ಅಕ್ಷಯ ತೃತೀಯಾದ ದಿನ ಚಿನ್ನ ಖರೀದಿ ಮಾಡಬೇಕು ಅಂತಾ ಹಿಂದೂ ಧರ್ಮದಲ್ಲಿ ಉಲ್ಲೇಖ ಇಲ್ಲ -ಡಾ ಶೆಲ್ವ ಪಿಳೈ ಅಯ್ಯಂಗಾರ್ | There is no Reference in Hinduism to buy gold during akshaya Tritiya says Dr Shalvapillai Iyengar


ಅಕ್ಷಯ ತೃತೀಯಾದ ದಿನ ಚಿನ್ನ ಖರೀದಿ ಮಾಡಬೇಕು ಅಂತಾ ಹಿಂದೂ ಧರ್ಮದಲ್ಲಿ ಉಲ್ಲೇಖ ಇಲ್ಲ -ಡಾ ಶೆಲ್ವ ಪಿಳೈ ಅಯ್ಯಂಗಾರ್

ಡಾ ಶೆಲ್ವ ಪಿಳೈ ಅಯ್ಯಂಗಾರ್

ಮೈಸೂರು: ಅಕ್ಷಯ ತೃತೀಯಾದ ದಿನ ಚಿನ್ನ ಖರೀದಿ ಮಾಡಬೇಕು ಅಂತಾ ಹಿಂದೂ ಧರ್ಮದಲ್ಲಿ ಉಲ್ಲೇಖ ಇಲ್ಲ. ಅಕ್ಷಯ ತೃತೀಯಾದ ದಿನ ಚಿನ್ನ ಖರೀದಿ ಮಾಡುವುದರಿಂದ ಯಾವುದೇ ವಿಶೇಷ ಫಲ ಸಿಗುವುದಿಲ್ಲ. ಇದು ವ್ಯಾಪಾರಿಗಳು ವ್ಯಾಪಾರಕ್ಕಾಗಿ ಹೇಳುವ ಮಾತು ಅಷ್ಟೆ ಎಂದು ಟಿವಿ9ಗೆ ಧಾರ್ಮಿಕ ಚಿಂತಕ ಡಾ ಶೆಲ್ವ ಪಿಳೈ ಅಯ್ಯಂಗಾರ್ ತಿಳಿಸಿದ್ದಾರೆ.

ಅಕ್ಷಯ ತೃತೀಯಾ ಪವಿತ್ರವಾದ ದಿನ. ಹಿಂದೆ ಇದನ್ನು ಯುಗಾದಿಯಾಗಿ ಆಚರಿಸಲಾಗುತ್ತಿತ್ತು. ಹಿಂದೆ ಅಕ್ಷಯ ತೃತೀಯಾದ ದಿನ ಹಲವು ಮಹತ್ವದ ಘಟನೆಗಳು ನಡೆದಿವೆ. ಪರಶುರಾಮರು ಹುಟ್ಟಿದ ದಿನ. ಮಹಾಭಾರತ ಬರೆಯಲು ಆರಂಭಿಸಿದ ದಿನ. ಸುಧಾಮ ಕೃಷ್ಣನನ್ನು ಭೇಟಿ ಮಾಡಿ ಅಕ್ಷಯ ಪಡೆದ ದಿನ. ಇದರಂತೆ ಜೈನ ಹಾಗೂ ಬುಡಕಟ್ಟು ಜನರಿಗೂ ಪವಿತ್ರ ದಿನ. ಆದರೆ ಚಿನ್ನವನ್ನು ಖರೀದಿ ಮಾಡಲೇಬೇಕು ಅಂತಾ ಎಲ್ಲೂ ಇಲ್ಲ. ಅಕ್ಷಯ ತೃತೀಯಾ ದಿನ ಚಿನ್ನವನ್ನೇ ಖರೀದಿ ಮಾಡುವಂತಿಲ್ಲ. ಹೀಗಿರುವಾಗ ಯಾವ ಧರ್ಮದ ಅಂಗಡಿ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಚಿನ್ನ ನಮ್ಮ ದೇಶದಲ್ಲಿ ಸಿಗುವುದೇ ಇಲ್ಲ. ಬೇರೆ ದೇಶದ ಬೇರೆ ಧರ್ಮದವರಿಂದಲೇ ಚಿನ್ನ ನಮ್ಮ ದೇಶಕ್ಕೆ ಬರುವುದು. ನಮ್ಮದು ದಾನ ಮಾಡುವ ಸಂಸ್ಕೃತಿ. ಕೊಂಡುಬಾಕ ಸಂಸ್ಕೃತಿ ನಮ್ಮದಲ್ಲ. ಅಕ್ಷಯ ತೃತೀಯಾ ದಿನ ದಾನ ಧರ್ಮ ಮಾಡಬೇಕು. ಅದು ಪುಣ್ಯವನ್ನು ತಂದು ಕೊಡುತ್ತದೆ ಎಂದು ಡಾ ಶೆಲ್ವ ಪಿಳ್ಳೈ ಅಯ್ಯಂಗಾರ್ ಮಾಹಿತಿ ನೀಡಿದ್ದಾರೆ.

ಮುಸ್ಲಿಂ ಜ್ಯುವೆಲರಿಗಳಲ್ಲಿ ವ್ಯಾಪಾರ ಮಾಡದಂತೆ ಕ್ಯಾಂಪೇನ್!
ಅಕ್ಷಯ ತೃತೀಯ ಹಬ್ಬಕ್ಕೂ ಧರ್ಮ ಸಂಘರ್ಷದ ಕಾಡ್ಗಿಚ್ಚು ವ್ಯಾಪಿಸಿದೆ. ರಾಜ್ಯಾದ್ಯಂತ ಮುಸ್ಲಿಮರ ಅಂಗಡಿಗಳಲ್ಲಿ ಬಂಗಾರ ಖರಿದಿಸ್ಬೇಡಿ, ಹಿಂದೂಗಳ ಅಂಗಡಿಗಳಲ್ಲೇ ಚಿನ್ನ ಖರೀದಿಸಿ ಅಂತಾ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅಭಿಯಾನ ಶುರು ಮಾಡಿದ್ದಾರೆ. ಅಷ್ಟೇ ಅಲ್ಲ ಮುಸ್ಲಿಮರ ಅಂಗಡಿಗಳಲ್ಲಿ ಚಿನ್ನ ಖರೀದಿಸಿದ್ರೆ, ಆ ಹಣ ಕೇರಳದ ಮುಸ್ಲಿಂ ಸಂಘಟನೆಗಳಿಗೆ ಹೋಗುತ್ತೆ ಅಂತಾ ಕಿಡಿಕಾರಿದ್ದಾರೆ.

TV9 Kannada


Leave a Reply

Your email address will not be published.