ಅಕ್ಸರ್ ಪಟೇಲ್ ದಾಳಿಗೆ ಕಿವೀಸ್ ಪಡೆ ಧೂಳಿಪಟ; ಹಿಡಿತ ಸಾಧಿಸಿದ ಟೀಂ ಇಂಡಿಯಾ


ಕಾನ್ಪುರದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್​ ಪಡೆ ಮೊದಲ ಇನ್ನಿಂಗ್ಸ್​ನಲ್ಲಿ 296 ರನ್​ಗಳಿಗೆ ಆಲೌಟ್​ ಆಗಿದೆ. ಈ ಮೂಲಕ ಭಾರತ 49 ರನ್​ಗಳ ಮುನ್ನಡೆ ಪಡೆದುಕೊಂಡಿದೆ.

ಪಂದ್ಯದ ಮೂರನೇ ದಿನದಾಟದಲ್ಲಿ ಟೀಮ್​ ಇಂಡಿಯಾ ಬೌಲಿಂಗ್​ ವಿಭಾಗ ಅಮೋಘ ಪ್ರದರ್ಶನ ನೀಡಿತು. ಆರಂಭಿಕ ಸೆಷನ್​ನಲ್ಲೇ ವಿಲ್​ ಯಂಗ್​ ಹಾಗೂ ನಾಯಕ ಕೇನ್​ ವಿಲಿಯಮ್​ಸನ್​ ವಿಕೆಟ್​ ಕಬಳಿಸುವಲ್ಲಿ ತಂಡ ಯಶಸ್ಸಿಯಾಗಿತ್ತು. ನಂತರದ ಎರಡನೇ ಸೆಷನ್​ನಲ್ಲಿ ಕಿವೀಸ್​ ಪಡೆ ಅಕ್ಷರ್​​ ಪಟೇಲ್​ ದಾಳಿಯ ಮುಂದೆ ಮಂಕಾಯ್ತು. ತಂಡದ ಭರವಸೆಯ ಆಟಗಾರರಾಗಿದ್ದ ರಾಸ್​ ಟೇಲರ್​, ಹೆನ್ರಿ ನಿಕೋಲಸ್​ರನ್ನ ಅಲ್ಪ ಮೊತ್ತಕ್ಕೆ ಔಟ್​ ಮಾಡುವಲ್ಲಿ ಅಕ್ಷರ್​ ಯಶಸ್ವಿಯಾದ್ರು.

ಜೊತೆಗೆ 95 ರನ್​ಗಳಿಸಿ ಶತಕದತ್ತ ಹೆಜ್ಜೆ ಇರಿಸಿದ್ದ ಆರಂಭಿಕ ಆಟಗಾರ ಟಾಮ್​ ಲಾಥಮ್​ಗೂ ಅಕ್ಷರ್​​ ಪಟೇಲ್​ ಪೆವಿಲಿಯನ್​ ದಾರಿ ತೋರಿಸಿದ್ರು. 13 ರನ್​ಗಳಿಸಿ ರಚಿನ್​ ರವೀಂದ್ರ ಔಟಾದ್ರೆ, ಸೌಥಿ, ಸೋಮರ್​​ವಿಲ್ಲಿ ಅಲ್ಪಮೊತ್ತಕ್ಕೆ ಪೆವಿಲಿಯನ್​ ಸೇರಿದ್ರು. ಅಂತಿಮವಾಗಿ ಪ್ರವಾಸಿ ಪಡೆ 296 ರನ್​ಗಳಿಗೆ ಆಲೌಟ್​ ಆಯ್ತು.
ಭಾರತದ ಪರ ಅಕ್ಷರ್​​ ಪಟೇಲ್​ 5, ಅಶ್ವಿನ್ 3​, ಜಡೇಜಾ ಹಾಗೂ ಉಮೇಶ್​​ ಯಾದವ್​ ತಲಾ 1 ವಿಕೆಟ್​​ ಕಬಳಿಸಿದ್ರು.

 

News First Live Kannada


Leave a Reply

Your email address will not be published. Required fields are marked *