪತ್ರೆಗೆ ಅಂಬ್ಯುಲೆನ್ಸ್ನಲ್ಲಿ ಕರೆದುಕೊಂಡು ಹೋಗುವ ವೇಳೆ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿದೆ.

ನೋವನ್ನ ತಡೆದುಕೊಳ್ಳಲಾಗದೇ ಮಹಿಳೆ ಕಿರುಚಾಟ ಆರಂಭಿಸಿದ್ದಾರೆ. ಆಗ ಅಂಬ್ಯುಲೆನ್ಸ್ನಲ್ಲಿದ್ದ ಸಿಬ್ಬಂದಿ ಅಶ್ವಿನ್ ಹಾಗೂ ಚಾಲಕ ಮನ್ಸೂರ್ ಅನಿವಾರ್ಯವಾಗಿ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಹೆರಿಗೆ ಸುಸೂತ್ರವಾಗಿ ಅಂಬ್ಯಲೆನ್ಸ್ನಲ್ಲಿ ನಡೆದಿದೆ. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದು, ಕೊಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಕಾಲಕ್ಕೆ ಹೆರಿಗೆ ಮಾಡಿಸಲು ನೆರವಾದ ಅಶ್ವಿನ್ ಹಾಗೂ ಮನ್ಸೂರ್ ಕಾರ್ಯಕ್ಕೆ ಜನಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.