ಬಾಲಿವುಡ್ ನಟ ಅಜಯ್ ದೇವಗನ್ ಅಯ್ಯಪ್ಪನ ಮಾಲಾಧಾರಿಯಾಗಿ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮಾಲಾಧಾರಿಯಾಗಿ 41 ದಿನಗಳ ವ್ರತವನ್ನೂ ಪೂರೈಸಿದ ನಂತರ ಅಜಯ್ ಶಬರಿಮಲೆಗೆ ದೇವಸ್ಥಾನಕ್ಕೆ ತೆರಳಿದ್ದಾರೆ. ಇತ್ತೀಚೆಗಷ್ಟೇ ಅಜಯ್ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಧರಿಸುವ ಕಪ್ಪು ಬಣ್ಣದ ಬಟ್ಟೆ ತೊಟ್ಟು ನಡೆದುಕೊಂಡು ಬರುವ ವಿಡಿಯೋವೊಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇನ್ನು ಶಬರಿಮಲೆಗೆ ತೆರಳುವ ಆಯ್ಯಪ್ಪ ಸ್ವಾಮಿ ಭಕ್ತರು ಕಡ್ಡಾಯವಾಗಿ ಪಾಲಿಸುವ ನಿಯಮಗಳನ್ನು ಕೂಡ ಅಜಯ್ ಪಾಲಿಸಿದ್ದಾರೆ. ಸದ್ಯ ಅಜಯ್ ದೇವಗನ್ ಶಬರಿಮಲೆಗೆ ಭೇಟಿ ನೀಡಿ ಆಯ್ಯಪ್ಪ ಸ್ವಾಮಿಯ ದರ್ಶನ ಪಡೆದಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅಜಯ್ ದೇವಗನ್ ನಟನೆಯ ‘ಥ್ರಿಬಲ್ ಆರ್’ ಸಿನಿಮಾ ಇದೇ ಜನವರಿ 7 ರಂದು ರಿಲೀಸ್ ಆಗಬೇಕಿತ್ತು. ಆದರೆ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವ ಕಾರಣ ಚಿತ್ರತಂಡ ಚಿತ್ರದ ರಿಲೀಸ್ ದಿನಾಂಕವನ್ನು ಮುಂದೂಡಿಕೆ ಆಗಿದೆ.
View this post on Instagram
The post ಅಜಯ್ ದೇವಗನ್ ಕಪ್ಪು ಬಟ್ಟೆ ಧರಿಸಿ, ಬೆರಗುಗೊಳಿಸೋ ನೋಟ ಬೀರಿದ ರಹಸ್ಯ ಏನು ಗೊತ್ತಾ..? appeared first on News First Kannada.