ಅಕ್ರಮ ಆಸ್ತಿ ಗಳಿಕೆ ಆರೋಪ ಸಾಬೀತು ಹಿನ್ನೆಲೆ ನಾಗಮಂಗಲ RTO ಜೆ.ವಿ.ರಾಮಯ್ಯ, ಪತ್ನಿ ಲಲಿತಾಗೆ 3 ವರ್ಷ ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿ ಕೋರ್ಟ್ ಆದೇಶ ನೀಡಿದೆ.

ಸಾಂದರ್ಭಿಕ ಚಿತ್ರ
ಬೆಂಗಳೂರು: ಆರ್ಟಿಇ(RTE) ಅಧಿಕಾರಿ, ಪತ್ನಿಗೆ ಮೂರು ವರ್ಷ ಜೈಲು ಶಿಕ್ಷೆ ನೀಡಿ ಬೆಂಗಳೂರು ಜಾರಿ ನಿರ್ದೇಶನಾಲಯ ಕೋರ್ಟ್ನಿಂದ ತೀರ್ಪು ಪ್ರಕಟಗೊಂಡಿದೆ. ನಾಗಮಂಗಲ RTO ಜೆ.ವಿ.ರಾಮಯ್ಯ, ಪತ್ನಿ ಲಲಿತಾಗೆ 3 ವರ್ಷ ಶಿಕ್ಷೆ ಮತ್ತು ದಂಪತಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿ ಕೋರ್ಟ್ ಆದೇಶ ನೀಡಿದೆ.
2009ರಲ್ಲಿ ಕೋಲಾರ ಕರ್ನಾಟಕ ಲೋಕಾಯುಕ್ತ ಭ್ರಷ್ಟಾಚಾರ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿ ದಾಳಿ ನಡೆಸಿದ ಲೋಕಾಯುಕ್ತ ಈ ವೇಳೆ 1 ಕೋಟಿ 24 ಲಕ್ಷ, 23 ಸಾವಿರ 929 ರೂ ಆದಾಯಕ್ಕಿಂತ ಅಕ್ರಮ ಆಸ್ತಿ ಪತ್ತೆಯಾಗಿದೆ. ಕರ್ನಾಟಕ ಲೋಕಾಯುಕ್ತ ಶೇಕಡ 415% ರಷ್ಟು ಅಕ್ರಮ ಆಸ್ತಿ ಪತ್ತೆ ಮಾಡಿತ್ತು. ಹೀಗಾಗಿ ಲೋಕಾಯುಕ್ತ ವರದಿ ಆಧಾರಿಸಿ ECIR ದಾಖಲಿಸಿ ತನಿಖೆ ನಡೆಸಿದ ED ಜೆ.ವಿ.ರಾಮಯ್ಯ ಮತ್ತು ಎಂ ಲಲಿತಾ ಅಕ್ರಮ ಹೊಂದಿರುವುದನ್ನು ಸಾಬೀತು ಮಾಡಿದೆ. ಸದ್ಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅನ್ವಯ ದಂಪತಿಗೆ 3 ವರ್ಷ ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿ ಕೋರ್ಟ್ ಆದೇಶ ನೀಡಿದೆ.