ಅಕಾಲಿಕ ಮಳೆಯಿಂದ ಮೈಸೂರು ಬಳಿ ರೈತರೊಬ್ಬರ ಪೌಲ್ಟ್ರಿ ಫಾರ್ಮ್ ಧ್ವಂಸ, ಶಾಸಕರಿಂದ ನೆರವು ಯಾಚಿಸಿದ ಕುಟುಂಬ | A dejected farmer seeks help from MLA after untimely rains destroy his poultry farm near Mysuru ARB


ರಾಜ್ಯದ ಹಲವಾರು ಭಾಗಗಳಲ್ಲಿ ಅಕಾಲಿಕ (untimely) ಮಳೆಯಾಗುತ್ತಿದೆ. ಏಪ್ರಿಲ್ ತಿಂಗಳಿನ ಬಿಸಿಲಿನಿಂದ ಕಂಗೆಟ್ಟಿರುವ ನಗರ ಪ್ರದೇಶಗಳ ನಿವಾಸಿಗಳಿಗೆ ಮಳೆಯು ವಾತಾವರಣವನ್ನು ಕೊಂಚ ತಂಪಾಗಿಸುತ್ತಿರುವುದರಿಂದ ನಿಸ್ಸಂದೇಹವಾಗಿ ಖುಷಿಯಾಗುತ್ತಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ವರುಣನ ಅಕಾಲಿಕ ಸುರಿತ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಉದ್ದೂರಿನನಲ್ಲಿ (Uddur) ನಡೆಸುತ್ತಿದ್ದ ಈ ಕುಟುಂಬ ಮಳೆಯಿಂದ ಬರ್ಬಾದಾಗಿದೆ ಮಾರಾಯ್ರೇ. ಫಾರ್ಮ್ ಮಾಲೀಕರಾದ ರಾಮಚಂದ್ರಪ್ಪ (Ramachandrappa) ಮತ್ತು ಅವರ ತಾಯಿ ಹೇಳುವ ಪ್ರಕಾರ ಗಾಳಿ ಮತ್ತು ಮಳೆಯಿಂದ ಅವರ ಶೆಡ್ ಕಿತ್ತು ಹೋಗಿದೆ ಮತ್ತು ಅದರೊಳಗಿದ್ದ ಸಾವಿರಾರು ಕೋಳಿಗಳು ಕೊಚ್ಚಿಕೊಂಡು ಹೋಗಿವೆ. ಫಾರ್ಮ್ ನಲ್ಲಿದ್ದ ಬರ್ಡ್ ಗಳು ಉಳಿದಿಲ್ಲ. ಕೋಳಿ ಫಾರ್ಮ್ ಮೂಲಕ ಬದುಕು ಕಟ್ಟಿಕೊಳ್ಳಬೇಕೆಂದಿದ್ದ ಅವರ ಕನಸು ನುಚ್ಚುನೂರಾಗಿದೆ.

ರಾಮಚಂದ್ರ ತಮ್ಮ ಸಂಬಂಧಿಕರೊಬ್ಬರ ಪಾಲುದಾರಿಕೆಯೊಂದಿಗೆ ಪೌಲ್ಟ್ರಿ ಫಾರ್ಮ್ ಆರಂಭಿಸಿದ್ದಾರೆ. ತಮ್ಮ ವೆಂಚರ್ ಗಾಗಿ ಬ್ಯಾಂಕೊಂದರಿಂದ ರೂ. 10 ಲಕ್ಷ ಸಾಲ ತೆಗೆದಿದ್ದಾರೆ. ಬ್ಯಾಂಕ್ ಅಧಿಕಾರಿಗಳಿಗೆ ತಮ್ಮ ಗೋಳು ಹೇಳಿಕೊಂಡು ತೆಗೆದುಕೊಡಿರುವ ಸಾಲದ ಮೊತ್ತದಲ್ಲಿ ಒಂದಷ್ಟು ಭಾಗವನ್ನು ಮನ್ನಾ ಮಾಡಿ ಅಂತ ಮನವಿ ಮಾಡಿಕೊಂಡಾಗ, ಅವರು ನಿರಾಕರಿಸಿದ್ದಾರೆ.

ಪೌಲ್ಟ್ರಿ ಫಾರ್ಮ್ ಮೇಲೆ ವಿಮೆ ಮಾಡಿಸದಿರುವುದು ರಾಮಚಂದ್ರ ಅವರ ತಪ್ಪು, ಅಸಲು ಮತ್ತು ಬಡ್ಡಿಯನ್ನು ಅವರು ಕಟ್ಟಲೇಬೇಕು ಅಂತ ಬ್ಯಾಂಕ್ ನವರು ಹೇಳಿದ್ದಾರೆ.

ಹಾಗಾಗಿ, ಹತಾಷರಾಗಿರುವ ರಾಮಚಂದ್ರ ಅವರು ತಮ್ಮ ಭಾಗದ ಶಾಸಕ ಎಚ್ ಪಿ ಮಂಜುನಾಥ ಅವರ ಮೊರೆಹೊಕ್ಕು ನೆರವು ಯಾಚಿಸುತ್ತಿದ್ದಾರೆ. ಶಾಸಕರು ಯಾವ ರೀತಿಯಲ್ಲಿ ಈ ಕುಟುಂಬಕ್ಕೆ ನೆರವಾಗುತ್ತಾರೆ ಅಂತ ಕಾದುನೋಡಬೇಕು. ಕುಟುಂಬಕ್ಕೆ ಯಾರಿಂದಾದರೂ ಸಹಾಯ ಆಗಬೇಕಿರುವುದು ಮಾತ್ರ ಸತ್ಯ.

TV9 Kannada


Leave a Reply

Your email address will not be published.