ಬೆಂಗಳೂರು: ಅಣ್ಣಾಮಲೈ.. ಈ ಹೆಸರು ಕೇಳಿದ್ರೆ ಸಾಕು ಇಂದಿಗೂ ಕರ್ನಾಟಕದ ಹಲವು ಯುವಕರ ಕಿವಿ ನಿಮಿರುತ್ತೆ.. ಸೇವೆಯಲ್ಲಿ ಇದ್ದ ವೇಳೆ ಅಪಾರ ಜನಪ್ರಿಯತೆ ಗಳಿಸಿದ್ದ ಅಣ್ಣಾಮಲೈ.. ಸೈಲೆಂಟಾಗಿ ಖಾಕಿ ಕಳಚಿ ಖಾದಿ ತೊಟ್ಟರು.. ಕಳೆದ ಬಾರಿಯ ತಮಿಳುನಾಡು ವಿಧಾನ ಸಭೆ ಚುನಾವಣೆಯಲ್ಲಿ ಅಲ್ಪ ಮತದ ಅಂತರದಿಂದ ಸೋತರೂ.. ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವೀಯಾದ್ರು.. ಸದ್ಯ ಅದೇ ಅಣ್ಣಾಮಲೈ ಈಗ ತಮಿಳುನಾಡು ಬಿಜೆಪಿ ಘಟಕದ ರಾಜ್ಯಾಧ್ಯಕ್ಷರಾಗಿದ್ದಾರೆ. ಸದ್ಯ ಅವರ ಹಾದಿಯಲ್ಲೇ ಮತ್ತೊಬ್ಬ ಐಪಿಎಸ್​ ಅಧಿಕಾರಿ.. ಸಿನಿಮಾ ನಟರಿಗೂ ಕಡಿಮೆ ಇರದಷ್ಟು ಅಭಿಮಾನಿಗಳನ್ನು ಹೊಂದಿರೋ ರವಿ ಡಿ ಚೆನ್ನಣ್ಣನವರ್ ಕೂಡ ಖಾದಿ ತೊಡ್ತಾರಾ? ಅನ್ನೋ ಪ್ರಶ್ನೆ ಮೂಡುವಂಥ ಬೆಳವಣಿಗೆಗಳು ನಡೆದಿವೆ. ರಾಜ್ಯ ರಾಜಕೀಯದ ದೃಷ್ಟಿಯಿಂದ ಅತ್ಯಂತ ಪವರ್​ಫುಲ್ ಎನ್ನಲಾದ ಸಮುದಾಯದ ಪ್ರಭಾವಿ ಸ್ವಾಮೀಜಿಗಳನ್ನು, ಮಠಾಧೀಶರನ್ನು ಕಳೆದ ಕೆಲ ತಿಂಗಳಲ್ಲಿ ರವಿ ಡಿ ಚೆನ್ನಣ್ಣವರ್ ಭೇಟಿಯಾಗಿದ್ದು.. ಅವರ ಮುಂದಿನ ಹೆಜ್ಜೆ ಏನು? ಮತ್ತು ಯಾವ ಕಡೆ? ಅನ್ನೋದ್ರ ಬಗ್ಗೆ ಪ್ರಶ್ನೆ ಮೂಡಲು ಕಾರಣವಾಗಿದೆ.

ಹಾಗೆ ನೋಡಿದ್ರೆ ಅಣ್ಣಾಮಲೈ ಕರ್ನಾಟಕದಿಂದಲೇ ಗುರುತಿಸಿಕೊಂಡಂಥ ಅಧಿಕಾರಿ.. ಈಗ ಅವರಂತೆಯೇ ರಾಜ್ಯದ ಮತ್ತೊಬ್ಬ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎಂಬ ಗುಮಾನಿಗಳು ಎದ್ದಿವೆ. ಐಪಿಎಸ್​ ಅಧಿಕಾರಿ ರವಿ ಡಿ ಚೆನ್ನಣ್ಣನವರ್​ ಅಣ್ಣಾಮಲೈ ರೀತಿಯೇ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಎಂಬ ಪ್ರಶ್ನೆಗಳು ಮೂಡಿವೆ.

ಇತ್ತೀಚೆಗಿನ ರವಿ ಚೆನ್ನಣ್ಣನವರ್​ ನಡೆ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಚುನಾವಣೆಗೆ ಪದಾರ್ಪಣೆ ಮಾಡ್ತಾರೆ ಅಂತಾ ಹೇಳಲಾಗ್ತಿದೆ. ಅದಕ್ಕಾಗಿ ಐಪಿಎಸ್​ ಅಧಿಕಾರಿ ಹಲವು ಮಠಗಳ ಯಾತ್ರೆ ಕೈಗೊಂಡಿದ್ದಾರೆ. ಚಿತ್ರದುರ್ಗದ ಬಸವ ಮಾಚಿದೇವ ಮಹಾಸ್ವಾಮಿಗಳನ್ನ ಭೇಟಿ ಮಾಡಿರುವ ಚೆನ್ನಣ್ಣನವರ್, ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳ ಆಶೀರ್ವಾದವನ್ನೂ ಪಡೆದಿದ್ದಾರೆ.

ಹರಿಹರ ಪೀಠದ ವಚನಾನಂದ ಶ್ರೀಗಲು, ಬೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿವನ್ನೂ ಚೆನ್ನಣ್ಣನವರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆಯನ್ನ ರವಿಯವರು ಹೊಂದಿದ್ದಾರೆ ಎನ್ನಲಾಗ್ತಿದೆ.

ದೊಡ್ಡಬಳ್ಳಾಪುರ ಅಥವಾ ನೆಲಮಂಗಲ ಮೀಸಲು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ರವಿ ಚೆನ್ನಣ್ಣನವರ್​ ಅವರ ಮಠಗಳ ಯಾತ್ರೆಯ ಹಿಂದೆ ಇಷ್ಟೆಲ್ಲಾ ಸುದ್ದಿಗಳು ಗುಲ್ಲೆದ್ದಿವೆ. ಆದ್ರೆ, ತಮ್ಮ ರಾಜಕೀಯ ಎಂಟ್ರಿಯ ಊಹಾಪೋಹಗಳ ಬಗ್ಗೆ ಖುದ್ದಿ ಅವರೇ ಸ್ಪಷ್ಟನೆ ನೀಡಬೇಕಿದೆ.

ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ:

The post ಅಣ್ಣಾಮಲೈ ಹಾದಿಯಲ್ಲೇ ಮತ್ತೊಬ್ಬ ಸಿಂಗಂ; ಪ್ರಭಾವಿ ಮಠಾಧೀಶರ ಭೇಟಿ ಸಿಕ್ರೇಟ್ appeared first on News First Kannada.

Source: newsfirstlive.com

Source link