ಅಕಸ್ಮಾತ್ RSS ಇರದಿದ್ರೆ ಭಾರತ ಪಾಕಿಸ್ತಾನ ಆಗುತ್ತಿತ್ತು -ಮಾಜಿ ಸಿಎಂ ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸ್ಪರ್ಧೆಗೆ ಬಿದ್ದವರ ರೀತಿಯಲ್ಲಿ ಆರ್.ಎಸ್.ಎಸ್ ಮೇಲೆ ಟೀಕೆ ಮಾಡುತ್ತಿದ್ದಾರೆ.
RSS ಸಂಘಟನೆಯನ್ನ ರಾಜಕೀಯಕ್ಕಾಗಿ ಬಳಸುತ್ತಿದ್ದಾರೆ ಎಮದು ಮಾಜಿ ಸಿಎಂ ಜಗದೀಶ್​ ಶೆಟ್ಟರ್​​ ಕಿಡಿಕಾರಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶೆಟ್ಟರ್​, ಆರ್​ಎಸ್​​ಎಸ್​​ 100 ವರ್ಷದ ಸಂಸ್ಥೆ, ದೇಶ ಸುರಕ್ಷಿತವಾಗಿದೆ ಎಂದರೇ ಅದಕ್ಕೆ ಆರ್​​ಎಸ್​​ಎಸ್​ ಕಾರಣ. ದೇಶದ ಸಂಸ್ಕೃತಿ ಪರಂಪರೆ ಉಳಿಸಿಕೊಂಡು ಹೋಗುವ ಕಾರ್ಯವನ್ನು ಆರ್​ಎಸ್​ಎಸ್​ ಮಾಡುತ್ತಿದೆ. ಅಕಸ್ಮಾತ್ ಆರ್​​ಎಸ್​​ಎಸ್​ ಇರದಿದ್ರೆ ಭಾರತ 4-5 ಪಾಕಿಸ್ತಾನ ಆಗುತ್ತಿತ್ತು. ದೇಶದಲ್ಲಿ ಸೌಹಾರ್ದವನ್ನು ಕಾಪಾಡಿಕೊಂಡು ಹೋಗುವಲ್ಲಿ ಆರ್​​ಎಸ್​​ಎಸ್​​ ಪ್ರಮುಖ ಪಾತ್ರ ವಹಿಸಿತ್ತು.

ಕುಮಾರಸ್ವಾಮಿ ಹೇಳಿದಂತೆ ಹಿಂದಿನ ಸಂಘ ಬೇರೆ ಈಗೀಗ ಸಂಘ ಬೇರೆ ಅಂತಾರೆ.. ಹಿಂದಿನ ಜೆಡಿಎಸ್, ಹಿಂದಿನ ಜನತಾದಳ, ಹಿಂದಿನ ಕಾಂಗ್ರೆಸ್ ಅಂದ್ರೆ ನಂಬಬಹುದು. ಆದ್ರೆ ಆರ್​​ಎಸ್​​ಎಸ್​ ಯಾವಾಗಲೂ ಆರ್​ಎಸ್​​ಎಸ್​. ಎಂದಿಗೂ ಅದು ಬದಲಾಗುವುದಿಲ್ಲ. ಸಂಘಟದ ಮೂಲತತ್ವ, ವಿಚಾರಗಳು ಎಂದೂ ಬದಲಾಗುವುದಿಲ್ಲ. ಸಂಘ ಸ್ಥಾಪನೆಯದಾಗಿನಿಂದ ಒಂದೇ ವಿಚಾರ, ದೇಶ ಮೊದಲು ಉಳಿದಿದ್ದೆಲ್ಲ ನಂತರ ಎನ್ನುವ ತತ್ವದಲ್ಲಿದೆ. ಕುಮಾರಸ್ವಾಮಿ, ಸಿದ್ದರಾಯಯ್ಯ, ಕಾಂಗ್ರೆಸ್, ಜನತಾ ಪರಿವಾರ ಬದಲಾದ್ರೂ ಸಂಘ ಬದಲಾಗಿಲ್ಲ. ಅಲ್ಪಸಂಖ್ಯಾತರ ಓಲೈಕೆಗಾಗಿ ಹೆಚ್​ಡಿಕೆ, ಸಿದ್ದರಾಮಯ್ಯ ಪೈಪೋಟಿ ಗೆ ಇಳಿದಿದ್ದಾರೆ. ಅವರ ಓಲೈಕೆ ಒಂದೇ ಉದ್ದೇಶಕ್ಕಾಗಿ ಆರ್​​ಎಸ್​​ಎಸ್​​ಅನ್ನು ಯಾಕೆ ಬೈಯ್ಯುತ್ತಿರಿ..? ಆರ್​ಎಸ್​​ಎಸ್​ ಸಂಘಟನೆ ಯಾಕೆ ಟಾರ್ಗೆಟ್ ಮಾಡ್ತೀರಿ, ದೇಶಕ್ಕೇನಾದರೂ ಅನ್ಯಾಯ ಮಾಡಿದ್ದಾರಾ.? ನಿಮ್ಮ ರಾಜಕಾರಣದ ತೆವಲಿಗಾಗಿ ಆರ್​​ಎಸ್​ಎಸ್​ ಬೈಯೋದು ಸೂಕ್ತವಲ್ಲ. ಇದರಿಂದ ನಿಮಗೆ ಧಕ್ಕೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.

News First Live Kannada

Leave a comment

Your email address will not be published. Required fields are marked *