ಅಡ್ವೊಕೇಟ್ ಜನರಲ್ ಎಪಿಎಸ್ ಡಿಯೋಲ್ ರಾಜೀನಾಮೆ ಅಂಗೀಕರಿಸಿದ ಪಂಜಾಬ್ ಸಿಎಂ ಚರಣ್​​ಜಿತ್ ಚನ್ನಿ | Punjab CM Charanjit Channi accepts Advocate General APS Deol’s resignation


ಅಡ್ವೊಕೇಟ್ ಜನರಲ್ ಎಪಿಎಸ್ ಡಿಯೋಲ್ ರಾಜೀನಾಮೆ ಅಂಗೀಕರಿಸಿದ ಪಂಜಾಬ್ ಸಿಎಂ ಚರಣ್​​ಜಿತ್ ಚನ್ನಿ

ಚರಣ್​​ಜಿತ್ ಸಿಂಗ್ ಚನ್ನಿ

ಚಂಡೀಗಡ: ನವಜೋತ್ ಸಿಂಗ್ ಸಿಧು (Navjot Singh Sidhu )ಅವರು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆಯನ್ನು ಹಿಂಪಡೆದ ಕೆಲವು ದಿನಗಳ ನಂತರ, ಮುಖ್ಯಮಂತ್ರಿ  ಚರಣ್​​ಜಿತ್ ಸಿಂಗ್ ಚನ್ನಿ(Charanjit Singh Channi) ಮಂಗಳವಾರ ರಾಜ್ಯ ಸಚಿವ ಸಂಪುಟವು ಅಡ್ವೊಕೇಟ್ ಜನರಲ್ ಎಪಿಎಸ್ ಡಿಯೋಲ್  (Advocate General APS Deol) ಅವರ ರಾಜೀನಾಮೆಯನ್ನು ಅಂಗೀಕರಿಸಿದೆ ಎಂದು ಹೇಳಿದ್ದಾರೆ. ಕಳೆದ ವಾರ ಸಿಧು ಪಂಜಾಬ್ ಕಾಂಗ್ರೆಸ್ (Punjab Congress) ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆಯನ್ನು ವಾಪಸ್ ಪಡೆದ ನಂತರ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರವು ಡಿಜಿಪಿ ಐ ಪಿ ಎಸ್ ಸಹೋಟಾ ಮತ್ತು ಅಡ್ವೊಕೇಟ್ ಜನರಲ್ ಎ ಪಿ ಎಸ್ ಡಿಯೋಲ್ ಅವರನ್ನು ಬದಲಾಯಿಸಿದ ನಂತರವೇ ಅವರು ಅಧಿಕಾರವನ್ನು ಪುನರಾರಂಭಿಸುವುದಾಗಿ ಪಟ್ಟು ಹಿಡಿದಿದ್ದರು. “ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ಈ ಸೈನಿಕನು ತನ್ನ ರಾಜೀನಾಮೆಯನ್ನು ಹಿಂಪಡೆದಿದ್ದಾನೆ. ಆದರೆ ಆ ದಿನ ನಾವು ಹೊಸ ಎಜಿ ಮತ್ತು ಡಿಜಿಪಿಯನ್ನು ಪಡೆಯುತ್ತೇವೆ, ನಾನು ಅಧಿಕಾರ ವಹಿಸಿಕೊಳ್ಳುತ್ತೇನೆ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ, ”ನೀವು ಸತ್ಯದ ಹಾದಿಯಲ್ಲಿರುವಾಗ, ಹುದ್ದೆಗಳು ಮುಖ್ಯವಲ್ಲ” ಎಂದು ಅವರು ಮಾಧ್ಯಮಗಳಿಗೆ ಹೇಳಿದ್ದರು.

 

TV9 Kannada


Leave a Reply

Your email address will not be published. Required fields are marked *