ಬಳ್ಳಾರಿ: ಅಕ್ರಮವಾಗಿ ರೆಮ್‌ಡಿಸಿವರ್ ಔಷಧಿ ಮಾರಾಟ ಮಾಡ್ತಿದ್ದ ಆರೋಪದ ಮೇಲೆ ಮೂವರು ಆರೋಪಿಗಳನ್ನ ನಗರದ ಪೊಲೀಸರು ಬಂಧಿಸಿದ್ದಾರೆ.

ಉದ್ಯಮಿ ಪೋಲಾ ಪ್ರವೀಣ, ವಿಜಯನಗರ ಕೃಷ್ಣದೇವರಾಯ ವಿವಿಯ ಸಿಂಡಿಕೇಟ್ ಸದಸ್ಯ ಡಾ‌.ಮರ್ಚೇಡ್ ಮಲ್ಲಿಕಾರ್ಜುನಗೌಡ, ಮೆಡಿಕಲ್ ಏಜೆನ್ಸಿ ಮಾಲೀಕ ವೆಂಕಟೇಶ್ ಬಾಬು ಎಂಬುವವರನ್ನ ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಪ್ರಭಾವಿ ವ್ಯಕ್ತಿಗಳಾಗಿದ್ದು, ಅಕ್ರಮವಾಗಿ ಔಷಧಿ ಮಾರಾಟದ ದಂಧೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಇನ್ನು ಇದೇ ತಂಡದ ಆರೋಪಿ ಕಿಶೋರ್​ ಎಂಬಾತನನ್ನ ಕಳೆದ ವಾರವೇ ಪೊಲೀಸರು ಬಂಧಿಸಿದ್ದರು.

The post ಅಕ್ರಮವಾಗಿ ರೆಮ್ಡಿಸಿವರ್ ಔಷಧಿ ಮಾರಾಟ; ಆರೋಪಿಗಳ ಬಂಧನ appeared first on News First Kannada.

Source: newsfirstlive.com

Source link