ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ನಟ ಬೈಕ್ ಅಪಘಾತದಲ್ಲಿ ನಿಧನರಾಗಿದ್ದಾರೆ. ವಿಜಯ್ ಅವರ ಅಕಾಲಿಕ ಮರಣಕ್ಕೆ ಇಡೀ ಕರುನಾಡು ಕಣ್ಣೀರು ಸುರಿಸಿದೆ. ಚಿತ್ರರಂಗ ಬೆಲೆಕಟ್ಟಲಾಗದ ಪ್ರತಿಭೆಯೊಂದನ್ನು ಕಳೆದು ಕೊಂಡಿದೆ. ಇದು ನಮಗೆ ತುಂಬಲಾರದ ನಷ್ಟ ಎಂದು ಸಿನಿಮಾ ಮಂದಿ ಕಂಬನಿ ಮಿಡಿಯುತ್ತಿದ್ದಾರೆ. ಅದರೆ ಸಂಚಾರಿ ವಿಜಯ್ ಅವರ ವಿಷಯದಲ್ಲಿ ಫಿಲ್ಮಂ ಚೇಂಬರ್ ನಿರ್ಲಕ್ಷ್ಯ ತೋರಿಸುವ ಮೂಲಕ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಇವತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಇತ್ತೀಚೆಗೆ ನಿಧನರಾದ ಚಿತ್ರರಂಗದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿತು. ಫಿಲ್ಮ್  ಚೇಂಬರ್ ಪಕ್ಕದಲ್ಲೇ ಇದ್ದ ಗುರುರಾಗ ಕಲ್ಯಾಣ ಮಂಟಪದಲ್ಲಿ ಈ ಕಾರ್ಯಕ್ರಮ ಅಯೋಜನೆಗೊಂಡಿತ್ತು. ಫಿಲ್ಮ್ ಚೇಂಬರ್ ಅಗಲಿದ ಗಣ್ಯರನ್ನು ಸ್ಮರಿಸುವ ಮೂಲಕ ಉತ್ತಮ ಕೆಲಸಕ್ಕೆ ಮುಂದಾಗಿದೆ ಎಂಬ ಮೆಚ್ಚುಗೆ ಮಾತುಗಳು ಕೇಳಿ ಬಂದಿದ್ದವು. ಅದ್ರೆ, ಆ ಕಾರ್ಯಕ್ರಮದಲ್ಲಿ  ಫಿಲ್ಮ್ ಚೇಂಬರ್ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರನ್ನು ಮರೆತು ಬಿಡ್ತಾ ಎಂಬ ಪ್ರಶ್ನೆಗಳು ಈಗ ಗಾಂಧಿ ನಗರದಲ್ಲಿ ಎದ್ದಿವೆ. ಕಾರಣ ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಫಿಲ್ಮ್ ಚೇಂಬರ್ ಇತ್ತೀಚೆಗೆ ನಿಧನರಾದ ಕನ್ನಡ ಹೆಸರಾಂತ  ನಿರ್ಮಾಪಕರ ಪೋಟೋ ಇಟ್ಟು ಶ್ರದ್ದಾಂಜಲಿ ಸಲ್ಲಿಸಿತ್ತು .

ಅದ್ರೆ ಕಳೆದ ಎರಡು ದಿನಗಳ ಹಿಂದೆ ಚಿತ್ರರಂಗವನ್ನು ಅಗಲಿದ ಸಂಚಾರಿ ವಿಜಯ್ ಅವರ ಫೋಟೋ ಇಟ್ಟು ಶ್ರದ್ಧಾಂಜಲಿ ಸಲ್ಲಿಸುವ ಗೋಜಿಗೆ ಹೋಗಲಿಲ್ಲ. ಇದನ್ನು ಗಮನಿಸಿದ ಸಿನಿಮಾ ಮಂದಿ ಮತ್ತು ವಿಜಯ್ ಅವರ ಅಭಿಮಾನಿಗಳು ಫಿಲ್ಮ್ ಚೇಂಬರ್ ಬಗ್ಗೆ ಅಸಮಾಧಾನ ವ್ಯಕಪಡಿಸ್ತಿದ್ದಾರೆ.

ರಾಮು, ಕೆ. ಸಿ. ಎನ್ ಚಂದ್ರಶೇಖರ್, ಅಣ್ಣಯ್ಯ ಚಂದ್ರಶೇಖರ್ ಫೋಟೋ ಇಟ್ಟು ಶ್ರದ್ಧಾಂಜಲಿ ಸಲ್ಲಿಸಿದ ಚೇಂಬರ್.. ವಿಜಯ್ ಅವರ ಫೋಟೋ ಯಾಕಿಟ್ಟಿಲ್ಲ ಅನ್ನೋ ಮಾತುಗಳು ಈಗ ಅಭಿಮಾನಿ ಬಳಗದಲ್ಲಿ ಕೇಳಿ ಬರ್ತಿದೆ.

The post ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಭೆ; ಸಂಚಾರಿ ವಿಜಯ್​ರನ್ನ ಮರೆತುಬಿಡ್ತಾ ಫಿಲ್ಮ್​ ಚೇಂಬರ್​.? appeared first on News First Kannada.

Source: newsfirstlive.com

Source link