ಬಳ್ಳಾರಿ: ಅಚ್ಛೇದಿನ್, ಅಚ್ಛೇದಿನ್ ಎಂದು ಹೇಳಿಕೊಂಡೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನರಿಗೆ ಟೋಪಿ ಹಾಕಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ಗಣಿ ನಾಡು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರೂ ಸಹ ಜನರಿಗೆ ಕಷ್ಟಗಳು ತಪ್ಪಲಿಲ್ಲ.

ಸಂಡೂರಿನಲ್ಲಿ ಶಾಸಕ ತುಕಾರಾಂ ಅವರು ಆಯೋಜಿಸಿದ್ದ ಜನತೆಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ ಅವರು, ಸತತವಾಗಿ ಗಗನಕ್ಕೇರುತ್ತಿರುವ ಪೆಟ್ರೋಲ್ ಬೆಲೆಗಳ ಬಗ್ಗೆ ಪ್ರಸ್ತಾಪಿಸಿ, ಪೆಟ್ರೋಲ್‍ಗೆ ರೂ.31.84 ಪೈಸೆ ಕೇಂದ್ರ ಸರಕಾರ ತೆರಿಗೆ ವಿಧಿಸುತ್ತಿದೆ. ಅದೇ ರೀತಿಯಲ್ಲಿ ರಾಜ್ಯ ಸರ್ಕಾರ ರೂ. 37.98 ಪೈಸೆ ವಿಧಿಸುತ್ತಿದೆ. ಕೇಂದ್ರ ರಾಜ್ಯ ಸರ್ಕಾರಗಳ ತೆರಿಗೆ ಫಲವಾಗಿ ಇಂದು ಪೆಟ್ರೋಲ್ ಬೆಲೆ ರೂ.100ಕ್ಕೂ ಹೆಚ್ಚಾಗಿವೆ. ಪಕ್ಕದ ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ರೂ.57 ಇದೆ ಎಂದರು.

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಟ್ರಾಕ್ಟರ್, ಆಟೋ ಡ್ರೈವರ್, ಬೈಕ್ ಇಟ್ಟುಕೊಂಡಿರುವವರ ಕಥೆ ಏನು, ಇಷ್ಟೊಂದು ಬೆಲೆಗಳು ಏರಿಕೆಯಾದರೆ ಹೇಗೆ? ಗ್ಯಾಸ್ ಸಿಲಿಂಡರ್ ಬೆಲೆಗಳ ಸಹ ಗಗನಕ್ಕೇರಿದೆ. ಹೀಗಾದರೆ ಜನರು ಜೀವಿಸುವುದು ಹೇಗೆ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಕಾಗದ ರಹಿತ ವಿಧಾನ ಪರಿಷತ್ತಿಗೆ ಶೀಘ್ರ ಕ್ರಮ: ಸಭಾಪತಿ ಹೊರಟ್ಟಿ

The post ಅಚ್ಛೇದಿನ್, ಅಚ್ಛೇದಿನ್ ಹೇಳ್ಕೊಂಡೆ ಪ್ರಧಾನಿ ದೇಶದ ಜನತೆಗೆ ಟೋಪಿ ಹಾಕ್ತಿದ್ದಾರೆ: ಸಿದ್ದರಾಮಯ್ಯ appeared first on Public TV.

Source: publictv.in

Source link