ಅಗ್ರೆಸ್ಸಿವ್ ಕ್ಯಾಪ್ಟನ್ ಎಂದೇ ಕರೆಸಿಕೊಳ್ಳುವ ಇಂಡಿಯನ್ ಕ್ರಿಕೆಟ್ ಟೀಮ್ ಕ್ಯಾಪ್ಟನ್ ಆಗಾಗ ಕೂಲ್ ಕೂಲ್ ಆಗಿ ಕಾಣಿಸಿಕೊಂಡು ತಮ್ಮ ಅಭಿಮಾನಿಗಳನ್ನ ಖುಷಿ ಪಡಿಸ್ತಾರೆ. ಮೈದಾನದ ಹೊರಗೇ ಆಗಿರಬಹುದು ಅಥವಾ ಮೈದಾನದಲ್ಲೇ ಆಗಿರಬಹುದು ಆಗಾಗ್ಗೆ ಡ್ಯಾನ್ಸ್ ಮಾಡುವ ಕೊಹ್ಲಿ ತನ್ನ ಮುಂದೆ ಯಾವ ಡ್ಯಾನ್ಸರ್ ಕೂಡ ನಿಲ್ಲಲ್ಲ ಎಂಬಂತೆ ಬೀಗುತ್ತಾರೆ.

ಸದ್ಯ ನ್ಯೂಜಿಲೆಂಡ್ ಹಾಗೂ ಭಾರತ ನಡುವೆ ನಡುವಿನ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್​ ಮೂರನೇ ದಿನವಾದ ಇಂದು ಕೊಹ್ಲಿ ಫೀಲ್ಡಿಂಗ್​ನಲ್ಲಿ ಬ್ಯುಸಿಯಾಗಿದ್ದರು. ಈಗಲೋ ಆಗಲೋ ವಿಕೆಟ್ ಬೀಳುತ್ತೆ ಅಂತ ಕಾಯುತ್ತಿದ್ದ ವಿರಾಟ್ ಕೊಹ್ಲಿ ಇದ್ದಕ್ಕಿದ್ದಂತೆ ಭಾಂಗ್ರಾ ಬೀಟ್​ಗೆ ಡ್ಯಾನ್ಸ್ ಮಾಡಿದ್ರು. ವಿರಾಟ್ ಕೊಹ್ಲಿ ಕುಣಿಯುತ್ತಲೇ ಇಡೀ ಸ್ಟೇಡಿಯಂನಲ್ಲಿ ಹೊಸ ಎನರ್ಜಿ ಸಂಚಾರವಾಯ್ತು ಅಂದ್ರೂ ತಪ್ಪಾಗಲಾರದು. ಇನ್ನು ಸ್ಟೇಡಿಯಂನಲ್ಲಿ ಕ್ರಿಕೆಟ್ ವೀಕ್ಷಿಸಲು ಬಂದಿದ್ದ ಕೆಲವು ಫ್ಯಾನ್ಸ್​ಗಳೂ ಸಹ ವಿರಾಟ್ ಕೊಹ್ಲಿ ಡ್ಯಾನ್ಸ್ ಅನುಕರಣೆ ಮಾಡಿದ್ರು.

The post ಅಗ್ರೆಸ್ಸಿವ್ ಕ್ಯಾಪ್ಟನ್ ಕೊಹ್ಲಿಯ ಕೂಲ್ ಡ್ಯಾನ್ಸ್​ಗೆ ಫ್ಯಾನ್ಸ್ ಫಿದಾ appeared first on News First Kannada.

Source: newsfirstlive.com

Source link