ಅನಿಲ್ ದೇಶ್‌ಮುಖ್
ಮುಂಬೈ: ಪಿಎಂಎಲ್‌ಎ (PMLA )ನ್ಯಾಯಾಲಯವು ಶುಕ್ರವಾರ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ (Anil Deshmukh) ಅವರನ್ನು ನವೆಂಬರ್ 15 ರವರೆಗೆ ಇಡಿ ಕಸ್ಟಡಿಗೆ (ED custody) ಕಳುಹಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೇಶಮುಖ್ ಅವರನ್ನು ನವೆಂಬರ್ 1 ರಂದು ಬಂಧಿಸಲಾಯಿತು. ದೇಶ್‌ಮುಖ್ ಅವರು ರಾಜ್ಯ ಗೃಹ ಸಚಿವರಾಗಿದ್ದಾಗ ಡಿಸೆಂಬರ್ 2020 ಮತ್ತು ಫೆಬ್ರವರಿ 2021 ರ ನಡುವೆ ಈಗ ವಜಾಗೊಂಡಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜ್ ಮೂಲಕ “ವಿವಿಧ ಆರ್ಕೆಸ್ಟ್ರಾ ಬಾರ್ ಮಾಲೀಕರಿಂದ ಸುಮಾರು 4.7 ಕೋಟಿ ರೂಪಾಯಿಗಳ ಲಂಚ ಪಡೆದಿದ್ದಾರೆ” ಎಂದು ಇಡಿ ಹೇಳಿಕೊಂಡಿದೆ. ಇಡಿ ಪ್ರಕಾರ ದೇಶಮುಖ್ ಅವರ ಕುಟುಂಬವು “4.18 ಕೋಟಿ ರೂಪಾಯಿಗಳ ಅಕ್ರಮ ಹಣ ವ್ಯವಹಾರಗಳನ್ನು ಮಾಡಿದೆ ಮತ್ತು ಟ್ರಸ್ಟ್ ಸ್ವೀಕರಿಸಿದ ಅದೇ ಮೊತ್ತವನ್ನು ಅಂದರೆ ಶ್ರೀ ಸಾಯಿ ಶಿಕ್ಷಣ ಸಂಸ್ಥೆ” ಎಂದು ತೋರಿಸುವುದರ ಮೂಲಕ ಅದನ್ನು ಕಳಂಕರಹಿತ ಎಂದು ತೋರಿಸಿದೆ.
ದೇಶ್‌ಮುಖ್ ಅವರು ಇಡಿ ಮಾಡಿರುವ ಆರೋಪಗಳನ್ನು ನಿರಾಕರಿಸಿದ್ದು, ನನ್ನನ್ನು ಸುಳ್ಳು ಆರೋಪಗಳಿಗೆ ಗುರಿಯಾಗಿರಿಸಲಾಗಿದೆ ಎಂದು ಹೇಳಿದ್ದಾರೆ. ತನಿಖಾ ಸಂಸ್ಥೆಯು ಪ್ರಕರಣದ ನಿಭಾಯಿಸುವ ರೀತಿ “ಪಾರದರ್ಶಕವಲ್ಲ” ಮತ್ತು “ಅನ್ಯಾಯದ್ದು” ಎಂದು ಅವರು ಹೇಳಿದ್ದಾರೆ. ನಿನ್ನೆ ಬಿಡುಗಡೆ ಮಾಡಿದ ತಮ್ಮ ಇತ್ತೀಚಿನ ಹೇಳಿಕೆಯಲ್ಲಿ, ದೇಶಮುಖ್ ನಾನು ಯಾವಾಗಲೂ ನೆಲದ ಕಾನೂನನ್ನು ಅನುಸರಿಸುತ್ತೇನೆ, ಆದರೆ ನನ್ನ ವಿರುದ್ಧ ಪಟ್ಟಭದ್ರ ಹಿತಾಸಕ್ತಿಯಿಂದ ಸುಳ್ಳು ನಿರೂಪಣೆಯನ್ನು ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ.
ಅನಿಲ್ ದೇಶ್‌ಮುಖ್ ವಿರುದ್ಧ ಮಾಜಿ ಪೊಲೀಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಭ್ರಷ್ಟಾಚಾರ ಮತ್ತು ಸುಲಿಗೆ ಆರೋಪ ಮಾಡಿದ್ದಾರೆ. ಈ ಹಿಂದಿನ ಪೊಲೀಸ್ ಅಧಿಕಾರಿ ಸಚಿನ್ ವಾಜ್ರನ್ನು ಬಳಸಿಕೊಂಡು ಬಾರ್ ಆ್ಯಂಡ್ ರೆಸ್ಟೋರೆಂಟ್, ಹೋಟೆಲ್ಗಳ ಮೂಲಕ 100 ಕೋಟಿ ರೂಪಾಯಿ ವಸೂಲಿ ಮಾಡುತ್ತಿದ್ದರು ಎಂದು ಪರಮ್ ಬೀರ್ ಸಿಂಗ್ ಪತ್ರ ಬರೆದು ಉದ್ಧವ್ ಠಾಕ್ರೆಗೆ ತಿಳಿಸಿದ್ದರು. ಅದಾದ ಮೇಲೆ ಅನಿಲ್ ದೇಶ್‌ಮುಖ್ ಮೇಲಿನ ಆರೋಪಗಳೆಲ್ಲ ಮುನ್ನೆಲೆಗೆ ಬಂದು, ಇ.ಡಿ. ಮತ್ತು ಸಿಬಿಐ ಎರಡೂ ತನಿಖಾ ದಳಗಳೂ ಪ್ರಕರಣ ದಾಖಲು ಮಾಡಿವೆ. ಅನಿಲ್ ದೇಶ್‌ಮುಖ್ ವಿರುದ್ಧ ಮಾಡಲಾದ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ನಡೆಸಲಾದ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸುವಂತೆ ಮಾರ್ಚ್ನಲ್ಲಿಯೇ ಬಾಂಬೆ ಹೈಕೋರ್ಟ್ ಸಿಬಿಐಗೆ ಸೂಚಿಸಿತ್ತು. ಇನ್ನು ಇ.ಡಿ. ವಿಚಾರಣೆಗೆ ಅವರು ಸರಿಯಾಗಿ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಬಂಧಿಸಲಾಗಿತ್ತು.
ಇದನ್ನೂ ಓದಿ: ಅನಿಲ್ ದೇಶ್‌ಮುಖ್ ನ.12ರವರೆಗೆ ಇ.ಡಿ.ಕಸ್ಟಡಿಗೆ; ಮಾಜಿ ಸಚಿವನಿಗೆ ಶುರುವಾಗಲಿದೆ ಸಿಬಿಐ ಸಂಕಷ್ಟ !