ಅಚ್ಚರಿ ಘಟನೆ! ಪುನೀತ್ ರಾಜ್​ಕುಮಾರ್ ಸಮಾಧಿಗೆ ಪ್ರದಕ್ಷಿಣೆ ಹಾಕಿದ ಕೋಳಿ | A hen circles over Puneeth Rajkumar grave in Kanteerava Stadium Bengaluru


ಪುನೀತ್ ರಾಜ್​ಕುಮಾರ್ ಅಗಲಿ 15ಕ್ಕೂ ಹೆಚ್ಚು ದಿನಗಳು ಕಳೆದಿವೆ. ಪುಣ್ಯ ಭೂಮಿ ದರ್ಶನಕ್ಕೆ ಇನ್ನೂ ಅಭಿಮಾನಿಗಳು ಸಾಲು ಸಾಲಾಗಿ ಬರುತ್ತಿದ್ದಾರೆ. ಸಮಾಧಿ ಕಂಡು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ಇದರ ನಡುವೆ ಮತ್ತೊಂದು ಅಚ್ಚರಿಯ ಘಟನೆ ನಡೆದಿದೆ. ಅಪ್ಪು ಸಮಾಧಿ ಬಳಿ ಕೋಳಿಯೊಂದು ಪ್ರದಕ್ಷಿಣೆ ಹಾಕಿರುವ ವಿಸ್ಮಯಕಾರಿ ಘಟನೆ ನಡೆದಿದೆ. ನಾಟಿ ಕೋಳಿ ಅಪ್ಪು ಸಮಾಧಿಗೆ ಪ್ರದಕ್ಷಿಣೆ ಹಾಕಿದೆ. ಪುನೀತ್ ಸಮಾಧಿ ಬಳಿ ಹುಳು ಹುಪ್ಪಟೆ ಮೇಯುತ್ತಾ ಬಂದ ಕೋಳಿ, ಬಳಿಕ ಪುನೀತ್ ಸಮಾಧಿಗೆ ಸಂಪೂರ್ಣ ಪ್ರದಕ್ಷಿಣೆ ಹಾಕಿ ತೆರಳಿದೆ. ಇಂದು ಬೆಂಗಳೂರಿನ ಅರಮನೆ‌ ಮೈದಾನ ಗಾಯತ್ರಿ ವಿಹಾರ್​ನಲ್ಲಿ ಅಪ್ಪು ನುಡಿ ನಮನ ಕಾರ್ಯಕ್ರಮ ನಡೆಯಲಿದೆ. ಎರಡೂವರೆ ಸಾವಿರ ಜನರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಬಿಸಿ ಬೆಳೆಬಾತ್, ಬಜ್ಜಿ ,ಮದ್ದೂರು ಒಡೆ ಸಿದ್ಧಪಡಿಸಲಾಗಿದೆ. ಎಂಐಪಿ, ವಿವಿಐಪಿ, ವಿಐಪಿಗಳಿಗೆ ಪ್ರತ್ಯೇಕ ಜಾಗದಲ್ಲಿ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಸುಮಾರು ನೂರಕ್ಕೂ ಹೆಚ್ಚು ಜನರಿಂದ ಉಪಹಾರವನ್ನು ಸಿದ್ಧಪಡಿಸಿದ್ದಾರೆ.

TV9 Kannada


Leave a Reply

Your email address will not be published.