ಬಳ್ಳಾರಿ: ರಾಜ್ಯಾದ್ಯಂತ ಲಾಕ್​ ಡೌನ್​ ಇದೆ. ಮನೆಯಿಂದ ಯಾರೂ ಹರಗಡೆ ಬರಬೇಡಿ ಅಂತ ಸರ್ಕಾರ ಕಠಿಣ ರೂಲ್ಸ್​ ಜಾರಿ ಮಾಡಿದೆ. ಹಾಗೇ ಅಗತ್ಯವಸ್ತು ಖರೀದಿಗೆ ಬೆಳಗ್ಗೆ 6ರಿಂದ 10 ಗಂಟೆವರೆಗೆ ಮಾತ್ರ ಅವಕಾಶವಿದೆ. ಹೀಗಾಗಿ ಜನರು ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿ ಆ್ಯಂಬುಲೆನ್ಸ್​ ಸಾಗಲು ಕೂಡ ಜಾಗವಿಲ್ಲದೆ ಪರದಾಡುವಂತಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಜಿಲ್ಲೆಯ ರಾಯಲ್​ ಸರ್ಕಲ್​ನಲ್ಲಿ, ಪೇಷಂಟ್​ವೊಬ್ಬರನ್ನ ಕರೆದೊಯ್ಯುತ್ತಿದ್ದ ಅಂಬುಲೆನ್ಸ್‌ಗೂ ಜಾಗವಿಲ್ಲದಷ್ಟು ಟ್ರಾಫಿಕ್​ ಜಾಂ​ ಇಂದು ಉಂಟಾಗಿತ್ತು. ಅಗತ್ಯ ವಸ್ತು ಖರೀದಿಗೆ ಮಾತ್ರ ಅವಕಾಶ ನೀಡಿರೋ ಕಾರಣಕ್ಕೆ ಬೆಳಗ್ಗೆ ಭಾರೀ ಸಂಖ್ಯೆಯ ಜನ ರಸ್ತೆಗಿಳಿದಿದ್ದು, ಸಂಚಾರ ದಟ್ಟಣೆಗೆ ಕಾರಣವಾಗಿತ್ತು.

ಈ ವೇಳೆ ಕೆಲ ಕಾಲ ಅಂಬುಲೆನ್ಸ್‌ಗೂ ಹೋಗೋಕು ದಾರಿ ಸಿಗದಷ್ಟು ಟ್ರಾಫಿಕ್ ಅಲ್ಲಿ ನಿರ್ಮಾಣವಾಗಿತ್ತು. ನಂತರ ಸಂಚಾರಿ ಪೊಲೀಸರು ಟ್ರಾಫಿಕ್‌ ಸಡಿಲಗೊಳಿಸಿ ಅಂಬುಲೆನ್ಸ್‌ಗೆ ದಾರಿ ಮಾಡಿಕೊಟ್ರು.

The post ಅಗತ್ಯವಸ್ತು ಖರೀದಿಗೆ ಮುಗಿಬಿದ್ದು ಟ್ರಾಫಿಕ್​​, ಆ್ಯಂಬುಲೆನ್ಸ್​​ಗೂ ಜಾಗ ಸಿಗದೇ ಪರದಾಟ appeared first on News First Kannada.

Source: newsfirstlive.com

Source link