ಅಕ್ಷರ್​​ಗೆ ಮುಳ್ಳಾಯ್ತಾ ಸ್ಪಿನ್​ ಕೋಟಾ ಪೈಪೋಟಿ? ಶಾರ್ದೂಲ್​​ಗೆ ಮಣೆ ಹಾಕಿರುವ ಹಿಂದಿನ ಲೆಕ್ಕಾಚಾರವೇನು?

ಕೊನೆಗೂ ಟಿ20 ವಿಶ್ವಕಪ್​ ಟೂರ್ನಿಗೆ ಪ್ರಕಟಿಸಿದ್ದ ತಂಡದಲ್ಲಿ ಟೀಮ್​ ಇಂಡಿಯಾ ಸೆಲೆಕ್ಷನ್​ ಕಮಿಟಿ ಬದಲಾವಣೆ ಮಾಡಿದೆ. ಆದ್ರೆ ಆದ ಬದಲಾವಣೆ ಮಾತ್ರ ಕ್ರಿಕೆಟ್​ ವಲಯದಲ್ಲಿ ಆಶ್ಚರ್ಯವನ್ನೇ ಮೂಡಿಸಿದೆ. ಆಯ್ಕೆ ಸಮಿತಿ ನಿರ್ಧಾರದ ಹಿಂದಿನ ಲೆಕ್ಕಾಚಾರ ಏನು ಎಂಬ ಪ್ರಶ್ನೆ, ಎಲ್ಲೆಡೆ ಸದ್ದು ಮಾಡ್ತಿದೆ.

ವಿಶ್ವಕಪ್​ ಮುಖ್ಯ ತಂಡಕ್ಕೆ ಶಾರ್ದೂಲ್​ ಇನ್​, ಅಕ್ಷರ್​​ ಔಟ್​​.!

ಟಿ20 ವಿಶ್ವಕಪ್​ ಟೂರ್ನಿಗಾಗಿ ಪ್ರಕಟಿಸಲಾದ ತಂಡದಲ್ಲಿ, ಬದಲಾವಣೆ ಮಾಡಲಾಗುತ್ತೆ ಅನ್ನೋದು ಹಲವು ದಿನಗಳಿಂದ ಇದ್ದ ಸುದ್ದಿ. ಕೊನೆಗೂ ಆ ಸುದ್ದಿ ನಿನ್ನೆ ನಿಜವಾಗಿದೆ. ಮಹತ್ವದ ಸರಣಿಗೆ ಪ್ರಕಟಿಸಲಾಗಿದ್ದ ತಂಡದಲ್ಲಿ ಬದಲಾವಣೆ ಮಾಡಿರುವ ಆಯ್ಕೆ ಸಮಿತಿ, ಶಾರ್ದೂಲ್​ ಠಾಕೂರ್​ಗೆ 15 ಆಟಗಾರರ ಮುಖ್ಯ ತಂಡದಲ್ಲಿ ಸ್ಥಾನ ಕಲ್ಪಿಸಿದೆ. ಈ ಹಿಂದೆ ಪ್ರಕಟಿಸಿದ್ದ ತಂಡದಲ್ಲಿ ಶಾರ್ದೂಲ್​​ ಸ್ಟ್ಯಾಂಡ್​​ ಬೈ ಆಟಗಾರನಾಗಿದ್ರು. ಆದ್ರೀಗ ಶಾದ್ರೂಲ್​ಗೆ MAIN SQUAD ಗೆ ಬಡ್ತಿ ನೀಡಿರೋ ಸೆಲೆಕ್ಷನ್​ ಕಮಿಟಿ, ಮುಖ್ಯ ತಂಡದಲ್ಲಿದ್ದ ಅಕ್ಷರ್​ ಪಟೇಲ್​ಗೆ ರಿಸರ್ವ್​​ ಪ್ಲೇಯರ್​ ಆಗಿ ಹಿಂಬಡ್ತಿ ನೀಡಿದೆ.

ಅಕ್ಷರ್​​ ಪಟೇಲ್​ ಸ್ಥಾನಕ್ಕೆ ಮುಳ್ಳಾಯ್ತಾ ಸ್ಪಿನ್​ ಕೋಟಾ ಪೈಪೋಟಿ.?
ವಿಶ್ವಕಪ್​ ಟೂರ್ನಿಗೆ ಈ ಮೊದಲು ತಂಡ ಪ್ರಕಟಿಸಿದಾಗ ಹೆಚ್ಚು ಸದ್ದು ಮಾಡಿದ್ದು ಸ್ಪಿನ್​ ವಿಭಾಗ. ಅಶ್ವಿನ್​, ಜಡೇಜಾ, ರಾಹುಲ್​ ಚಹರ್​, ವರುಣ್​ ಚಕ್ರವರ್ತಿ ಹಾಗೂ ಅಕ್ಷರ್​ ಪಟೇಲ್​.. ಈ ಐದು ಮಂದಿ ವಿಶ್ವಕಪ್​ ಟೂರ್ನಿಗೆ ಆಯ್ಕೆ ಮಾಡಲಾಗಿತ್ತು. ಇದು ಸಹಜವಾಗಿಯೇ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಪಿನ್​ ಕೋಟಾದ ಪೈಪೋಟಿಯನ್ನ ಹೆಚ್ಚಿಸಿತ್ತು. ಜೊತೆಗೆ ಐದು ಮಂದಿ ಸ್ಪಿನ್ನರ್​ಗಳ ಅಗತ್ಯವೇನಿತ್ತು.? ಎಂಬ ಪ್ರಶ್ನೆಗಳು ಕೇಳಿ ಬಂದಿದ್ವು . ಹೀಗಾಗಿಯೇ ಇದೀಗ ಅಕ್ಷರ್​ ಪಟೇಲ್​ಗೆ ಹಿಂಬಡ್ತಿ ನೀಡಿ, ಆ ಸ್ಥಾನದಲ್ಲಿ ಇನ್ನೋರ್ವ ಪೇಸ್​ ಆಲ್​ರೌಂಡರ್​ಗೆ ಆಯ್ಕೆ ಸಮಿತಿ ಮಣೆ ಹಾಕಿದೆ.

ಶಾರ್ದೂಲ್​ಗೆ ದಾರಿ ಮಾಡಿಕೊಡ್ತಾ ಹಾರ್ದಿಕ್​ ಫಿಟ್​ನೆಸ್​.?
ಯೆಸ್​​..! ಆಲ್​​ರೌಂಡರ್​ ಕೋಟಾದಲ್ಲಿ ವಿಶ್ವಕಪ್​ ತಂಡದ ಟಿಕೆಟ್​ ಗಿಟ್ಟಿಸಿಕೊಂಡಿರೋ ಹಾರ್ದಿಕ್​ ಪಾಂಡ್ಯ, ಇನ್ನೂ ಬೌಲಿಂಗ್​ ಫಿಟ್​ನೆಸ್​ ಕಂಡುಕೊಂಡಿಲ್ಲ. ಹೀಗಾಗಿ ಕೆಳ ಕ್ರಮಾಂಕಕ್ಕೆ ಬಲ ತುಂಬುವ ದೃಷ್ಠಿಯಿಂದ ಆಯ್ಕೆ ಸಮಿತಿ ಶಾರ್ದೂಲ್​ಗೆ ಮಣೆ ಹಾಕಿರೋದು. ದುಬೈ, ಅಬುಧಾಬಿಯಂತಹ ಸ್ಲೋ ಟ್ರ್ಯಾಕ್​ಗಳಲ್ಲಿ ಶಾರ್ದೂಲ್​, ಬೌಲಿಂಗ್​ – ಬ್ಯಾಟಿಂಗ್​ ಎರಡರಲ್ಲೂ ತಂಡಕ್ಕೆ ನೆರವಾಗಬಲ್ಲರು ಅನ್ನೋದು ಕೂಡ, ಸೆಲೆಕ್ಷನ್​ ಕಮಿಟಿ ಹಾಗೂ ಮ್ಯಾನೇಜ್​ಮೆಂಟ್​ನ ಲೆಕ್ಕಾಚಾರವಾಗಿದೆ.

ಈ ಎಲ್ಲಾ ಲೆಕ್ಕಾಚಾರಗಳ ಹೊರತಾಗಿ, ಅಕ್ಷರ್​ ಪಟೇಲ್ ಹಾಗೂ ಶಾರ್ದೂಲ್​ ಠಾಕೂರ್​ ಇಬ್ಬರೂ​ ಉತ್ತಮ ಪ್ಲೇಯರ್​ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಇಬ್ಬರೂ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಹೀಗಾಗಿಯೇ ಇಬ್ಬರೂ ಆಟಗಾರರನ್ನ ತಂಡದಲ್ಲಿ ಉಳಿಸಿಕೊಳ್ಳಬಹುದಿತ್ತು ಅನ್ನೋದು, ಒಂದು ವಲಯದ ಮಾತಾಗಿದೆ. ಆದ್ರೆ ಕೇವಲ 15 ಆಟಗಾರರಿಗೆ ಮಾತ್ರ ಐಸಿಸಿ ಅನುಮತಿ ನೀಡಿರೋದು ಕೂಡ, ಈ ಆಯ್ಕೆ ಹಿಂದಿನ ಲೆಕ್ಕಾಚಾರವಾಗಿದೆ.

News First Live Kannada

Leave a comment

Your email address will not be published. Required fields are marked *