ಅಕ್ಟೋಬರ್​ನಲ್ಲಿ ತಿಂಗಳ ಎಸ್​ಐಪಿ ಸಂಗ್ರಹ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ರೂ. 10,518 ಕೋಟಿಗೆ | SIP Collection In October Month All Time High At Rs 10518 Crore


ಅಕ್ಟೋಬರ್​ನಲ್ಲಿ ತಿಂಗಳ ಎಸ್​ಐಪಿ ಸಂಗ್ರಹ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ರೂ. 10,518 ಕೋಟಿಗೆ

ಸಾಂದರ್ಭಿಕ ಚಿತ್ರ

2021ರ ಅಕ್ಟೋಬರ್ 31ರ ಹೊತ್ತಿಗೆ ಭಾರತೀಯ ಮ್ಯೂಚುವಲ್ ಫಂಡ್ ವಲಯದ ನಿರ್ವಹಣೆ ಅಡಿಯಲ್ಲಿ ಸರಾಸರಿ ಆಸ್ತಿಗಳು (Asset Under Management- AUMಗಳು) ಮತ್ತು ನಿವ್ವಳ AUMಗಳು ದಾಖಲೆಯ ಗರಿಷ್ಠ ಮಟ್ಟಕ್ಕೆ 38.21 ಲಕ್ಷ ಕೋಟಿ ರೂಪಾಯಿ ಮತ್ತು 37.33 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆ ಆಗಿದೆ ಎಂದು AMFI ಬುಧವಾರ ಬಿಡುಗಡೆ ಮಾಡಿದ ಡೇಟಾದಿಂದ ಗೊತ್ತಾಗಿದೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ (SIP) ಕೊಡುಗೆಯು ದಾಖಲೆಯ ಗರಿಷ್ಠ 10,518.53 ಕೋಟಿ ರೂಪಾಯಿಯಲ್ಲಿದೆ ಎಂದು ಎಂಎಫ್ ಅಸೋಸಿಯೇಷನ್ ​​ಡೇಟಾ ತೋರಿಸಿದೆ. ಆಯ್ದ ಮ್ಯೂಚುವಲ್ ಫಂಡ್ ಯೋಜನೆಯಲ್ಲಿ ಪೂರ್ವ-ನಿರ್ಧಾರಿತವಾಗಿ ತಿಂಗಳು- ತಿಂಗಳು ನಿಗದಿತ ಮೊತ್ತವನ್ನು ಹೂಡಿಕೆ ಮಾಡಲು ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್‌ಗಳು ನೀಡುವ ಆಯ್ಕೆಯನ್ನು SIP ಎನ್ನಲಾಗುತ್ತದೆ. SIP AUMಗಳು ಪರಿಶೀಲನೆಯ ತಿಂಗಳ ಅವಧಿಯಲ್ಲಿ 5.5 ಲಕ್ಷ ಕೋಟಿ ರೂಪಾಯಿಯ ಗುರುತನ್ನು ದಾಟಿದ್ದು, ಅಕ್ಟೋಬರ್ 31ರ ಅಂತ್ಯಕ್ಕೆ 5,53,532.08 ಕೋಟಿ ರೂಪಾಯಿಗಳಷ್ಟಿದೆ (5.53 ಲಕ್ಷ ಕೋಟಿ ರೂಪಾಯಿ).

SIP ಖಾತೆಗಳ ಸಂಖ್ಯೆಯು 2021ರ ಸೆಪ್ಟೆಂಬರ್​ನಲ್ಲಿ ಇದ್ದ 4,48,97,602ಕ್ಕೆ ಹೋಲಿಸಿದರೆ 2021ರ ಅಕ್ಟೋಬರ್​ನಲ್ಲಿ 4,64,30,598 ಸಂಖ್ಯೆ ತಲುಪುವ ಮೂಲಕ ಸಾರ್ವಕಾಲಿಕ ಗರಿಷ್ಠವಾಗಿದೆ. ಈಕ್ವಿಟಿ ವಿಭಾಗದಲ್ಲಿ ಇಎಲ್​ಎಸ್​ಎಸ್​ ಮತ್ತು ವ್ಯಾಲ್ಯೂ ಯೋಜನೆಗಳನ್ನು ಹೊರತುಪಡಿಸಿ ಎಲ್ಲವೂ ಪಾಸಿಟಿವ್ ಹರಿವನ್ನು ವರದಿ ಮಾಡಿದ್ದರೆ, ಹೈಬ್ರಿಡ್ ವರ್ಗದಲ್ಲಿ ಆರ್​ಬಿಟ್ರೇಜ್ ಮತ್ತು ಹೈಬ್ರಿಡ್ ಅಗ್ರೆಸಿವ್/ಸಮತೋಲಿತ ಯೋಜನೆಗಳನ್ನು ಹೊರತುಪಡಿಸಿ, ಯೋಜನೆಗಳು ಸೇರಿದಂತೆ ಉಳಿದವುಗಳು ವ್ಯಾಪಕವಾದ ಸ್ವೀಕಾರವನ್ನು ವರದಿ ಮಾಡಿದೆ ಎಂದು AMFI ಹೇಳಿಕೆ ತಿಳಿಸಿದೆ.

ಫಂಡ್ ಆಫ್ ಫಂಡ್‌ಗಳು, ಇಂಡೆಕ್ಸ್ ಫಂಡ್‌ಗಳು ಮತ್ತು ಇಟಿಎಫ್‌ಗಳು ಸಹ ಪಾಸಿಟಿವ್ ಹರಿವನ್ನು ವರದಿ ಮಾಡಿವೆ ಮತ್ತು ಒಟ್ಟಾರೆಯಾಗಿ ಅಕ್ಟೋಬರ್ 31, 2021ರಂತೆ 10,758.85 ಕೋಟಿ ರೂಪಾಯಿಗಳ ಪಾಸಿಟಿವ್ ಹರಿವನ್ನು ವರದಿ ಮಾಡಿದೆ.

ಅಕ್ಟೋಬರ್ ಮ್ಯೂಚುವಲ್ ಫಂಡ್ ಡೇಟಾದ ಇತರ ಪ್ರಮುಖಾಂಶಗಳು:
– ಅಕ್ಟೋಬರ್ 31, 2021ರಂತೆ ಫೋಲಿಯೋಗಳ ಸಂಖ್ಯೆ 11,43,80,871

– ಅಕ್ಟೋಬರ್‌ನಲ್ಲಿ ರೀಟೇಲ್ AUMಗಳು (ಈಕ್ವಿಟಿ + ಹೈಬ್ರಿಡ್ + ಸಲ್ಯೂಷನ್ ಆಧಾರಿತ ಯೋಜನೆಗಳು) ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ 18,01,588 ಕೋಟಿ ರೂಪಾಯಿ.

– ಈಕ್ವಿಟಿ ಆಧಾರಿತ ಯೋಜನೆಗಳಲ್ಲಿನ ಮ್ಯೂಚುವಲ್ ಫಂಡ್ AAUMಗಳು ಮತ್ತು ಹೈಬ್ರಿಡ್ ಆಧಾರಿತ ಯೋಜನೆಗಳಲ್ಲಿ ಏಪ್ರಿಲ್ 2021ರಿಂದ ಅಕ್ಟೋಬರ್ 2021ರ ಅವಧಿಯಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಏರಿಕೆಯಾಗಿದ್ದು, ಅಕ್ಟೋಬರ್ 31, 2021ರಂತೆ ಕ್ರಮವಾಗಿ 13.12 ಲಕ್ಷ ಕೋಟಿ ರೂಪಾಯಿ ಮತ್ತು 4.76 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್​ನ ಫಂಡ್ ಮ್ಯಾನೇಜರ್​ಗಳು ಬಸ್ಸಿನ ಡ್ರೈವರ್ ಅಥವಾ ವಿಮಾನದ ಪೈಲಟ್​ಗಳಿದ್ದಂತೆ: ಡಾ ಬಾಲಾಜಿ ರಾವ್

TV9 Kannada


Leave a Reply

Your email address will not be published. Required fields are marked *