ಅಕ್ಟೋಬರ್ 1ಕ್ಕೆ ಟಿವಿಯಲ್ಲಿ ಬಿಗ್ ಬಾಸ್ ಪ್ರಸಾರ ಆರಂಭ? ಸಿಕ್ತು ಹೊಸ ಅಪ್​​ಡೇಟ್​ | Hindi Bigg Boss Season 16 to Air from October 1st Says Report


ಈ ಬಾರಿ ‘ಬಿಗ್ ಬಾಸ್’ ಸಖತ್ ಅದ್ದೂರಿಯಾಗಿ ನಡೆಸಲು ಪ್ಲ್ಯಾನ್ ನಡೆದಿದೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಈ ರಿಯಾಲಿಟಿ ಶೋನ ಪ್ರೋಮೋ ಶೂಟ್ ನಡೆಯಲಿದೆ.

 ಅಕ್ಟೋಬರ್ 1ಕ್ಕೆ ಟಿವಿಯಲ್ಲಿ ಬಿಗ್ ಬಾಸ್ ಪ್ರಸಾರ ಆರಂಭ? ಸಿಕ್ತು ಹೊಸ ಅಪ್​​ಡೇಟ್​

ಬಿಗ್ ಬಾಸ್

ಸದ್ಯ ಕೊವಿಡ್ ಸಂಪೂರ್ಣ ಕಡಿಮೆ ಆಗಿದೆ. ಈ ಕಾರಣಕ್ಕೆ ಮನರಂಜನಾ ಕ್ಷೇತ್ರಕ್ಕೆ ಹೊಸ ಚೈತನ್ಯ ಸಿಕ್ಕಿದೆ. ಅದರಲ್ಲೂ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳು ಅಬ್ಬರಿಸುತ್ತಿವೆ. ಕನ್ನಡದಲ್ಲಿ ‘ಬಿಗ್ ಬಾಸ್ ಒಟಿಟಿ’ (Bigg Boss OTT) ಶನಿವಾರದಿಂದ (ಆಗಸ್ಟ್ 6) ಆರಂಭಗೊಳ್ಳುತ್ತಿದೆ. ಹಿಂದಿಯಲ್ಲೂ ಈ ರಿಯಾಲಿಟಿ ಶೋ ಶುರುವಾಗಲು ಕ್ಷಣಗಣನೆ ಆರಂಭ ಆಗಿದೆ. ಈ ದಿನಾಂಕದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ವಾಹಿನಿಗಳ ಮೂಲಗಳ ಪ್ರಕಾರ ಅಕ್ಟೋಬರ್ 1ರಿಂದ ‘ಹಿಂದಿ ಬಿಗ್ ಬಾಸ್ 16’ (Bigg Boss 16) ಆರಂಭ ಆಗುವ ಸಾಧ್ಯತೆ ಇದೆ.

ಅಕ್ಟೋಬರ್ 1ರಂದು ಹಿಂದಿ ‘ಬಿಗ್ ಬಾಸ್’ ಪ್ರಾರಂಭವಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ‘ಬಿಗ್ ಬಾಸ್’ ರಿಯಾಲಿಟಿ ಶೋ ವೀಕೆಂಡ್​ನಲ್ಲಿ ಶುರು ಆಗುತ್ತದೆ. ‘ಹಿಂದಿ ಬಿಗ್ ಬಾಸ್’ ಕೂಡ ಶನಿವಾರವೇ ಪ್ರಾರಂಭ ಆಗಲಿದೆ.

ಈ ಬಾರಿ ‘ಬಿಗ್ ಬಾಸ್’ ಸಖತ್ ಅದ್ದೂರಿಯಾಗಿ ನಡೆಸಲು ಪ್ಲ್ಯಾನ್ ನಡೆದಿದೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಈ ರಿಯಾಲಿಟಿ ಶೋನ ಪ್ರೋಮೋ ಶೂಟ್ ನಡೆಯಲಿದೆ. ಕಳೆದ ವರ್ಷ ಹಿಂದಿಯಲ್ಲಿ ‘ಬಿಗ್ ಬಾಸ್​ ಒಟಿಟಿ’ ಪ್ರಸಾರ ಕಂಡಿತ್ತು. ಆದರೆ, ಈ ಬಾರಿ ‘ಬಿಗ್ ಬಾಸ್’ ನೇರವಾಗಿ ಟಿವಿಯಲ್ಲೇ ಪ್ರಸಾರ ಕಾಣಲಿದೆ.

ಹಿಂದಿ ‘ಬಿಗ್ ಬಾಸ್’ ಆರಂಭಕ್ಕೆ ಇನ್ನೂ ಎರಡು ತಿಂಗಳು ಇದೆ. ಆಗಲೇ ಮನೆಗೆ ತೆರಳುವವರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅರ್ಜುನ್ ಬಿಜಿಲಾನಿ, ಸನಾಯಾ ಇರಾನಿ, ದಿವ್ಯಾಂಕಾ ತ್ರಿಪಾಟಿಗೆ ಈಗಾಗಲೇ ಕಲರ್ಸ್ ವಾಹಿನಿಯವರು ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ. ಸೆಲೆಬ್ರಿಟಿಗಳಾಗಲಿ, ವಾಹಿನಿಯವರಾಗಲೀ ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಕಳೆದ ಬಾರಿ ‘ಹಿಂದಿ ಬಿಗ್ ಬಾಸ್​​’ಗೆ ಕಾಡಿನ ಥೀಮ್ ನೀಡಲಾಗಿತ್ತು. ತೇಜಸ್ವಿ ಪ್ರಕಾಶ್ ಅವರು ಕಳೆದ ಸೀಸನ್​ ವಿನ್ನರ್ ಆದರು. ಪ್ರತೀಕ್ ಸೆಹಜ್​ಪಾಲ್​ ಅವರು ರನ್ನರ್​ ಅಪ್​ ಆದರು. ಈ ಶೋ ಮುಗಿದ ಬಳಿಕ ತೇಜಸ್ವಿ ಪ್ರಕಾಶ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.

TV9 Kannada


Leave a Reply

Your email address will not be published. Required fields are marked *