ಅಡುಗೆ ಮನೆಯನ್ನು ನೀಟ್​ಆಗಿ ಇರಿಸಿಕೊಳ್ಳಲು ಹೀಗೆ ಮಾಡಿ | Here is the simple tips to maintain kitchen


ಅಡುಗೆ ಮನೆಯನ್ನು ನೀಟ್​ಆಗಿ ಇರಿಸಿಕೊಳ್ಳಲು ಹೀಗೆ ಮಾಡಿ

ಸಾಂಕೇತಿಕ ಚಿತ್ರ

ಸಾಮಾನ್ಯವಾಗಿ ಹೆಂಗಳೆಯರ ನೆಚ್ಚಿನ ತಾಣ ಅಡುಗೆ ಮನೆ (Kitchen). ಅಡುಗೆ ಮನೆಯಲ್ಲಿ ರುಚಿರುಚಿಯಾದ ಅಡುಗೆ ತಯಾರಿಸಿ ಪ್ರೀತಿ ಪಾತ್ರರಿಗೆ ಬಡಿಸುವುದು ಎಲ್ಲರಿಗೂ ಇಷ್ಟ ಆದರೆ ಅದೇ ರೀತಿ ಅಡುಗೆ ಮನೆಯನ್ನು ನೀಟ್​ (Neat) ಆಗಿ ಇಟ್ಟುಕೊಳ್ಳುವುದು ಕೂಡ ಅಷ್ಟೇ ಸವಾಲಿನ ಕೆಲಸವಾಗಿರುತ್ತದೆ. ಚಿಕ್ಕ ಅಡುಗೆಮನೆಯಾಗಿದ್ದರೂ ಎಲ್ಲ ವಸ್ತುಗಳನ್ನು ಒಪ್ಪವಾಗಿ ಇಟ್ಟುಕೊಳ್ಳುವುದೂ ಒಂದು ಕಲೆ. ಅಡುಗೆ ಮಾಡುವಾಗ ಬೇಕಾದ ವಸ್ತುಗಳು ತಕ್ಷಣ ಕಣ್ಣಿಗೆ ಕಂಡರೆ ಸಮಸ್ಯೆ ಇರುವುದಿಲ್ಲ. ಇಲ್ಲವಾದರೆ ಮತ್ತೆ ಗೊಂದಲಗಳು ಉಂಟಾಗುತ್ತದೆ. ಹೀಗಾಗಿ ನಿಮ್ಮ ಅಡುಗೆ ಮನೆಯ ವಸ್ತುಗಳನ್ನು ಸರಿಯಾಗಿ ಜೋಡಿಸಿಟ್ಟುಕೊಳ್ಳಿ. ಅದಕ್ಕಾಗಿ ನಿಮಗೆ ಇಲ್ಲಿದೆ ಸಿಂಪಲ್​ ಟಿಪ್ಸ್​(Simple Tips).

ವಸ್ತುಗಳನ್ನು ತೂಗುಹಾಕಿ:
ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಜಾಗ ಚಿಕ್ಕದಾಗಿರುತ್ತದೆ. ಹೀಗಿದ್ದಾಗ ಇದ್ದ ಜಾಗದಲ್ಲಿಯೇ ಎಲ್ಲಾ ವಸ್ತುಗಳನ್ನು  ಸರಿಯಾಗಿ ಜೋಡಿಸಿಟ್ಟುಕೊಳ್ಳುವುದು ಮುಖ್ಯ. ಆದ್ದರಿಂದ ಸೌಟು ಹಾಗೂ ಇನ್ನಿತರ ವಸ್ತುಗಳನ್ನು ಗೋಡೆಗೆ ತೂಗುಹಾಕಿ ಇದರಿಂದ ನಿಮಗೆ ಹೆಚ್ಚು ಜಾಗ ಸಿಗುತ್ತದೆ.

ಹಣ್ಣುಗಳನ್ನು ಸರಿಯಾಗಿ ಜೋಡಿಸಿ:
ಮಾರುಕಟ್ಟೆಯಿಂದ ತಂದ ಹಣ್ಣುಗಳನ್ನು ಮೊದಲು ಸ್ವಚ್ಛವಾಗಿ ತೊಳೆದು, ಪ್ರಿಡ್ಜ್​ನಲ್ಲಿ ಜೋಡಿಸಿಕೊಳ್ಳಿ, ಬಾಳೆಹಣ್ಣಿನಂತಹವುಗಳು ಹೆಚ್ಚು ದಿನ ಉಳಿಯುವುದಿಲ್ಲ. ಹೀಗಾಗಿ ಅದನ್ನು ನೀಟಾಗಿ ಜೋಡಿಸಿಡಿ. ಹಾಳಾಗುವ ಮೊದಲು ಸೇವಿಸಿ. ಬಾಳೆಹಣ್ಣು ಬೇಗನೆ ಹಣ್ಣಾಗಲು ಪೇಪರ್​ ಬ್ಯಾಗ್​ನಲ್ಲಿ ಕಟ್ಟಿಡಿ.

ಮೊಟ್ಟೆಯ ಚಿಪ್ಪುಗಳ ನಿರ್ವಹಣೆ:
ನಿಮ್ಮ ಕಯಗಳು ಒದ್ದೆಯಾಗಿದ್ದೆ ಮೊಟ್ಎಯ ಚಿಪ್ಪುಗಳು ಕೈಗೆ ಅಂಟಿಕೊಳ್ಳುತ್ತವೆ. ಹೀಗಾಘಿ ಅದನ್ನು ತಡೆಯಲು, ಕಯಗಳನ್ನು ಒಣಗಿಸಿ ಮೊಟ್ಟೆಯನ್ನು ಬಳಸಿ. ಕೇಕ್​ ಹಾಗೂ ಇನ್ನಿತರ ಮೊಟ್ಟೆಯ ಆಹಾರಗಳನ್ನು ತಯಾರಿಸುವಾಗ ಅಡುಗೆಮನೆಯಲ್ಲಿ ಬೀಳದಂತೆ ಎಚ್ಚರವಹಿಸಿ

ತಾಜಾ ಚಟ್ನಿಗಳನ್ನು ತಯಾರಿಸಿಕೊಳ್ಳಿ:
ಭಾರತದಲ್ಲಿ ಸಾಮಾನ್ಯವಾಗಿ ಹಸಿರು ಚಟ್ಇನಗಳ ಬಳಕೆ ಹೆಚ್ಚು. ಅದಷ್ಟು ಅದನ್ನು ತಾಜಾವಾಗಿ ತಯಾರಿಸಿಕೊಳ್ಳಿ. ಉದಾಹರಣೆಗೆ ಕೊತ್ತಂಬರಿ ಸೊಪ್ಪಿನ ಚಟ್ನಿ, ಶುಂಠಿ, ಬೆಳ್ಳಿ ಪೇಸ್ಟ್​ ಸೇರಿದಂತೆ ಇನ್ನಿತರ  ಪೇಸ್ಟ್​ಗಳನ್ನು ತಾಜಾವಾಗಿ ತಯಾರಿಸಿಕೊಳ್ಳಿ ಇದರಿಂದ ಹಾಳಾದ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬಹುದು.

ಚೀಸ್​ ಬಳಕೆಯ ವೇಳೆ ಸ್ವಚ್ಛತೆ ಕಾಪಾಡಿಕೊಳ್ಳಿ:
ನೀವು ಚೀಸ್​ ಪ್ರಿಯರಾಗಿದ್ದರೆ ಅದನ್ನು ತುರಿಯುವಾಗ  ತುರಿಯುವ ಮಣೆಗೆ ಸಿಲುಕಿಕೊಳ್ಳಬಹುದು. ಹೀಗಾಗಿ ಅದನ್ನು ಸ್ವಚ್ಛವಾಗಿರಿಸಿಕೊಳ್ಳಿ. ಅದಕ್ಕೆ ಚೀಸ್​ ಅನ್ನು ತುರಿಯುವ ಮೊದಲು ಸ್ವಲ್ಪ ಎಣ್ಣೆ ಸವರಿಕೊಳ್ಳಿ. ಚೀಸ್​ನಅ್ನು ತುರಿಯುವ ಬದಲು ಸಣ್ಣದಾಗಿ ಕತ್ತರಿಸಿಕೊಳ್ಳಿ. ಇದರಿಂದ ಪಾತ್ರೆಗಳು ಕೊಳೆಯಾಗುವುದನ್ನು ತಪ್ಪಿಸಬಹುದು.

TV9 Kannada


Leave a Reply

Your email address will not be published. Required fields are marked *