ಅಟ್ಟಾಡಿಸಿ ಕೊಲೆ.. 7 ಸಿಸಿಟಿವಿ ಇದ್ರೂ ನೋ ಯೂಸ್​: ರೇಖಾ ಹತ್ಯೆಗೆ ಪಕ್ಕಾ ಪ್ಲ್ಯಾನ್ ಮಾಡಿದ್ದ ಹಂತಕರು

ಅಟ್ಟಾಡಿಸಿ ಕೊಲೆ.. 7 ಸಿಸಿಟಿವಿ ಇದ್ರೂ ನೋ ಯೂಸ್​: ರೇಖಾ ಹತ್ಯೆಗೆ ಪಕ್ಕಾ ಪ್ಲ್ಯಾನ್ ಮಾಡಿದ್ದ ಹಂತಕರು

ಬೆಂಗಳೂರು: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರನ್ನ ಇಂದು ಹಾಡಹಗಲೇ ಪಕ್ಷದ ಕಚೇರಿಯ ಬಳಿಯೇ ದುಷ್ಕರ್ಮಿಗಳು ಕೊಲೆಗೈದಿದ್ದಾರೆ. ಕೊಲೆಗೂ ಮುನ್ನ ಆರೋಪಿಗಳು ಪಕ್ಕಾ ಪ್ಲ್ಯಾನ್​ ಮಾಡಿಯೇ ದಾಳಿ ನಡೆಸಿದ್ದರು ಎಂಬುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸಿಸಿಟಿವಿ ಟರ್ನ್​​​ ಮಾಡಿ ಕೃತ್ಯ
ನಗರದ ಛಲವಾದಿಪಾಳ್ಯದ ಬಿಜೆಪಿ ಕಚೇರಿಯ ಬಳಿ ರೇಖಾ ಕದಿರೇಶ್​ ಅವರ ಕೊಲೆ ನಡೆದಿದೆ. ಕೃತ್ಯಕ್ಕೂ ಮುನ್ನ ಆರೋಪಿಗಳು ಸ್ಥಳದ ಸುತ್ತಮುತ್ತಲೂ ಇದ್ದ ಎಲ್ಲಾ ಸಿಸಿ ಕ್ಯಾಮೆರಾಗಳನ್ನು  ಬೇರೆಡೆ ತಿರುಗಿಸಿದ್ದಾರೆ. ಆ ಮೂಲಕ ಯಾವುದೇ ಸಿಸಿಟಿವಿ ಕ್ಯಾಮೆರಾದಲ್ಲೂ ಕೃತ್ಯ ಸೆರೆಯಾಗದಂತೆ ಮಾಡಿದ್ದಾರೆ. ಸ್ಥಳದಲ್ಲಿ 7ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳಿದ್ದರೂ ಪ್ರಯೋಜನವಾಗಿಲ್ಲ. ಸದ್ಯ ಆರೋಪಿಗಳ ಕೃತ್ಯದ ಬಗ್ಗೆ ಯಾವುದೇ ಸುಳಿವು ಪೊಲೀಸರಿಗೆ ಸಿಗದಂತಾಗಿದೆ.

ಅಟ್ಟಾಡಿಸಿ ಕೊಲೆಗೈದು ಎಸ್ಕೇಪ್​
ಇಂದು ಬೆಳಗ್ಗೆ 9 ಗಂಟೆ ವೇಳೆಗೆ ಅಂಜನಪ್ಪ ಗಾರ್ಡನ್ ಬಳಿ ಇದ್ದ ಬಿಜೆಪಿ ಕಚೇರಿಯಲ್ಲಿ ಬಡವರಿಗೆ ಫುಡ್​ ಕಿಟ್​ ವಿತರಣೆ ಮಾಡಲು ರೇಖಾ ಅವರು ಆಗಮಿಸಿದ್ದರು. ಫುಡ್ ಕಿಟ್ ವಿತರಿಸಲು ಬೇಕಾದ ಪಟ್ಟಿಯನ್ನು ಸಿದ್ಧಪಡಿಸಿ ಜನರನ್ನು ಕರೆಯಲು ಕಚೇರಿಯಿಂದ ಹೊರ ಬಂದಿದ್ದರು. ಆದರೆ ಜನರು ಸೇರಬೇಕು ಎನ್ನುವ ವೇಳೆ ಆರೋಪಿಗಳು ದಾಳಿ ನಡೆಸಿದ್ರು ಎನ್ನಲಾಗಿದೆ.

ಬೆಳಗ್ಗೆ 9:45ರ ವೇಳೆಗೆ ಮೂರು ಜನರ ನಟೋರಿಯಸ್​​ ಗ್ಯಾಂಗ್​ ರೇಖಾ ಕದಿರೇಶ್ ಅವರ ಮೇಲೆ ಡ್ಯಾಗರ್​​ನಿಂದ ಅಟ್ಯಾಕ್ ಮಾಡಿದೆ. ತಮ್ಮ ಮೇಲೆ ದಾಳಿ ನಡೆಯುತ್ತಿರುವ ಮುನ್ಸೂಚನೆ ಲಭಿಸುತ್ತಿದಂತೆ ರೇಖಾ ಅವರು ಕಚೇರಿಯ ಒಳಹೋಗಲು ಯತ್ನಿಸಿದ್ದಾರೆ. ಆದರೆ ಹಂತಕರು ಅವರನ್ನು ಅಟ್ಟಾಡಿಸಿಕೊಂಡು ಬಂದಿದ್ದು, ಈ ವೇಳೆ ರೇಖಾ ನೆಲಕ್ಕೆ ಉರುಳಿ ಬಿದ್ದಿದ್ದಾರೆ. ಬಳಿಕ ರೇಖಾ ಅವರ ಮೇಲೆ ಆರೋಪಿಗಳು ಡ್ಯಾಗರ್ನಿಂದ ಕತ್ತು, ಎದೆ ಹಾಗೂ ಹೊಟ್ಟೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ರೇಖಾ ಅವರು ಹಲ್ಲೆಯಿಂದ ನಿತ್ರಾಣರಾಗುತ್ತಿದಂತೆ ಆರೋಪಿಗಳು ಡಿಯೋ ಹಾಗೂ ಹೊಂಡ ಬೈಕ್ನಲ್ಲಿ ಎಸ್ಕೇಪ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಇಷ್ಟೆಲ್ಲಾ ನಡೆಯುವ ವೇಳೆ ಸ್ಥಳದಲ್ಲಿದ್ದ ಜನರು ಹೆದರಿಕೆಯಿಂದ ಮನೆ ಸೇರಿಕೊಂಡಿದ್ದರು. ಆರೋಪಿಗಳು ಸ್ಥಳದಿಂದ ಪರಾರಿಯಾದ ಮೇಲೆ ಕೆಲ ಸ್ಥಳೀಯರು ರೇಖಾ ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ರು. ಆದರೆ ಚಿಕಿತ್ಸೆ ಫಲಿಸದೇ ರೇಖಾ ಕೊನೆಯುಸಿರೆಳೆದಿದ್ದಾರೆ.

The post ಅಟ್ಟಾಡಿಸಿ ಕೊಲೆ.. 7 ಸಿಸಿಟಿವಿ ಇದ್ರೂ ನೋ ಯೂಸ್​: ರೇಖಾ ಹತ್ಯೆಗೆ ಪಕ್ಕಾ ಪ್ಲ್ಯಾನ್ ಮಾಡಿದ್ದ ಹಂತಕರು appeared first on News First Kannada.

Source: newsfirstlive.com

Source link