ಬೆಂಗಳೂರು: ಕೃಷ್ಣ ಅಜಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮ ಪಂಚತಾರಾ ಹೋಟೆಲ್ ನಲ್ಲಿ ಇತ್ತೀಚೆಗೆ ನೆರವೇರಿತು. 

ವರ್ಣರಂಜಿತವಾಗಿ ನಡೆದ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಈ ಹಿಂದೆ ಅಜಯ್ ರಾವ್ ಅವರ ಜೊತೆ ಕೃಷ್ಣ ಸೀರೀಸ್ ನಲ್ಲಿ ಚಿತ್ರಗಳನ್ನು ಮಾಡಿದ ನಿರ್ಮಾಪಕರು ಹಾಗೂ ನಿರ್ದೇಶಕರು ಭಾಗವಹಿಸಿದ್ದರು.

ನೈಟಿ ಮಾತ್ರ ಹಾಕೋಬೇಡ ಮೇನಕಾ: ಯೂಟ್ಯೂಬ್‌ನಲ್ಲಿ ಕಿಕ್ಕೇರಿಸುತ್ತಿದೆ ಐಟಂ ಸಾಂಗ್!

ವಿಜಯಾನಂದ್ (ಆನಂದಪ್ರಿಯ) ಅವರ ನಿರ್ದೇಶನದ ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದಾಗಿದ್ದು, ಹಾಡುಗಳು ಹಾಗೂ ಟೀಸರ್, ಟ್ರೇಲರ್ ಮೂಲಕ ಪೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.  

ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಗೋವಿಂದರಾಜು ಒಮ್ಮೆ ನಿರಂತ್ ಕಥೆ ಬಗ್ಗೆ ಹೇಳಿದರು. ಅವರ ಮೂಲಕ ಆನಂದಪ್ರಿಯ ಮೀಟ್ ಆಗಿ ಕಥೆ ಕೇಳಿದಾಗ ಈ ಸಿನಿಮಾ ನಾನೇ ಮಾಡಬೇಕು ಎಂದು ಆರಂಭಿಸಿದೆ. 

ಅಲ್ಲದೆ ಈ ಚಿತ್ರ ಇಲ್ಲೀವರೆಗೆ ಬರಲು ನಾನೊಬ್ಬನೇ ಕಾರಣನಲ್ಲ, ಆರ್ ಕೆ ಟಾಕೀಸ್ ನ  ಕೃಷ್ಣ ಸೇರಿದಂತೆ ಇತರರೆಲ್ಲ ಕೈಜೋಡಿಸಿದ್ದರಿಂದ ಕಂಪ್ಲೀಟ್ ಆಗಿದೆ. ಕೋವಿಡ್ ನಿಂದ ಸ್ವಲ್ಪ ಲೇಟಾದರೂ ಲೇಟೆಸ್ಟಾಗಿ ಬರುತ್ತಿದೇವೆ ಎಂದರು.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More