ಸ್ಯಾಂಡಲ್​ವುಡ್​ನಲ್ಲಿ ಕೋಟಿ ರಾಮು ಅಂತಾನೇ ಹೆಸರು ಪಡೆದಿದ್ದ ನಿರ್ಮಾಪಕ ರಾಮು, ಏಪ್ರಿಲ್​ 26ರಂದು ಕೊರೊನಾ ಕಾರಣ ಇಹಲೋಕ ತ್ಯಜಿಸಿದರು. ಇಡೀ ಚಿತ್ರರಂಗಕ್ಕೆ ಆಪ್ತರಾಗಿದ್ದ ರಾಮು ಅಗಲಿಕೆಗೆ ಸ್ಯಾಂಡಲ್​ವುಡ್​ ಚಿತ್ರರಂಗ ಸಂತಾಪ ಸೂಚಿಸಿದೆ. ಸದ್ಯ ಪತಿ ರಾಮು ಅಗಲಿಕೆಯ ಬಳಿಕ ಇದೇ ಮೊದಲ ಬಾರಿ ನಟಿ ಮಾಲಾಶ್ರೀ ಮೌನ ಮುರಿದಿದ್ದಾರೆ. ತಮ್ಮ ಹೃದಯಸ್ಪರ್ಶಿ ಮಾತುಗಳನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಪತಿ ರಾಮು ಅಗಲಿಕೆಯ ಬಗ್ಗೆ ಮಾತನಾಡಿರುವ ಮಾಲಾಶ್ರೀ, ‘ಕಳೆದ 12 ದಿನಗಳು ಬಹಳ ನೋವಿನಿಂದಲೇ ಕಳೆದಿದ್ದೇವೆ. ಎಲ್ಲವೂ ಅಸ್ಪಷ್ಟವಾಗಿವೆ. ನಮ್ಮ ಇಡೀ ಕುಟುಂಬ ನನ್ನ ಪ್ರೀತಿಯ ಪತಿಯ ಅಗಲುವಿಕೆಯಿಂದ ತುಂಬಾ ದುಃಖ ತಪ್ತರಾಗಿದ್ದೇವೆ. ರಾಮು ಯಾವಾಗಲೂ ನಮ್ಮ ಬೆನ್ನೆಲುಬಾಗಿದ್ದರು, ಇನ್ನು ಮುಂದೆಯೂ ಆಗಿರುತ್ತಾರೆ. ಈ ಸಂದರ್ಭ ಇಡೀ ಚಿತ್ರರಂಗ ರಾಮುಗೆ ತೋರಿಸಿದ ಪ್ರೀತಿ ಹಾಗೂ ನಮಗೆ ನೀಡಿದ ಸಪೋರ್ಟ್​ಗೆ ನಾನು ಚಿರಋಣಿ ಎಂದು ಹೇಳಿದ್ದಾರೆ.

ಇಂಥ ನೋವಿನ ವೇಳೆಯೂ ಅಭಿಮಾನಿಗಳ ಮರೆಯದ ಮಾಲಾಶ್ರೀ, ‘ಇಂತಹ ಕಠಿಣ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲಿರಿ ಸುರಕ್ಷಿತವಾಗಿರಿ. ನಿಮ್ಮ ಪ್ರೀತಿಪಾತ್ರರನ್ನ ಸರಿಯಾಗಿ ನೋಡಿಕೊಳ್ಳಿ. ಕೊರೊನಾ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ನನ್ನ ಸಂಕಷ್ಟದಲ್ಲಿ ನನ್ನ ಜೊತೆಗಿದ್ದ ಚಿತ್ರರಂಗ ಹಾಗೂ ಅಭಿಮಾನಿಗಳಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.

ಅಲ್ಲದೇ ಮಾಧ್ಯಮಗಳೂ ಸೇರಿದಂತೆ ಚಿತ್ರರಂಗದ ಪ್ರತಿಯೊಬ್ಬರು, ಕಲಾವಿದರು, ನಿರ್ಮಾಪಕರು, ತಂತ್ರಜ್ಞರು, ಸಪೋರ್ಟ್​ ಸ್ಟಾಫ್​​; ಹಾಗೇ ರಾಮು ಅಭಿಮಾನಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ಈ ಕಷ್ಟ ಸಮಯದಲ್ಲಿ ನಮ್ಮ ಜೊತೆ ನಿಂತಿದ್ದರು. ನಿಮ್ಮೆಲ್ಲರ ಪ್ರೀತಿ ಹಾಗೂ ಪ್ರಾರ್ಥನೆಗೆ ನಾನು ಹಾಗೂ ನನ್ನ ಕುಟುಂಬ ಆಭಾರಿಯಾಗಿದ್ದೇವೆ’ ಅಂತ ಪತ್ರದಲ್ಲಿ ಮಾಲಾಶ್ರೀ ತಿಳಿಸಿದ್ದಾರೆ.

The post ಅಗಲಿದ ಪತಿ ನೆನೆದು ಮಾಲಾಶ್ರೀ ಭಾವನಾತ್ಮಕ ಪತ್ರ; ಅವ್ರು ಏನು ಹೇಳಿದ್ರು ಗೊತ್ತಾ?! appeared first on News First Kannada.

Source: newsfirstlive.com

Source link