ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಕಳಕಳಿಯಿರುವ ಸಿನಿಮಾಗಳನ್ನ ಮಾಡುತ್ತಾ ಬ್ಯುಸಿಯಾಗಿರುವ ಬಾಲಿವುಡ್​ ಖಿಲಾಡಿ ಅಕ್ಷಯ್​ ಕುಮಾರ್​ ಎರಡು ಸಿನಿಮಾಗಳು ಸದ್ಯ ರಿಲೀಸ್​ಗೆ ರೆಡಿಯಾಗಿವೆ. ಹೌದು.. 2019ರಿಂದ ಸೌಂಡ್​ ಮಾಡ್ತಿರುವ ಅಕ್ಷಯ್​ ಕುಮಾರ್​ ಅಭಿನಯದ ಬೆಲ್​ ಬಾಟಂ ಸಿನಿಮಾ ಕೊನೆಗೂ ಈ ವರ್ಷ ಥಿಯೇಟರ್​ಗಳಿಗೆ ಲಗ್ಗೆ ಇಡಲಿದೆ. ಈ ಸಿನಿಮಾದ ಜೊತೆಯಲ್ಲೇ 2019ರಲ್ಲೇ ಸೆಟ್ಟೇರಿದ್ದ ಸೂರ್ಯವಂಶಿ ಸಿನಿಮಾ ಕೂಡ ಇದೇ ವರ್ಷಕ್ಕೆ ತೆರೆ ಮೇಲೆ ಬರಲು ಮುಹೂರ್ತ ಫಿಕ್ಸ್​​ ಮಾಡ್ಕೊಂಡಿದೆ. ಆದ್ರೆ ಸದ್ಯ ಸುದ್ದಿಯಲ್ಲಿರೋದು ಬೆಲ್​ ಬಾಟಂ.

ಅಕ್ಷಯ್​​ಕುಮಾರ್ ಈ ಚಿತ್ರಕ್ಕೆ ಬೆಲ್​​ಬಾಟಂ ಅಂತಾ ಹೆಸರಿಟ್ಟು ಮೊದಲ ಪೋಸ್ಟರ್​ ರಿಲೀಸ್​ ಮಾಡಿದಾಗಲೇ ಇದು ಕನ್ನಡದ ಬೆಲ್​​ ಬಾಟಂ ಚಿತ್ರದ ರಿಮೇಕ್ ಅನ್ನೋ ಆರೋಪ ಕೇಳಿ ಬಂದಿತ್ತು. ಆದ್ರೆ, ಚಿತ್ರ ತಂಡ ಅದನ್ನು ಅಲ್ಲಗಳೆದಿತ್ತು. ಬಳಿಕ ಕೂಡ ಕೆಲ ಮೂಲಗಳಿಂದ ಚಿತ್ರ ತಂಡ ಒಪ್ಪಿಕೊಂಡಿತ್ತು ಅಂತಾ ಹೇಳಲಾಗ್ತಿದೆ. ಆದ್ರೆ ಈ ಬಾರಿಯಾದ್ರೂ ಅಧಿಕೃತವಾಗಿ ಅಕ್ಷಯ್ ಕುಮಾರ್ ಇದು ಕನ್ನಡದ ಬೆಲ್​ ಬಾಟಂ ರಿಮೇಕ್ ಅಂತಾ ಘೋಷಿಸ್ತಾರಾ? ಅಥವಾ ಇದು ನಿಜಕ್ಕೂ ಬೇರೆಯದ್ದೇ ಚಿತ್ರವಾ? ಅನ್ನೋ ಪ್ರಶ್ನೆಯಂತೂ ಜೀವಂತವಾಗಿದೆ.

ಇನ್ನು ದೇಶಾದ್ಯಂತ ಸದ್ಯ ಲಾಕ್​ಡೌನ್​ 2.0 ಬಿಸಿ ತಟ್ಟಿದ್ದು, ಥಿಯೇಟರ್​ಗಳು ಅನ್​ಲಾಕ್​ ಆಗುತ್ತಿದ್ದಂತೆಯೇ ಅಕ್ಷಯ್​ ಕುಮಾರ್​ ಅಭಿನಯದ ಬೆಲ್​ ಬಾಟಂ ಸಿನಿಮಾ ಚಿತ್ರಮಂದಿರಗಳಲ್ಲಿ ರಾರಾಜಿಸಲಿದೆ. ಅನ್​ಲಾಕ್​ ನಂತರ ಥಿಯೇಟರ್​ಗೆ ಲಗ್ಗೆ ಇಡಲಿರುವ ಮೊದಲ ಬಾಲಿವುಡ್​ ಸಿನಿಮಾ ಇದಾಗಲಿದೆ. ಹೌದು.. ಜುಲೈ 27ರಂದು ಅಕ್ಷಯ್​ ಬೆಲ್​ ಬಾಟಂ ರಿಲೀಸ್​ ಆಗಲಿದ್ದು, ಈ ಬಗ್ಗೆ ಅಧಿಕೃತ ಘೋಷಣೆ ಹೊರ ಬಂದಿದೆ. ಇದನ್ನ ವಿಭಿನ್ನ ಶೈಲಿಯಲ್ಲಿ ಅಕ್ಷಯ್​ ಕುಮಾರ್​ ಆ್ಯಂಡ್​ ಬೆಲ್​ ಬಾಟಂ ಟೀಂ ಅಭಿಮಾನಿಗಳಿಗೆ ತಿಳಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಹಾಕಿರುವ ಅಕ್ಷಯ್​​ ಕುಮಾರ್​, ‘ನೀವೆಲ್ಲರೂ ಬೆಲ್​ ಬಾಟಂ ರಿಲೀಸ್​ಗೆ ತಾಳ್ಮೆಯಿಂದ ಕಾಯುತ್ತಿದ್ದೀರಾ ಅಂತ ನನಗೆ ಗೊತ್ತು. ಫೈನಲಿ ಬೆಲ್​ ಬಾಟಂ ಸಿನಿಮಾದ ರಿಲೀಸ್​ ಡೇಟ್​ ಅನೌನ್ಸ್​ ಮಾಡಲು ನನಗೆ ಬಹಳ ಖುಷಿಯಾಗ್ತಿದೆ. ಇದೇ ಜುಲೈ 27ರಂದು ಬೆಲ್​ ಬಾಟಂ ಸಿನಿಮಾ ವರ್ಲ್ಡ್​​ ವೈಡ್​ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗ್ತಿದೆ’ ಅಂತ ತಿಳಿಸಿದ್ದಾರೆ. ಬೆಲ್​ ಬಾಟಂ ಸಿನಿಮಾಗೆ ರಂಜಿತ್​ ಎಂ. ತಿವಾರಿ ಆ್ಯಕ್ಷನ್​ ಕಟ್​ ಹೇಳಿದ್ದು, ನಟಿಯರಾದ ಲಾರಾ ದತ್ತ, ವಾಣಿ ಕಪೂರ್​ ಹಾಗೂ ಹುಮಾ ಖುರೇಶಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅಕ್ಷಯ್​ ಕುಮಾರ್ ಬೆಲ್​ ಬಾಟಂನಲ್ಲಿ​ ಡಿಟೆಕ್ಟಿವ್​ ಪಾತ್ರದಲ್ಲಿ ನಟಿಸಿದ್ದಾರೆ.

ಈ ಹಿಂದೆ ಅಕ್ಷಯ್​ ಕುಮಾರ್​ ನಟನೆಯ ಸೂರ್ಯವಂಶಿ ಸಿನಿಮಾ ಥಿಯೇಟರ್​ನಲ್ಲಿ ರಿಲೀಸ್​ ಆಗಿ, ಬೆಲ್​ ಬಾಟಂ OTTಯಲ್ಲಿ ತೆರೆ ಕಾಣುತ್ತದೆ ಅಂತ ಹೇಳಲಾಗಿತ್ತು. ಇದೀಗ ಬೆಲ್​ ಬಾಟಂ ಚಿತ್ರಮಂದಿರಗಳಲ್ಲೇ ರಿಲೀಸ್​ ಆಗೋದು ಕನ್ಫರ್ಮ್​ ಆಗಿದ್ದು, ಬೆಲ್​ ಬಾಟಂ ಬೆನ್ನಲ್ಲೇ ರೋಹಿತ್​ ಶೆಟ್ಟಿ ನಿರ್ದೇಶನದ ಸೂರ್ಯವಂಶಿ ಸಿನಿಮಾ ಬಿಡುಗಡೆಯಾಗಲಿದೆ. ಅಕ್ಷಯ್​ ಕುಮಾರ್ ಖಡಕ್​ ಪೊಲೀಸ್​ ಅಧಿಕಾರಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ಕತ್ರಿನಾ ಕೈಫ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

 

The post ಅಕ್ಷಯ್​ ಕುಮಾರ್​ ಬೆಲ್​ ಬಾಟಂ ಶೀಘ್ರದಲ್ಲೇ ರಿಲೀಸ್; ಈಗ್ಲಾದ್ರೂ ಕನ್ನಡದ ರಿಮೇಕ್ ಅಂತಾ ಹೇಳ್ತಾರಾ? appeared first on News First Kannada.

Source: newsfirstlive.com

Source link