ಅಕಾಲಿಕ ಮಳೆಗೆ ಮೂಕ ಪ್ರಾಣಿಗಳ ರೋಧನೆ; ಮೂರು ದಿನಗಳಿಂದ ನಡುಗಡ್ಡೆಯಲ್ಲಿ ಸಿಲುಕಿರುವ ಗೋವುಗಳು | Livestock are struggling with continuous rainfall at koppal


ಅಕಾಲಿಕ ಮಳೆಗೆ ಮೂಕ ಪ್ರಾಣಿಗಳ ರೋಧನೆ; ಮೂರು ದಿನಗಳಿಂದ ನಡುಗಡ್ಡೆಯಲ್ಲಿ ಸಿಲುಕಿರುವ ಗೋವುಗಳು

ದನಕರುಗಳು

ಕೊಪ್ಪಳ: ನಿರಂತರ ಮಳೆಯಿಂದ ಸೃಷ್ಟಿಯಾದ ಅವಾಂತರ ಅಷ್ಟಿಷ್ಟಲ್ಲ. ಬೆಳೆದ ಬೆಳೆ ರೈತರ ಕೈ ಸೇರುವ ಮೊದಲು ನೀರು ಪಾಲಾಗಿದೆ. ಮಳೆ ನೀರು ಮನೆಗೆ ನುಗ್ಗಿ ಜನರು ಪರದಾಡುತ್ತಿದ್ದಾರೆ. ರಾಜ್ಯದ ಹಲವು ಕಡೆ ಸುರಿದ ಧಾರಾಕಾರ ಮಳೆಗೆ ಜನರಿಗೆ ಭೀತಿ ಎದುರಾಗಿದೆ. ಈ ನಡುವೆ ಕೊಪ್ಪಳದಲ್ಲಿ ಮೂಕ ಪ್ರಾಣಿಗಳು ನಡುಗಡ್ಡೆಯಲ್ಲಿ ಸಿಲುಕಿ ರೋಧನೆ ಅನುಭವಿಸುತ್ತಿವೆ. ಕಳೆದ ಮೂರು ದಿನಗಳಿಂದ ಕೊಪ್ಪಳ ತಾಲೂಕಿನ ಶಿವಪುರ ಗ್ರಾಮದ ಮಾರ್ಖಂಡೇಶ್ವರ ನಡುಗಡ್ಡೆಯಲ್ಲಿ ಗೋವುಗಳು ಸಿಲುಕೊಂಡಿವೆ.

ತುಂಗಾಭದ್ರ ಜಲಾಶಯದ ನೀರಿನ ಮಟ್ಟ ಹೆಚ್ಚಳವಾದ ಹಿನ್ನೆಲೆ ಅಪಾರ ಪ್ರಮಾಣದ ನೀರು ಹೊರಕ್ಕೆ ಬಿಡಲಾಗಿದೆ. ನದಿದಾಟಲು ಆಗದೆ ದನಕರುಗಳು ನಡುಗಡ್ಡೆಯಲ್ಲಿ ಸಿಲುಕಿವೆ. ಮೇವು ಇಲ್ಲದೆ ನಿತ್ರಾಗೊಂಡ ಗೋವುಗಳಲ್ಲಿ ಈಗಾಗಲೇ ಎರಡು ಕರುಗಳು ಮೃತಪಟ್ಟಿವೆ. ಕೂಡಲೇ ಏನಾದರೂ ವ್ಯವಸ್ಥೆ ಮಾಡಿ ಅಂತಾ ಜಿಲ್ಲಾಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡುತ್ತಿದ್ದಾರೆ.

ಮಳೆ ನಿಂತರೂ ನಿಲ್ಲದ ಮಳೆ ಅನಾಹುತ
ಕೋಲಾರದಲ್ಲಿ ಮಳೆ ನಿಂತರೂ ಅನಾಹುತ ನಿಂತಿಲ್ಲ. ತೋಟಗಳಲ್ಲಿ ಇನ್ನೂ ನೀರು ನಿಂತಿದ್ದು, ಟೊಮ್ಯಾಟೋ, ಕೋಸು, ಕ್ಯಾಪ್ಸಿಕಂ ಕೊಳೆತು ಹೋಗುವ ಭೀತಿ ಶುರುವಾಗಿದೆ. ನಿರಂತರ ಮಳೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆಗಳು ನೀರು ಪಾಲಾಗಿವೆ.

ನೀರಲ್ಲಿ ಕೊಳೆತು ನಿಂತ ಈರುಳ್ಳಿ, ಜೋಳ ಬೆಳೆ
ಇನ್ನು ಗದಗದಲ್ಲೂ ಮಳೆರಾಯನ ಅವಾಂತರಕ್ಕೆ ರೈತರು ಕಂಗಾಲಾಗಿದ್ದಾರೆ. ಈರುಳ್ಳಿ, ಗೋವಿನ ಜೋಳ ಬೆಳೆ ನೀರಲ್ಲಿ ಕೊಳೆತು ನಿಂತಿವೆ. ಕಟಾವಿಗೆ ಬಂದಿದ್ದ ಈರುಳ್ಳಿ ಈಗ ಕೊಳೆತು ನಾರುತ್ತಿದೆ ಅಂತ ರೈತರೊಬ್ಬರು ಕಣ್ಣೀರು ಹಾಕಿದ್ದಾರೆ. ಗೋವಿನ ಜೋಳ ಕೂಡಾ ಜಮೀನಿನಲ್ಲೇ ಮೊಳಕೆಯೊಡಿಯುತ್ತಿದೆ. ಲಕ್ಷಾಂತರ ರೂಪಾಯಿ ಆದಾಯ ನಿರೀಕ್ಷೆಯಲ್ಲಿದ್ದ ರೈತನಿಗೆ ಭಾರಿ ನಿರಾಸೆಯಾಗಿದೆ.

ಮಳೆ ಹಾನಿ ಪ್ರದೇಶಕ್ಕೆ ದಾವಣಗೆರೆ ಡಿಸಿ ಭೇಟಿ
ದಾವಣಗೆರೆ ಜಿಲ್ಲೆಯ ಮಳೆ ಹಾನಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದಾರೆ. ನೀರಿನಲ್ಲೇ ನಡೆದು ಮಹಾಂತೇಶ ಬೀಳಗಿ ಸಮೀಕ್ಷೆ ನಡೆಸಿದ್ದಾರೆ. ಚನ್ನಗಿರಿ ತಾಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದಾರೆ. ದಾವಣಗೆರೆಯಲ್ಲಿ ಸುಮಾರು 3,063 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 2,894 ಹೆಕ್ಟೇರ್ ಪ್ರದೇಶದಲ್ಲಿದ್ದ ಭತ್ತ, ಮೆಕ್ಕೆಜೋಳ ನೀರು ಪಾಲಾಗಿದೆ. ಮಳೆಯಿಂದ ಮೂವರ ಸಾವನ್ನಪ್ಪಿದ್ದು, 316 ಮನೆಗಳಿಗೆ ಹಾನಿಯಾಗಿವೆ ಅಂತ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ

Viral Video: ಅಮಾಯಕನಂತೆ ವರ್ತಿಸುತ್ತಾ ಸೈಕಲ್ ಕದ್ದು ಪರಾರಿಯಾಗಲು ಹೊರಟ ಕಳ್ಳ; ಮುಂದೇನಾಯ್ತು? ವಿಡಿಯೊ ನೋಡಿ

‘ನನ್ನ ಹುಟ್ಟುಹಬ್ಬಕ್ಕೆ ಅಪ್ಪು ಸೈಕಲ್​ ಗಿಫ್ಟ್​ ಮಾಡಿದ್ದ’; ವಿಶೇಷ ನೆನಪು ಮೆಲುಕು ಹಾಕಿದ ಶಿವಣ್ಣ

TV9 Kannada


Leave a Reply

Your email address will not be published. Required fields are marked *