ಅಗತ್ಯ ಬಿದ್ರೆ ಮಾರ್ಗಸೂಚಿ ಬದಲಾಯಿಸ್ತೇವೆ-ಸಿಎಂ ಬೊಮ್ಮಾಯಿ


ನವದೆಹಲಿ: ರಾಜ್ಯದಲ್ಲಿ ಪತ್ತೆಯಾಗಿರುವ  ಒಮಿಕ್ರಾನ್​ ಅಷ್ಟೇನೂ ಅಪಾಯಕಾರಿ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಒಮಿಕ್ರಾನ್​ ತಡೆ ಬಗ್ಗೆ ತಜ್ಞರ ಜತೆ ಚರ್ಚಿಸಿದ್ದೇನೆ  ತಜ್ಞರು ಆತಂಕ ಪಡುವಂತಿಲ್ಲ ಎಂದಿದ್ದಾರೆ ಹೀಗಾಗಿ ಅಗತ್ಯ ಬಿದ್ರೆ ಮಾರ್ಗಸೂಚಿ ಬದಲಾಯಿಸುತ್ತೇವೆ. ಇನ್ನು ಒಮಿಕ್ರಾನ್​ ಚಿಕಿತ್ಸೆಗೆ ಸಕಲ ರೀತಿಯಲ್ಲಿ  ಸನ್ನದ್ಧರಾಗಿದ್ದೇವೆ. ಒಮಿಕ್ರಾನ್​ ಅಷ್ಟೇನೂ ಅಪಾಯವಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ದು ಜನರು ಕೋವಿಡ್​ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಮನವಿ ಮಾಡಿದ್ದಾರೆ.

News First Live Kannada


Leave a Reply

Your email address will not be published. Required fields are marked *