ಅಜಾಗರೂಕ ಚಾಲನೆ: ಸ್ಯಾಂಡಲ್ವುಡ್ ನಟಿ ತಾರಾ ಕಾರು ಚಾಲಕನ ವಿರುದ್ಧ ಎಫ್​ಐಆರ್ – FIR Has been register against Actress Tara car driver In Bengaluru


ಅಕ್ಟೋಬರ್ 29 ರಂದು ತಾರಾ ಅವರು ಬೆಂಗಳೂರಿನ ಕತ್ರಿಗುಪ್ಪೆ ಬಳಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅಕ್ಷಯ್ ಅವರು ಕಾರು ಓಡಿಸುತ್ತಿದ್ದರು. ಆಗ ತಾರಾ ಅವರ ಕಾರು ಮುಂಭಾಗ ಚಲಿಸ್ತಿದ್ದ ಮತ್ತೊಂದು ಕಾರಿಗೆ ಗುದ್ದಿದೆ.

ನಟಿ ತಾರಾ (Actress Tara) ಅವರು ಸ್ಯಾಂಡಲ್​​ವುಡ್​ನಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಪೋಷಕ ಪಾತ್ರಗಳ ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ. ಅವರು ಈ ಮೊದಲು ಎಂಎಲ್​ಸಿ ಆಗಿಯೂ ಸೇವೆ ಸಲ್ಲಿಸಿದ್ದರು. ಈಗ ತಾರಾ ಕಾರು ಚಾಲಕನ ಹೆಸರು ವಿವಾದದಲ್ಲಿ ಸಿಲುಕಿಕೊಂಡಿದೆ. ಅಜಾಗರೂಕತನದಿಂದ ತಾರಾ ಅವರ ಕಾರು ಚಾಲಕ ಅಕ್ಷಯ್ ಅಪಘಾತ ಮಾಡಿದ್ದಾರೆ. ಅಕ್ಷಯ್ ವಿರುದ್ಧ ಈಗ ಕೇಸ್ ದಾಖಲಾಗಿದೆ.

ಅಕ್ಟೋಬರ್ 29 ರಂದು ತಾರಾ ಅವರು ಬೆಂಗಳೂರಿನ ಕತ್ರಿಗುಪ್ಪೆ ಬಳಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅಕ್ಷಯ್ ಅವರು ಕಾರು ಓಡಿಸುತ್ತಿದ್ದರು. ಆಗ ತಾರಾ ಅವರ ಕಾರು ಮುಂಭಾಗ ಚಲಿಸ್ತಿದ್ದ ಮತ್ತೊಂದು ಕಾರಿಗೆ ಗುದ್ದಿದೆ. ಪರಿಣಾಮ ಎದುರಿನ ಕಾರು ಜಖಂಗೊಂಡಿತ್ತು. ಈ ಅಪಘಾತದಲ್ಲಿ ಅಕ್ಷಯ್ ಅವರದ್ದೇ ತಪ್ಪು ಎನ್ನಲಾಗಿದೆ. ಅಕ್ಷಯ್ ಅವರ ಅಜಾಗರೂಕ ಚಾಲನೆಯಿಂದ ಈ ರೀತಿ ಆಗಿದೆ ಎಂದು ಎದುರಿನ ಕಾರಿನಲ್ಲಿದ್ದ ಗಿರೀಶ್ ಅವರು ಆರೋಪಿಸಿದ್ದರು.

TV9 Kannada


Leave a Reply

Your email address will not be published.