ವಿಜಯಪುರ: ಅಕ್ರಮವಾಗಿ ಸಾಗಿಸುತ್ತಿದ್ದ 71 ಆಕಳು ಹಾಗೂ ಕರುಗಳನ್ನು ರಕ್ಷಿಸಿದ ಘಟನೆ ನಗರದ ಇಟ್ಟಂಗಿಹಾಳ ಗ್ರಾಮದಲ್ಲಿಂದು ನಡೆದಿದೆ.

ಜಿಲ್ಲಾಧಿಕಾರಿ .ಪಿ.ಸುನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ, ಮಹಾನಗರಪಾಲಿಕೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಈ ಎಲ್ಲ ಆಕಳು, ಆಕಳು ಕರುಗಳನ್ನು ವಿಜಯಪುರದಲ್ಲಿನ ಕಗ್ಗೋಡ ಗೋಶಾಲೆಗೆ ಸಾಗಿಸಲಾಗಿದೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಸಂದರ್ಭದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಪ್ರಾಣೇಶ್ ಜಹಗೀರ್ ದಾರ್, ಸಹಾಯಕ ನಿರ್ದೇಶಕ ಎಂ.ಸಿ.ಅರಕೇರಿ, ಡಾ.ಉಮೇಶ್ ನಾಲಾ, ಡಾ.ಪ್ರಕಾಶ್ ಗೂಳಪ್ಪ ಗೋಳ್, ಆನಂದ್ ದೇವರ ನಾವದಗಿ ಹಾಗೂ ಇತರರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

The post ಅಕ್ರಮವಾಗಿ ಸಾಗಿಸುತ್ತಿದ್ದ 71 ಗೋವು, ಕರುಗಳ ರಕ್ಷಣೆ appeared first on Public TV.

Source: publictv.in

Source link