ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತಿದ್ದವರನ್ನು ಶಿರಸಿ ನಗರ ಠಾಣೆ ಸಿಪಿಐ ರಾಮಚಂದ್ರ ನಾಯಕ್ ದಾಳಿ ನಡೆಸಿ ಮೂವರನ್ನು ಮಾಲು ಸಮೇತ ಬಂಧಿಸಿದ್ದಾರೆ.

ಶಿರಸಿ ನಗರದ ಕೆ.ಹೆಚ್.ಬಿ ಕಾಲೋನಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವಾಗ ದಾಳಿ ನಡೆಸಿದ ಸಿಪಿಐ ನೇತೃತ್ವದ ತಂಡ ಅಯ್ಯಪ್ಪ ನಗರದ ಮಂಜುನಾಥ್ (27),ಹರೀಶ್ (26), ವೀರೇಶ್ ಕಾರ್ತೀಕ್ ಸಿರ್ಸಿಕರ್ (21) ಬಂಧಿಸಿದ್ದು, ಆರೋಪಿತರಿಂದ 228 ಗ್ರಾಂ ಗಾಂಜಾ, 1,250 ನಗದು, ಮೂರು ಮೊಬೈಲ್, ಒಂದು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿ ಮಂಜುನಾಥ್ ವಿರುದ್ಧ ಈ ಹಿಂದೆ ಶಿರಸಿ, ಯಲ್ಲಾಪುರ, ಸಿದ್ದಾಪುರ ಠಾಣೆಯಲ್ಲಿ 4 ಗಾಂಜಾ ಪ್ರಕರಣ, ಎರಡು ಸುಲಿಗೆ ಪ್ರಕರಣ ಹಾಗೂ ಒಂದು ದೊಂಬಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ವಿರುದ್ಧ ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಅಕ್ರಮ ಗಾಂಜಾ ಮಾರಾಟ – ಮೂವರು ಆರೋಪಿಗಳ ಬಂಧನ appeared first on Public TV.

Source: publictv.in

Source link