ಅಟ್ಟಿಕಾ ಗೋಲ್ಡ್ ಅಂಗಡಿಯಲ್ಲಿ ಚಿನ್ನ ಖರೀದಿ ಮಾಡಿ ತೆರಳುತ್ತಿದ್ದ ವ್ಯಕ್ತಿಯಿಂದ 5 ಕೆಜಿ ಚಿನ್ನದ ಗಟ್ಟಿ ಸುಲಿಗೆ, ಗ್ಯಾಂಗ್ ಅರೆಸ್ಟ್
ಬೆಂಗಳೂರು: ಹಲಸೂರು ಗೇಟ್ ಪೊಲೀಸರು 5 ಕೆಜಿ ಚಿನ್ನದ ಗಟ್ಟಿ ಸುಲಿಗೆ ಮಾಡಿದ್ದ ಗ್ಯಾಂಗ್ ಅನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳು ನವೆಂಬರ್ 19ರಂದು ಅಟ್ಟಿಕಾ ಗೋಲ್ಡ್ ನಲ್ಲಿ ಚಿನ್ನ ಖರೀದಿ ಮಾಡಿ ತೆರಳುತ್ತಿದ್ದ ಸಿದ್ದೇಶ್ವರ್ ಎಂಬುವವರ ಬಳಿ ಚಿನ್ನ ಸುಲಿಗೆ ಮಾಡಿದ್ದರು. 7 ಆರೋಪಿಗಳನ್ನು ಬಂಧಿಸಿ, 4 ಕೆಜಿ 984 ಗ್ರಾಂ ಚಿನ್ನವನ್ನು ಬೆಂಗಳೂರಿನ ಹಲಸೂರು ಗೇಟ್ ಪೊಲೀಸರು ಜಪ್ತಿ ಮಾಡಿದ್ದಾರೆ.
ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಚಿನ್ನ ತೆಗೆದುಕೊಂಡು ಹೋಗ್ತಿದ್ದ ಸಿದ್ದೇಶ್ವರ್ ಅವರಿಗೆ ಹಲಸೂರು ಗೇಟ್ ರಾಜ್ ಹೊಟೇಲ್ ಬಳಿ ಮಚ್ಚು ತೋರಿಸಿ ಚಿನ್ನ ದೋಚಿದ್ದರು. ಅಟ್ಟಿಕಾ ಗೋಲ್ಡ್ ಸೆಕ್ಯೂರಿಟಿ ಕೊಟ್ಟ ಸುಳಿವಿನ ಮೇರೆಗೆ ಗ್ಯಾಂಗ್ ಬಂಧನವಾಗಿತ್ತು.