ದೆಹಲಿಯ ಶಹದಾರದ ಸೀಮಾಪುರಿ ಪ್ರದೇಶದಲ್ಲಿ ದಾರುಣ ಘಟನೆಯೊಂದು ನಡೆದಿದೆ. ನಿವಾಸದ ಕೋಣೆಯಲ್ಲಿ ಇಟ್ಟಿದ್ದ ಸ್ಟೌನಿಂದ ಬಂದ ವಿಷಕಾರಿ ಹೊಗೆ ದೇಹ ಸೇರಿದ ಪರಿಣಾಮ 30 ವರ್ಷದ ಮಹಿಳೆ ಮತ್ತು ಆಕೆಯ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸೀಮಾಪುರಿಯಲ್ಲಿರುವ ಬಿಲ್ಡಿಂಗ್ ಒಂದರ ಐದನೇ ಮಹಡಿಯಲ್ಲಿ ಇವರ ರೂಮ್ ಇತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿ ಮಹಿಳೆ ಮತ್ತು ನಾಲ್ವರು ಮಕ್ಕಳು ಮಲಗಿರುವ ವಿಚಾರ ಗೊತ್ತಾಗುತ್ತಿದ್ದಂತೆ ಪೊಲೀಸರು ಅಲ್ಲಿಗೆ ದೌಡಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮಹಿಳೆ ಮತ್ತು ಅವರ ಮೂವರು ಮಕ್ಕಳು ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ. ನಾಲ್ಕನೇಯ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಮೃತಪಟ್ಟಿದ್ದಾರೆಂದು ಎಂದು ಘೋಷಣೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ ಅಂತಾ ವರದಿಯಾಗಿದೆ.
ಮೋಹಿತ್ ಕಾಲಿಯಾ (35) ಮತ್ತು ಅವನ ಹೆಂಡತಿ ರಾಧಾ ದಂಪತಿ ಅಲ್ಲಿ ವಾಸವಾಗಿದ್ದರು. ಈ ದಂಪತಿಗೆ ನಾಲ್ವರು ಮಕ್ಕಳಿದ್ದರು. ಅವರಲ್ಲಿ ಇಬ್ಬರು ಹೆಣ್ಮಕ್ಕಳು ಇದ್ದು, ಇವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ದುರಂತಕ್ಕೆ ಕಾರಣ ಏನು..?
ಬಾಡಿಗೆಗೆ ಇದ್ದ ರೂಮ್ ತುಂಬಾ ಚಿಕ್ಕದಾಗಿತ್ತು. ಗಾಳಿ ಕೂಡ ಹೊರಗೆ ಹೋಗುತ್ತಿರಲಿಲ್ಲ. ವಿಪರೀತ ಚಳಿ ಹಿನ್ನೆಲೆಯಲ್ಲಿ ಕೊಣೆಯೊಳಗೆ ಸ್ಟೌನಿಂದ ಬೆಂಕಿ ಹೊತ್ತಿಸಿ ಇಡಲಾಗಿತ್ತು. ಆದರೆ ಸ್ಟೌನಿಂದ ಬಂದ ಹೊಗೆ ರೂಮ್ ತುಂಬಾ ಸೇರಿಕೊಂಡ ಪರಿಣಾಮ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.